

ಸಣ್ಣದೊಂದು ಬಿಸಿನೆಸ್ ಕಟ್ಟಬೇಕು ಅನ್ನೋ ಆಸೆ ಇದೆ. ಆದ್ರೆ, ಎಲ್ಲೂ ಸಾಲ ಸಿಕ್ತಿಲ್ಲ ಅನ್ನೋದು ಹಲವರ ಅಳಲು. ಆದರೆ ನಿಮಗೆ ಗೊತ್ತಾ? ಕೇಂದ್ರ ಸರ್ಕಾರ ಸಣ್ಣ ಉದ್ಯಮಗಳನ್ನು ಪೋ›ತ್ಸಾಹಿಸಲು 2015ರಿಂದ ಈವರೆಗೆ ಸುಮಾರು 30 ಕೋಟಿ ಸಣ್ಣ ಉದ್ದಿಮೆದಾರರಿಗೆ ಅಂದಾಜು 15.52 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಿದೆ. 2015ರಲ್ಲಿ ಮುದ್ರಾ ಯೋಜನೆ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕೋಟ್ಯಂತರ ಸಣ್ಣ ಉದ್ದಿಮೆದಾರರು ಸಾಲ ಪಡೆದು ಬಿಸಿನೆಸ್ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಎಷ್ಟು ಸಾಲ ಸಿಗುತ್ತದೆ?: ಮುದ್ರಾ ಯೋಜನೆಯಲ್ಲಿ ಶಿಶು, ಕಿಶೋರ್, ತರುಣ್ ಎಂಬ ಮೂರು ಮಾದರಿ ಸಾಲಗಳು ಸಿಗುತ್ತವೆ. ಶಿಶು ಯೋಜನೆಯಲ್ಲಿ 50,000 ರೂ. ವರೆಗೆ ಸಾಲ , ಕಿಶೋರ್ ಯೋಜನೆಯಲ್ಲಿ 5 ಲಕ್ಷ ರೂ. ಮತ್ತು ತರುಣ್ ಯೋಜನೆಯಲ್ಲಿ 10 ಲಕ್ಷ ರೂ. ಸಾಲ ಲಭಿಸುತ್ತದೆ.
ಯಾವ್ಯಾವ ವರ್ಷ, ಎಷ್ಟೆಷ್ಟು ಸಾಲ?: 2015-16ನೇ ಹಣಕಾಸು ವರ್ಷದಲ್ಲಿ 3 ಕೋಟಿ 48 ಲಕ್ಷ ಮಂದಿ ಮುದ್ರಾ ಲೋನ್ ಪಡೆದಿದ್ದಾರೆ. 2016-17ನೇ ಸಾಲಿನಲ್ಲಿ 3 ಕೋಟಿ 97 ಲಕ್ಷ ಜನರಿಗೆ ಮುದ್ರಾ ಸಾಲದ ಅನುಕೂಲ ಸಿಕ್ಕಿದೆ. 2017-18ರಲ್ಲಿ 4 ಕೋಟಿ 81 ಲಕ್ಷ ಸಣ್ಣ ಉದ್ದಿಮೆದಾರರು ಸಾಲ ಪಡೆದು ಉದ್ಯಮಗಳನ್ನು ಕಟ್ಟಿಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ 5 ಕೋಟಿ 21 ಲಕ್ಷ ಮಂದಿಗೆ ಮುದ್ರಾ ಲೋನ್ ಲಭಿಸಿದೆ. 2019-20 ರಲ್ಲಿ 6 ಕೋಟಿ 22 ಲಕ್ಷ ಜನರಿಗೆ ಮುದ್ರಾ ಅನುಕೂಲ ಲಭಿಸಿದೆ. 2020-21ರಲ್ಲಿ 5 ಕೋಟಿ 7 ಲಕ್ಷ ಉದ್ದಿಮೆದಾರರು ಮುದ್ರಾ ಸಾಲ ಪಡೆದಿದ್ದಾರೆ. 2021-22ನೇ ಹಣಕಾಸು ವರ್ಷದಲ್ಲಿ ಈವರೆಗೆ 1 ಕೋಟಿ 18 ಲಕ್ಷ ಮಂದಿಗೆ ಯೋಜನೆಯಡಿ ಸಾಲ ಸಿಕ್ಕಿದೆ.
