

ಮಣ್ಣಿನಿಂದ ಆಭರಣ ಸಾಧ್ಯನಾ?: ಮಣ್ಣನ್ನು ನಂಬಿ ಕೆಟ್ಟೋರಿಲ್ಲ- ಈ ಮಾತು ನೂರಕ್ಕೆ ನೂರು ಸತ್ಯ. ಮಣ್ಣು ಅಂದರೆ ಚಿನ್ನ. ಅದೇ ರೀತಿ ಮಣ್ಣಿನಿಂದ ಚಿನ್ನ ತೆಗೆಯೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಇಷ್ಟೇ ಅಲ್ಲದೆ ಮಣ್ಣಿನಿಂದ ಮಡಕೆ, ಮೂರ್ತಿ ಇನ್ನಿತರ ಪರಿಕರಗಳನ್ನು ಮಾಡುವುದನ್ನು ಸಹ ನೋಡಿದ್ದೇವೆ. ಇವುಗಳ ಸಾಲಿಗೆ ಟೆರಾಕೋಟ ಆಭರಣಗಳು ಇತ್ತೀಚಿನ ದಿನಗಳಲ್ಲಿ ಸೇರಿಕೊಂಡಿದೆ. ದೇಸಿ ಸೊಬಗಿನಲ್ಲಿ ಸಿದ್ಧವಾಗುವಂತಹ ಆಭರಣಗಳನ್ನು ತಮ್ಮ ಉಡುಗೆ ತೊಡುಗೆಗಳಿಗೆ ಹೊಂದಿಕೊಳ್ಳುವಂತೆ ಮಹಿಳೆಯರು, ಪುರುಷರು ಧರಿಸುತ್ತಿದ್ದಾರೆ.
ಆಭರಣಗಳ ಮೌಲ್ಯ: ಕರೊನಾ ಸಾಂಕ್ರಾಮಿಕದಂತಹ ಸಮಯದಲ್ಲಿಯೂ ಬೆಲೆ ಮತ್ತು ಉತ್ಪನದಲ್ಲಿ ಕಡಿಮೆಯಾಗದೆ, ದಿನದಿಂದ ದಿನಕ್ಕೆ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಿರುವ ಆಭರಣಗಳ ಜಾಗತಿಕ ಮಾರುಕಟ್ಟೆ ಮೌಲ್ಯ 269 ಯುಎಸ್ ಬಿಲಿಯನ್ ಡಾಲರ್. ಅಂದರೆ 20 ಲಕ್ಷದ 17 ಸಾವಿರದ 500 ಕೋಟಿ ರೂ. ಹಾಗೇಯೇ (CAGR) ಕಾಂಪೌಂಡ್ ಆನ್ವಲ್ ಗ್ರೋಥ್ ರೇಟ್ ಶೇ.8.5. ಇದು 2030ಕ್ಕೆ ಶೇ.30 ಹೆಚ್ಚಾಗೋ ನಿರೀಕ್ಷೆ ಇದೆ.
ಟೆರಾಕೋಟ ಜುವೆಲ್ಲರಿ ಹಿನ್ನೆಲೆ: ಮಣ್ಣಿನಿಂದ ಆಭರಣಾನಾ! ಅಂತ ಪ್ರತಿಯೊಬ್ಬರೂ ಆಶ್ಚರ್ಯಪಡಬಹುದು. ಹೌದು ಮಣ್ಣಿನಿಂದ ತಯಾರಾದ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮೊದಲಿಗೆ ಆಫ್ರಿಕಾದ ಟ್ರೖೆಬ್ಸ್ (ಬುಡಕಟ್ಟು ಜನಾಂಗದವರು) ಹೆಚ್ಚು ಬಳಸುತ್ತಿದ್ದರು. ಸದ್ಯ ಈ ಟೆರಾಕೋಟ ಜುವೆಲ್ಲರಿಗಳು ಒಂದು ರೀತಿ ಟ್ರೆಂಡ್ ಆಗುತ್ತಿವೆ. ಪ್ರಸ್ತುತ್ತ ಟೆರಾಕೋಟ ಜುವೆಲ್ಲರಿ ತಯಾರಿಸುವ ಬಿಜಿನೆಸ್ ಮಾಡಿ ಯಶಸ್ವಿಯಾಗಬಹುದು. ಇದು ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಂತೆ ಹೆಚ್ಚು ಖರ್ಚು ಮಾಡುವಂತಹ ಉದ್ಯಮ ಅಲ್ಲ. ಅಲ್ಲಿ ಹೆಚ್ಚು ಬಂಡವಾಳ ಅಗತ್ಯವಾಗಿರುತ್ತೆ. ಆದರೆ ಟೆರಾಕೋಟ ಜುವೆಲ್ಲರಿಗಳಿಗೆ ಹೆಚ್ಚು ಬಂಡವಾಳದ ಅವಶ್ಯಕತೆ ಇಲ್ಲ. ಮಣ್ಣು ಸುಲಭವಾಗಿ ಸಿಗುತ್ತದೆ. ಹಾಗೇ ತಂತಿ, ಅಚ್ಚು ಸೇರಿ ಕೆಲ ವಸ್ತುಗಳು ಇದ್ರೆ ಸಾಕು. ನೀವೂ ಮಣ್ಣಿನಿಂದ ಆಭರಣ ಮಾಡುವುದಕ್ಕೆ ಸಾಧ್ಯ. ಟೆರಾಕೋಟ ಜುವೆಲ್ಲರಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ಇದು ಒಂದು ರೀತಿ ಹೋಮ್ ಬೇಸ್ಡ್ ಪೋ›ಡಕ್ಟ್ ಬಿಸಿನೆಸ್. ಇನ್ನು ಮರಳು ಮಣ್ಣು ಹೊರತುಪಡಿಸಿ ಎಲ್ಲ ರೀತಿಯ ಮಣ್ಣುಗಳಿಂದ ಈ ಆಭರಣ ತಯಾರಿಸಲು ಸಾಧ್ಯ.
