

ಮಲ್ಟಿ ಕಲ್ಚರ್ನಲ್ಲಿ ಮೀನು ಕೃಷಿ?: ಮೀನು ಉತ್ತಮ ಪೋಷಕಾಂಶವುಳ್ಳ ಆಹಾರ. ಬೇರೆ ಮಾಂಸಹಾರಕ್ಕೆ ಇರುವಷ್ಟು ಬೇಡಿಕೆ ಮೀನಿಗೂ ಇದೆ. ಮೀನು ಸೇವಿಸುವುದರ ಸಂಖ್ಯೆ ಹೆಚ್ಚುತ್ತಿದ್ದಂತೆ ಮೀನು ಕೃಷಿಕರ ಸಂಖ್ಯೆ ಹೆಚ್ಚುವುದರ ಜೊತೆಗೆ ಮೀನು ಕೃಷಿ ಪದ್ದತಿಗಳಲ್ಲಿಯೂ ತಂತ್ರಜ್ಞಾನ ಪ್ರಗತಿಯಾಗುತ್ತಿದೆ. ಈ ಹಿಂದೆ ಮೀನು ಕೃಷಿಕರು ಸಂಪ್ರಾದಾಯಿಕವಾಗಿ ಕೆರೆ, ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡಿದರೆ, ಇಂದು ಬಯೋಪ್ಲಾಕ್, ಆರ್ಎಎಸ್ ಪದ್ಧತಿಯಲ್ಲಿ ಮೀನು ಸಾಕಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮೀನು ಕೃಷಿ ಸಂಪೂರ್ಣ ಮಾಹಿತಿ ಕುರಿತಾದ ಕೋರ್ಸ್ಗಳು ffreedom appನಲ್ಲಿವೆ. ಆಪ್ ಡೌನ್ಲೋಡ್ ಮಾಡಿ ಕೋರ್ಸ್ ವೀಕ್ಷಿಸಿ
ಆಧುನಿಕ ತಂತ್ರಜ್ಞಾನದಲ್ಲಿ ಇಳುವರಿ ಹೆಚ್ಚು: ಆಧುನಿಕ ತಂತ್ರಜ್ಞಾನಗಳು ದಿನೇದಿನೆ ಪ್ರಗತಿಯಾಗುತ್ತಿರುವುದರಿಂದ ಮೀನು ಕೃಷಿ ಕೂಡ ಮೀನು ಉತ್ಪಾದಕರಿಗೆ ವರದಾನವಾಗಿದೆ. ಉದಾಹರಣೆಗೆ: 1 ಎಕರೆ ಪ್ರದೇಶದಲ್ಲಿ ನ್ಯಾಚುರಲ್ ಪಾಂಡ್ ಮಾಡಿ ಮೀನು ಸಾಕಣೆಗೆ ಮುಂದಾದರೆ ಕೇವಲ 5 ರಿಂದ 6 ಸಾವಿರ ಮೀನು ಸಾಕಾಣಿಕೆ ಮಾಡಬಹುದು. ಅದೇ ಜಾಗದಲ್ಲಿ 50 ರಿಂದ 60 ಬಯೋಪ್ಲಾಕ್ ನಿರ್ಮಾಣ ಮಾಡಬಹುದು, 1 ಟ್ಯಾಂಕ್ನಲ್ಲಿ 1 ಸಾವಿರ ಮೀನು ಸಾಕಣೆ ಮಾಡುವ ಸಾಮರ್ಥ್ಯ ಇದೆ. ಇದನ್ನು ನೋಡಿದರೆ ತಿಳಿಯಲಿದೆ ತಂತ್ರಜ್ಞಾನಗಳ ಸಾಮರ್ಥ್ಯ.
ಮಲ್ಟಿ ಬ್ರೀಡ್ ಮೀನು ಕೃಷಿ: ಮೀನು ಕೃಷಿಕರು ಒಂದೇ ತಳಿಗಳನ್ನು ಸಾಕಣೆ ಮಾಡುವುದರಿಂದ ಕೆಲವೊಮ್ಮೆ ಸಮಸ್ಯೆಗಳಿಗೆ ಸಿಲುಕಿಕೊಳ್ಳಬಹುದು. ಅಷ್ಟೇ ಅಲ್ಲದೇ ಕೆಲವೊಂದಿಷ್ಟು ತಳಿಯ ಮೀನುಗಳಿಂದ ಆದಾಯ ಬರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಗ ಮೀನು ಕೃಷಿಕರು ಆರ್ಥಿಕ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಬೇಕು ಅಂದರೆ ರೈತರು ತಮ್ಮ ಜಾಗದಲ್ಲಿ ನ್ಯಾಚುರಲ್ ಪಾಂಡ್, ಬಯೋಪ್ಲಾಕ್ ಮತ್ತು ಆರ್ಎಎಸ್ ಪದ್ಧತಿಯಲ್ಲಿ ವಿವಿಧ ತಳಿಯ ಮೀನುಗಳನ್ನು ಸಾಕಣೆ ಮಾಡುವುದು ಸೂಕ್ತ.
