5 ಪದರ ಕೃಷಿ 10 ಪಟ್ಟು ಹೆಚ್ಚು ಆದಾಯ!

Money Mathu
Published on
‘ಭೂಮಿಗೆ ಬೀಳುವ ಬಿಸಿಲಿಗೆ ಬೆಳೆಗಳೇ ಪದರ’, ‘ನೆಲದ ಫಲವತ್ತತೆಗೆ ಎರೆಹುಳುಗಳೇ ನೇಗಿಲು’ ಎನ್ನುವ 2 ಧ್ಯೇಯವನ್ನು ಸಾರುವ ನೈಸರ್ಗಿಕ ಕೃಷಿ ಪದ್ಧತಿ ಸದ್ಯ ಎಷ್ಟೋ ರೈತಾಪಿ ವರ್ಗದ ಬದುಕನ್ನು ಬಾನೆತ್ತರಕ್ಕೆ ಏರಿಸಿದೆ. ಇದೇ ನೈಸರ್ಗಿಕ ಅಥವಾ ಶೂನ್ಯ ಬಂಡವಾಳ ಕೃಷಿಯ ‘5 ಪದರ ಕೃಷಿ’ ಎಂಬ ಒಂದು ವಿಶೇಷ ಪದ್ಧತಿ, ಒಂದೇ ಭೂಮಿಯಲ್ಲಿ 5 ಹಂತದಲ್ಲಿ 10 ಪಟ್ಟು ಹೆಚ್ಚು ಆದಾಯ ತಂದುಕೊಡುವಂತೆ ಮಾಡುತ್ತದೆ. ಹೌದು, ವಿನ್ಯಾಸಗೊಂಡ ಈ ಪದ್ಧತಿ ಅರಿತ ಕೆಲವು ರೈತರು ಲಕ್ಷ ರೂಪಾಯಿ ಬರುವ ಜಾಗದಲ್ಲಿ 5, 10 ಲಕ್ಷ ರೂ. ಹೆಚ್ಚಿಗೆ

ಆದಾಯ ಗಳಿಸುತ್ತಿದ್ದಾರೆ. ಉದಾಹರಣೆಗೆ 1 ಎಕರೆ ಭೂಮಿಯಲ್ಲಿ ಬರೀ ಅಡಕೆ ಬೆಳೆ ಇದೆ ಅಂದಿಟ್ಟುಕೊಳ್ಳಿ, ಆ 1 ಎಕರೆಯಲ್ಲಿ 400 ಅಡಕೆ ಗಿಡವಿದ್ದು, 1 ಗಿಡದಲ್ಲಿ 400 ರೂ. ಸಿಕ್ಕರೆ 1.60 ಲಕ್ಷ ರೂ. ಆದಾಯ ಸಿಗಲಿದೆ. ಅದೇ ಭೂಮಿಯಲ್ಲಿ 5 ಪದರ ಕೃಷಿ ಮಾಡಿದ್ದೇ ಆಗಿದ್ದಲ್ಲಿ ಯಥಾಪ್ರಕಾರ 400 ಅಡಕೆ ಮರವಿದ್ದು 1.60 ಲಕ್ಷ ರೂ. ಬರುತ್ತೆ. ಜತೆಗೆ ಆ 400 ಅಡಕೆ ಮರಕ್ಕೆ 400 ಕಾಳುಮೆಣಸಿನ ಬಳ್ಳಿ ಹಬ್ಬಿಸಿದರೆ 1 ಬಳ್ಳಿ ಅಂದಾಜು 600 ರೂ. ಸಂಪಾದನೆ ಮಾಡಿಕೊಡುತ್ತದೆ. ಅಲ್ಲಿಗೆ 400 ಬಳ್ಳಿಯಿಂದ 2.40 ಲಕ್ಷ ರೂ. ಆದಾಯ ಅಡಕೆಗೆ ಅಂಟಿಕೊಂಡ ಬಳ್ಳಿಯಲ್ಲೇ ಬರುತ್ತೆ. ಹಾಗೆಯೇ, ಬಿಸಿಲು ಭೂಮಿಗೆ ಬೀಳದ ಹಾಗೆ ಅಡಕೆ ನಡುವೆ ಬಾಳೆ, ಲಿಂಬೆ, ಏಲಕ್ಕಿ ಬೆಳೆಯನ್ನು ಅಂತರ ಕೃಷಿಯಾಗಿ ಹಾಕಿಹೊಳ್ಳಬಹುದು. ಹೀಗೆ ಹಾಕಿದ 400 ಬಾಳೆಯಲ್ಲಿ 1 ಬಾಳೆಯಿಂದ 250 ರೂ. ಸಿಕ್ಕರೂ ಒಟ್ಟು 1 ಲಕ್ಷ ರೂ. ಸಂಪಾದನೆಯಾಗುತ್ತದೆ. ಅದೇ ಭೂಮಿಯಲ್ಲಿ ಹಾಕುವ 1 ಲಿಂಬೆ ಗಿಡ 200 ಕಾಯಿ ಬಿಟ್ಟರೆ 1 ಕಾಯಿಗೆ 2 ರೂ.ನಂತೆ ಲೆಕ್ಕ ಹಾಕಿದರೆ 200 ಕಾಯಿಗೆ 400 ರೂ. 1 ಗಿಡದಲ್ಲಿ ಸಿಗುತ್ತದೆ ಮತ್ತು 200 ಲಿಂಬೆ ಗಿಡಕ್ಕೆ 80 ಸಾವಿರ ರೂ. ಆದಾಯ ಸಿಗುತ್ತದೆ. ಇನ್ನು ಏಲಕ್ಕಿ 250 ಗಿಡವಿದೆ ಅಂದುಕೊಳ್ಳಿ, 1 ಗಿಡದಿಂದ 3 ಸಾವಿರ ರೂ. ಸಿಕ್ಕರೆ 250 ಗಿಡಕ್ಕೆ 7.50 ಲಕ್ಷ ರೂ. ಆದಾಯ ಸಿಕ್ಕಂತೆಯೇ ಸರಿ. ಒಟ್ಟಿನಲ್ಲಿ ಬರೀ ಅಡಕೆ ಹಾಕಿದರೆ ಸಿಗುತ್ತಿದ್ದ 1.60 ಲಕ್ಷ ರೂ. ಇದೀಗ ಸಣ್ಣ ಲೆಕ್ಕಾಚಾರದ ಪ್ರಕಾರ 13.30 ಲಕ್ಷ ರೂ.ಗೆ ಏರಿಬಿಟ್ಟಿದೆ. ಎಲ್ಲಿಂದ ಎಲ್ಲಿಗೆ ಆದಾಯದ ಅಂತರ ಏರಿದೆ ಅನ್ನೋದನ್ನು ಊಹಿಸಿ ನೋಡಿ. ಅಷ್ಟೇ ಅಲ್ಲ, ನಡುವಿನ ಜಾಗದಲ್ಲಿ ಕಳೆ ನಿಯಂತ್ರಣಕ್ಕೆ ಖರ್ಚು ಮಾಡುವ ಬದಲು ಸೊಪ್ಪು-ತರಕಾರಿ ಹಾಕಿಕೊಂಡರೆ ದಿನದ ಖರ್ಚಿನ ಜತೆಗೆ ತಿಂಗಳಿಗೆ ಅತೀ ಕನಿಷ್ಠ ಅಂದರೂ 15 ಸಾವಿರ ರೂ.ನಿಂದ ಗರಿಷ್ಠ 1 ಲಕ್ಷ ರೂ.ವರೆಗೆ ಆದಾಯ ತಂದುಕೊಡುತ್ತದೆ. ಹೀಗಾಗಿಯೇ ಈ ‘ಐದು ಪದರ ಕೃಷಿ’ ರೈತರಿಗೆ ದುಪ್ಪಟ್ಟು ಆದಾಯ ಪಡೆಯಲು ಅತ್ಯುತ್ತಮ ವ್ಯವಸಾಯ ಪದ್ಧತಿಯಾಗಿದೆ. ಆದರೆ, ರೈತರು ಭೂಮಿ, ಬಿಸಿಲು ಮತ್ತು ಬೆಳೆ ವಿಜ್ಞಾನದ ಬಗ್ಗೆ ಅರಿತು ಈ ಕೃಷಿ ಮಾಡಬೇಕಷ್ಟೆ.