ಯಾರಿಗೆ ಮುದ್ರಾ ಲೋನ್ ಸಿಗುತ್ತದೆ?: ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಮುದ್ರಾ ಸಾಲ ಸಿಗುತ್ತದೆ. ಕಿರಾಣಿ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿ, ಸಣ್ಣ ಉತ್ಪಾದನಾ ಕೇಂದ್ರಗಳು, ಪೇಪರ್ ಪ್ಲೇಟ್ ಬಿಸಿನೆಸ್, ಅಡಿಕೆ ತಟ್ಟೆ ಬಿಸಿನೆಸ್, ಬ್ಯೂಟಿ ಪಾರ್ಲರ್, ಬೊಟಿಕ್, ಕೋರಿಯರ್ ಏಜೆಂಟ್, ಸೈಕಲ್ ರಿಪೇರಿ ಅಂಗಡಿ, ಬೈಕ್ ಸರ್ವೀಸ್ ಸೆಂಟರ್, ಡ್ರೖೆ ಕ್ಲೀನಿಂಗ್, ಡಿಟಿಪಿ ಸೆಂಟರ್ಗಳು, ಜೆರಾಕ್ಸ್ ಸೆಂಟರ್ಗಳು, ಟೈಲರಿಂಗ್, ಫಾರ್ಮಸಿ, ಜಿಮ್ನಾಸ್ಟಿಕ್ ಸೆಂಟರ್, ಆಯಿಲ್ ಮಿಲ್, ಫ್ಲೋರ್ ಮಿಲ್, ಜ್ಯೂಸ್ ಸೆಂಟರ್, ಐಸ್ ಕ್ರೀಂ ಸೆಂಟರ್, ಮಿಲ್ಕ್ ಬೂತ್, ಸಣ್ಣ ಹೋಟೆಲ್, ಫ್ಯಾನ್ಸಿ ಸ್ಟೋರ್, ಟ್ರಕ್ ಆಪರೇಟರ್ಗಳು, ರಿಕ್ಷಾ ಚಾಲಕರು, ಸಣ್ಣ ಗೂಡ್ಸ್ ಗಾಡಿ , ಟ್ಯಾಕ್ಸಿ ಖರೀದಿಸಲು, ಕೈಮಗ್ಗ, ಆಹಾರ ಸಂಸ್ಕರಣಾ ಘಟಕಗಳು, ಹತ್ತಿ ಗಿರಣಿ, ಹಪ್ಪಳ ತಯಾರಿಕೆ, ಕ್ಯಾಂಟೀನ್, ಉಪ್ಪಿನಕಾಯಿ ತಯಾರಿಕೆ, ಬೇಕರಿ ಮತ್ತು ಸ್ವೀಟ್ ಶಾಪ್, ಬಟ್ಟೆ ಅಂಗಡಿ, ಪ್ರಿಂಟಿಂಗ್ ಸೆಂಟರ್, ವೆಹಿಕಲ್ ಸ್ಪೇರ್ ಪಾರ್ಟ್ಸ್ ಅಂಗಡಿ, ಕರಕುಶಲ ವಸ್ತುಗಳ ತಯಾರಿಕೆ ಹೀಗೆ ಹತ್ತಾರು ಬಗೆಯ ಉದ್ದಿಮೆ ಗಳಿಕೆ ಸಾಲ ಸೌಲಭ್ಯವಿದೆ.