ಮೀನು ಕೃಷಿ ಯಾಕೆ ಮಾಡಬೇಕು?; ಮೀನು ಸೇವಿಸುವುದರ ಸಂಖ್ಯೆ ಹೆಚ್ಚುತ್ತಿದ್ದಂತೆ ಅದರ ಮಾರುಕಟ್ಟೆ ಕೂಡ ಪ್ರಗತಿಯಾಗುತ್ತಿದೆ. ಮೀನಿನ ಜಾಗತಿಕ ಮಾರುಕಟ್ಟೆ ಮೌಲ್ಯ 113.2 ಬಿಲಿಯನ್ ಡಾಲರ್, ಅಂದರೆ 11320 ಕೋಟಿ ರೂ. ಇದು 2027ಕ್ಕೆ 138 ಬಿಲಿಯನ್ ಡಾಲರ್ ಅಂದರೆ 13,800 ಕೋಟಿ ಅಗುವ ನಿರೀಕ್ಷೆಯಲ್ಲಿದೆ. ಭಾರತದ ಮಾರುಕಟ್ಟೆ ಮೀನಿನ ಬೇಡಿಕೆಗೆ ತಕ್ಕಂತೆ ಹೆಚ್ಚುತ್ತಿದ್ದು ವಿದೇಶಕ್ಕೂ ರಫ್ತು ಆಗುವಷ್ಟು ಬೆಳೆದಿದೆ. ದೇಶದಲ್ಲಿ 1.23 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದೆ. ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮೀನು ಉತ್ಪಾದನೆಯಾಗುತ್ತದೆ. ಇಷ್ಟು ದೊಡ್ಡ ಮಾರುಕಟ್ಟೆ ಹೊಂದಿರುವ ಮೀನು ಕೃಷಿಯನ್ನು ಮಾಡಿದರೆ ಲಾಭ ಗಳಿಸಬಹುದು.
ಬಯೋಪ್ಲಾಕ್ ಪದ್ಧತಿಗೆ ಸಬ್ಸಿಡಿ ಮತ್ತು ಸಹಾಯ: ಬಯೋಪ್ಲಾಕ್ ಪದ್ಧತಿ ಮೀನು ಕೃಷಿಗೆ ಸರ್ಕಾರದಿಂದ 25 ಬಯೋಪ್ಲಾಕ್ ನಿರ್ಮಾಣ ಮಾಡಿದ್ರೆ 30 ಲಕ್ಷ ರೂ. ಸಹಾಯಧನ ದೊರೆಯುತ್ತದೆ. ಇನ್ನು ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿಗೆ ಶೇ.60 ಹಾಗೂ ಸಾಮಾನ್ಯ ವರ್ಗದರವರಿಗೆ ಶೇ.40 ಸಬ್ಸಿಡಿ ದೊರೆಯುತ್ತದೆ.
ಮಲ್ಟಿ ಕಲ್ಚರ್, ಮಲ್ಟಿ ಬ್ರೀಡ್ನಲ್ಲಿ ಆದಾಯ: ಒಳನಾಡು ಮೀನು ಕೃಷಿಯಲ್ಲಿ ಸಾಮಾನ್ಯವಾಗಿ 3 ಪದ್ಧತಿಗಳನ್ನು ಕಾಣಬಹುದು. ನ್ಯಾಚುರಲ್ ಹೊಂಡ, ಬಯೋಪ್ಲಾಕ್ ಮತ್ತು ಆರ್ಎಎಸ್ ಪದ್ಧತಿಯಲ್ಲಿ ವಿವಿಧ ತಳಿಯ ಮೀನುಗಳನ್ನು ಸಾಕಣೆ ಮಾಡಿ ಆದಾಯ ಗಳಿಸಬಹುದು. ಉದಾಹರಣೆಗೆ: ಕೇವಲ 2 ಎಕರೆ ಪ್ರದೇಶದಲ್ಲಿ ನ್ಯಾಚುರಲ್ ಹೊಂಡದ ಜತೆಗೆ ಬಯೋಪ್ಲಾಕ್ ಪದ್ಧತಿಯಲ್ಲಿ ಟಿಲಾಪಿಯಾ 10 ಸಾವಿರ, ರೂಪ್ಚಂದ್ 10 ಸಾವಿರ ಮತ್ತು ಮುರೆಲ್ 5000 ಸಾಕಿದರೆ ಎಷ್ಟು ಆದಾಯ ಪಡೆಯಬಹುದು ಗೊತ್ತಾ? ಮುರೆಲ್ ತಳಿ - 5000 ಮೀನಿಗೆ 8 ತಿಂಗಳಿಗೆ 4 ಟನ್ ಇಳುವರಿ, ಪ್ರತಿ ಕೆ.ಜಿಗೆ 300 ರೂ. ನಂತೆ ಆದಾಯ 12 ಲಕ್ಷ ರೂ. ಇದರಲ್ಲಿ ಎಲ್ಲ ಖರ್ಚು ಶೇ.50 ತೆೆಗೆದರೂ 6 ಲಕ್ಷ ರೂ. ಲಾಭ. ಇನ್ನು ಇವುಗಳ ಜತೆಗೆ ರೂಪ್ಚಂದ್ ಸಾಕಣೆ ಮಾಡಿದರೆ 10000 ಮೀನಿಗೆ 8 ಟನ್ ಇಳುವರಿ ದೊರೆಯುತ್ತದೆ. ಪ್ರತಿ ಕೆ.