ಟೆರಾಕೋಟ ಜುವೆಲ್ಲರಿ ಉಪಯೋಗ: ಮಣ್ಣಿನಿಂದಲೇ ರೂಪ ಪಡೆದುಕೊಂಡು ಪ್ರತಿಯೊಬ್ಬರ ಆಕರ್ಷಣೆಗೆ ಕಾರಣವಾಗಿರುವ ಈ ಆಭರಣಗಳು ಪರಿಸರ ಸ್ನೇಹಿಯಾಗಿವೆ. ಮೆಡಿಟೇಷನ್ಗೂ ಸಹಾಯಕ. ಇವುಗಳಿಗೆ ಡಿಸೈನ್ ಮೇಲೆ ಡಿಮಾಂಡ್ (ವಿನ್ಯಾಸದ ಮೇಲೆ ಬೇಡಿಕೆ) ಇದೆ.
ಲಾಭದಾಯಕ ಟೆರಾಕೋಟ ಜುವೆಲ್ಲರಿ ಮೇಕಿಂಗ್!: ಪ್ರಸ್ತುತ ಚಿನ್ನ, ಬೆಳ್ಳಿ ಆಭರಣಗಳು ಹೇಗೆ ಬೇಡಿಕೆ ಪಡೆದುಕೊಳ್ಳುತ್ತಿವೆಯೋ ಹಾಗೇಯೇ ಟೆರಾಕೋಟ ಜುವೆಲ್ಲರಿಗಳು ಸಹ ಬೇಡಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಮಣ್ಣಿನಿಂದ ಜುಮ್ಕಿ, ಸರ, ಬ್ರೖೆಸ್ ಲೇಟ್, ನೆಕ್ಲೇಸ್ ಹೀಗೆ ನಾನಾ ರೀತಿಯ ಆಭರಣ ತಯಾರಿಸಲು ಸಾಧ್ಯ. ಕೇವಲ 3 ಸಾವಿರ ರೂ. ನಿಮ್ಮ ಬಳಿ ಇದ್ದರೆ ಅದರಲ್ಲಿಯೇ ಈ ಉದ್ಯಮ ಆರಂಭಿಸಿ ನೀವು ಅದಕ್ಕೆ 3 ಪಟ್ಟು ಅಂದರೇ 10-12 ಸಾವಿರ ರೂ. ಸಂಪಾದನೆ ಮಾಡಬಹುದು. ಇದರ ಆದಾಯದ ಲೆಕ್ಕಚಾರ, ತಯಾರಿಸುವಂತಹ ಆಭರಣಗಳ ವಿನ್ಯಾಸ, ಶ್ರಮ ಮತ್ತು ತಯಾರಿಸಲು ತೆಗೆದುಕೊಂಡ ಸಮಯದ ಮೇಲೆ ನಿಗದಿಯಾಗಿರುತ್ತೆ. ಉದಾಹರಣೆಗೆ ಒಮ್ಮೆ ನೀವು ಕೇವಲ 3-4 ಸರವನ್ನು ಮಾಡಿದರೆ ಸರಗಳು ಸಂಪೂರ್ಣವಾಗಿ ಸಿದ್ಧವಾಗುವುದಕ್ಕೆ 1 ವಾರ ಸಮಯ ತೆಗೆದುಕೊಳ್ಳುತ್ತೆ. ಬಳಿಕ ಅದನ್ನು ಮಾರಾಟ ಮಾಡಿದ್ರೆ 1 ಸರದ ಬೆಲೆ 3000 ರೂ. ಆದರೂ ಒಂದು ವಾರದಲ್ಲಿಯೇ ನೀವು 10-12 ಸಾವಿರ ರೂ. ಆದಾಯ ಗಳಿಸುವುದಕ್ಕೆ ಸಾಧ್ಯ.