ಮುದ್ರಾ ಲೋನ್ ಗೆ ಮೇಲಾಧಾರ(Collateral) ಬೇಕಿಲ್ಲ: ಬಿಸಿನೆಸ್ಗಾಗಿ ಸಾಲ ಪಡೆಯುವಾಗ ಸಾಮಾನ್ಯವಾಗಿ ನೀವು ಮೇಲಾಧಾರ ಅಂದರೆ ಕೊಲ್ಯಾಟ್ರಲ್ ನೀಡಬೇಕು. ಮುದ್ರಾ ಲೋನ್ ಪಡೆಯಲು ನೀವು ಯಾವುದೇ ಮೇಲಾಧಾರ ನೀಡಬೇಕಿಲ್ಲ. ಇದಲ್ಲದೆ ಯಾವುದೇ ಸಂಸ್ಕರಣಾ ಶುಲ್ಕ ಸಹ ಮುದ್ರಾ ಸಾಲಕ್ಕಿಲ್ಲ.
ಮುದ್ರಾ ಲೋನ್ ಕೊಡಿಸಲು ಏಜೆಂಟ್ಗಳಿಲ್ಲ: ಮುದ್ರಾ ಲೋನ್ ಕೊಡಿಸುತ್ತವೆ ಎಂದು ಕೆಲ ಮಧ್ಯವರ್ತಿಗಳು, ಏಜೆಂಟ್ಗಳು ನಿಮ್ಮನ್ನು ದಾರಿತಪ್ಪಿಸಿ ಮೋಸ ಮಾಡುತ್ತಾರೆ. ನೆನಪಿರಲಿ ಮುದ್ರಾ ಲೋನ್ ಕೊಡಿಸಲು ಯಾವುದೇ ಏಜೆಂಟ್ಗಳಿಲ್ಲ. ನೀವೇ ಬಿಸಿನೆಸ್ ಪ್ಲ್ಯಾನ್ ಸಲ್ಲಿಸಿ ಈ ಸಾಲ ಪಡೆಯಬೇಕಾಗುತ್ತದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮುದ್ರಾ ಲೋನ್ ಕೋರ್ಸ್: ಸಾಲ ಸಿಕ್ಕಿದ್ರೆ ಒಂದು ಒಳ್ಳೆಯ ಬಿಸಿನೆಸ್ ಕಟ್ಟಬಹುದು ಅಂತ ಬಹಳಷ್ಟು ಜನ ಅಂದುಕೊಳ್ತಾರೆ. ಆದರೆ, ಬಹುತೇಕರಿಗೆ ಸಣ್ಣ ಉದ್ದಿಮೆಗಳನ್ನು ಕಟ್ಟಲು ಸುಲಭದಲ್ಲಿ ಮುದ್ರಾ ಲೋನ್ ಸಿಗುತ್ತೆ ಅನ್ನೋ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ಕೊರತೆ ನೀಗಿಸಲು ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮುದ್ರಾ ಲೋನ್ ಕೋರ್ಸ್ ರೂಪಿಸಲಾಗಿದೆ. ಮುದ್ರಾ ಲೋನ್ ಬಗ್ಗೆ ಸಮಗ್ರವಾದ ಅಧ್ಯಯನ ಮಾಡಿ ತಜ್ಞರ ನೆರವಿನಿಂದ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಮುದ್ರಾ ಲೋನ್ ಪಡೆಯಲು ಬಿಸಿನೆಸ್ ಮೆಸ್ ಆಗಬಯಸುವವರು ಅನುಸರಿಸಬೇಕಾದ ಕ್ರಮಗಳ ಸಮಗ್ರ ಮಾಹಿತಿ ಈ ಕೋರ್ಸ್ ನಲ್ಲಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ, ಮುದ್ರಾ ಲೋನ್ ಕೋರ್ಸ್ ನೋಡಿ, ಸಾಲ ಪಡೆದು ನಿಮ್ಮ ಬಿಸಿನೆಸ್ ಕನಸು ನನಸು ಮಾಡಿಕೊಳ್ಳಿ.