ಜಿ ಮೀನು 150 ರೂ.ನಂತೆ ಮಾರಾಟವಾದರೂ 8 ತಿಂಗಳಿಗೆ 12 ಲಕ್ಷ ರೂ. ಆದಾಯ. ಇಲ್ಲಿ ಮೀನು ಹೆಚ್ಚು ಇರುವುದರಿಂದ ಖರ್ಚು 8 ಲಕ್ಷ ರೂ. ಕಳೆದರೂ 4 ಲಕ್ಷ ರೂ. ಲಾಭ. ಟಿಲಾಪಿಯಾ ನಿಮಗೆ 4 ರಿಂದ 6 ತಿಂಗಳಿಗೆ ಇಳುವರಿ ಬರುತ್ತದೆ. ಇದನ್ನು 10 ಸಾವಿರ ಸಾಕಿದರೆ ಕೇವಲ 6 ತಿಂಗಳಿಗೆ ಪ್ರತಿ ಕೆ.ಜಿಗೆ 120ರೂ.ನಂತೆ ಮಾರಾಟ ವಾದರೂ 2 ಟನ್ ಇಳುವರಿಗೆ 2.2 ಲಕ್ಷ ರೂ. ಆದಾಯ, ಇದರಲ್ಲಿಯೂ ಶೇ. 50 ಖರ್ಚು ತೆಗೆದರೂ 1.1 ಲಕ್ಷ ರೂ. ಲಾಭ ಸಿಗಲಿದೆ. ಹಾಗಾದರೆ ಮಲ್ಟಿ ಕಲ್ಚರ್, ಮೀನು ಕೃಷಿ ಬಗ್ಗೆ ಯಾರು ಹೇಳಿ ಕೊಡುತ್ತಾರೆ?.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777
ffreedom appನಲ್ಲಿ ಮಲ್ಟಿ ಕಲ್ಚರ್, ಮಲ್ಟಿ ತಳಿ ಮೀನು ಕೃಷಿ ಕೋರ್ಸ್: ಮೀನು ಕೃಷಿಯನ್ನು ಹೆಚ್ಚು ಪೋ›ತ್ಸಾಹಿಸಬೇಕು ಎಂಬ ಉದ್ದೇಶ ಹೊಂದಿರುವ ffreedom app ಈಗಾಗಲೆ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ ಒಳನಾಡು ಮೀನು ಉತ್ಪಾದಕರ ಸಮವೇಶ ನಡೆಸಿದೆ. ಇದರ ಜತೆಗೆ ಮಲ್ಟಿ ಕಲ್ಚರ್, ಮಲ್ಟಿ ತಳಿ ಮೀನು ಕೃಷಿ ಸಂಬಂಧ ಕೋರ್ಸ್ ಕೂಡ ಸಿದ್ಧಪಡಿಸಿ, ಅದನ್ನು ಅನಾವರಣ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಮೀನು ಕೃಷಿ ಮಾಡಿಕೊಂಡು ಯಶಸ್ವಿಯಾಗಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಡಾ. ಮದೇಶ್ ಅವರೇ ಮಾರ್ಗದರ್ಶನ ನೀಡಿದ್ದಾರೆ. ಕೋರ್ಸ್ ವೀಕ್ಷಿಸಲು ffreedom app ಡೌನ್ಲೋಡ್ ಮಾಡಿ.
ಕೋರ್ಸ್ನಲ್ಲಿ ಏನೇನಿದೆ?: ್ಝ ಕೋರ್ಸ್ ಮಾರ್ಗದರ್ಶಕರ ಪರಿಚಯ; ಮೀನು ಸಾಕಾಣಿಕೆಯ ಪದ್ಧತಿಗಳು; ಬಂಡವಾಳ, ಸರ್ಕಾರದ ಸೌಲಭ್ಯ ಮತ್ತು ಸಬ್ಸಿಡಿ; ಮೀನು ತಳಿ ಆಯ್ಕೆ; ಮೀನಿನ ಆಹಾರ ಮತ್ತು ಪೂರೈಕೆ; ನೀರು ನಿರ್ವಹಣೆ; ಮೀನುಗಳ ಆರೈಕೆ ಮತ್ತು ರೋಗ ನಿಯಂತ್ರಣ; ಕಟಾವು ಮತ್ತು ಶೇಖರಣೆ; ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ; ಆದಾಯ, ಖರ್ಚು ಮತ್ತು ಲಾಭ; ಮಾರ್ಗದರ್ಶಕರ ಕಿವಿಮಾತು.