ffreedom appನಲ್ಲಿ ಟೆರಾಕೋಟ ಜುವೆಲ್ಲರಿ ಮೇಕಿಂಗ್ ಕೋರ್ಸ್: ಕೋವಿಡ್ ವಾರಿಯರ್ ಆಗಿದ್ದ ಪತಿಯನ್ನು ಕೋವಿಡ್ನಿಂದಲೇ ಕಳೆದುಕೊಂಡ ನೀಲಿ ಲೋಹಿತ್, ಮೊದಲಿನಿಂದಲೂ ಮಣ್ಣಿನಿಂದ ಆಭರಣ ತಯಾರಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದರು. ಪತಿಯ ಅಕಾಲಿಕ ಮರಣ ನಂತರ ಕುಟುಂಬ ಸಾಗಿಸುವುದಕ್ಕೆ ಇವರ ಕೈ ಹಿಡಿದಿದ್ದೆ ಟೆರಾಕೋಟ ಜುವೆಲ್ಲರಿ ತಯಾರಿಕೆ ಹವ್ಯಾಸ. ಆರಂಭದಲ್ಲಿ ಪತಿಯ ಸಾವಿನ ದುಃಖ ಮರೆಯುವುದಕ್ಕೆ ಆರಂಭಿಸಿದ ಬಿಜಿನೆಸ್ ದಿನದಿಂದ ದಿನಕ್ಕೆ ಪ್ರಚಾರ ಪಡೆದುಕೊಂಡು ಇವತ್ತು ಅವರನ್ನು ಯಶಸ್ವಿ ಟೆರಾಕೋಟ ಜುವೆಲ್ಲರಿ ಉದ್ಯಮಿಯಾಗಿ ಮಾಡಿದೆ. 2020-21ರಲ್ಲಿ ಈ ಬಿಸಿನೆಸ್ ಪ್ರಾರಂಭಿಸಿರೋ ಈ ಮಾರ್ಗದರ್ಶಕರು ನೀಲಿ ಕ್ರೀಯೇಷನ್ ಅಡಿ ಲಕ್ಷ ಲಕ್ಷ ರೂ. ದುಡಿಯುತ್ತಿದ್ದಾರೆ. ಜತೆಗೆ ಸಾಕಷ್ಟು ಜನರಿಗೆ ಟೆರಾಕೋಟ ಜುವೆಲ್ಲರಿ ತಯಾರಿಕೆ ಬಗ್ಗೆ ಹೇಳಿಕೊಡುತ್ತಿದ್ದಾರೆ. ಅವರೇ ಈ ಕೋರ್ಸ್ ಮಾರ್ಗದರ್ಶನ ಮಾಡುತ್ತಾರೆ.
ಈ ಕೋರ್ಸ್ ಅನ್ನು ffreedom app ಅನಾವರಣಗೊಳಿಸುತ್ತಿದೆ. ಇದರ ಜತೆಗೆ ನೀವು ffreedom appನಲ್ಲಿ ಕೃಷಿ, ಬಿಜಿನೆಸ್ ಮತ್ತು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ 800ಕ್ಕೂ ಹೆಚ್ಚು ಕೋರ್ಸ್ಗಳನ್ನು ನೋಡಬಹುದು ಮತ್ತು ಪ್ರತಿಯೊಬ್ಬ ಯಶಸ್ವಿ ಮಾರ್ಗದರ್ಶಕರಿಂದ ಕೂಡ ಕಲಿತು ಅದನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು. ಆಲ್ ದಿ ಬೆಸ್ಟ್.
1. ಕೋರ್ಸ್ ಪರಿಚಯ 2. ಮಾರ್ಗದರ್ಶಕರ ಪರಿಚಯ 3. ಏನಿದು ಟೆರಾಕೋಟ ಜುವೆಲ್ಲರಿ ಮೇಕಿಂಗ್ 4. ಬಂಡವಾಳ, ನೋಂದಣಿ 5. ಕಚ್ಚಾ ವಸ್ತು, ಯುನಿಟ್ ಸೆಟ್ಅಪ್ ಮತ್ತು ಕಾರ್ವಿುಕರು 6. ಟೆರಾಕೋಟ ಜುವೆಲ್ಲರಿ ಮೇಕಿಂಗ್- ಪ್ರಾಕ್ಟಿಕಲ್ 7. ಗುಣಮಟ್ಟ ನಿರ್ವಹಣೆ, ಬ್ರಾ್ಯಂಡಿಂಗ್ ಮತ್ತು ಮಾಲೀಕತ್ವ 8. ಮಾರ್ಕೆಟಿಂಗ್ ಮತ್ತು ರಫ್ತು 9. ಆದಾಯ, ಖರ್ಚು ಮತ್ತು ಲಾಭ 10. ಸವಾಲುಗಳು ಮತ್ತು ಕಿವಿಮಾತು
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ- 02262116777