ಬೆಳೆ ಪ್ರಯೋಗ ಮತ್ತು ಆದಾಯದ ಸ್ಟ್ರಾಟಜಿ: ಬೆಳೆಗಳ ಆಯ್ಕೆ ಆಯಾ ರೈತರ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ, ಆಯ್ಕೆ ಮಾಡುವ ಬೆಳೆಗಳಲ್ಲಿ ದಿನದ ಆದಾಯವೂ ಬರಬೇಕು. ವಾರ, ತಿಂಗಳ ಆದಾಯಕ್ಕೂ ದಾರಿಯಾಗಬೇಕು. ವರ್ಷದ ಆದಾಯಕ್ಕೆ ಮತ್ತು ದೀರ್ಘಕಾಲದ ಇನ್ಶುರೆನ್ಸ್ ರೀತಿಯ ಆದಾಯ ಸಿಗುವಂತಿರಬೇಕು. ಹೀಗಿದ್ದಲ್ಲಿ ಮಾತ್ರ ನಿರಂತರ ಆದಾಯ ಕಂಡುಕೊಂಡು ಗೆಲ್ಲಲು ಸಾಧ್ಯವಿದೆ. ಉದಾಹರಣೆಗೆ ಸೊಪ್ಪು ದಿನದ ಆದಾಯಕ್ಕೆ ದಾರಿಯಾದರೆ ತರಕಾರಿ ವಾರದ ಆದಾಯ ತಂದುಕೊಡುತ್ತೆ. ಅಡಕೆ ವರ್ಷದ ಆದಾಯ ತಂದುಕೊಟ್ಟರೆ ಅರಣ್ಯ ಮರಗಳು ದೀರ್ಘಾವಧಿಯಲ್ಲಿ ದೊಡ್ಡ ಆದಾಯ ತಂದುಕೊಡುತ್ತದೆ. ಜತೆಗೆ ಬೇರೆ ಬೇರೆ ಅಂತರ ಬೆಳೆ ಇರುವುದರಿಂದ 1 ಬೆಳೆ ನಷ್ಟ ಕಂಡರೂ ಇನ್ನೊಂದು ಬೆಳೆ ನಷ್ಟದ ಆದಾಯವನ್ನು ಸರಿದೂಗಿಸುತ್ತದೆ.

ನಷ್ಟ ನಿಯಂತ್ರಣಕ್ಕೆ ಮರುಹೂಡಿಕೆ ಮದ್ದು: ಆರಂಭಿಕ ಹಂತದಲ್ಲಿ ಪ್ರತಿ ಬೆಳೆಗೂ ಹೂಡಿಕೆ ಬೇಕೇಬೇಕು. ಬೆಳೆಗಳ ಇಳುವರಿ ಆರಂಭವಾದ 2, 3, 5 ವರ್ಷಗಳ ನಂತರ ಹೆಚ್ಚು ಬಂಡವಾಳ ಬೇಕಾಗಿರೋದಿಲ್ಲ. 1 ಬೆಳೆಯ ಲಾಭವನ್ನ ಮರುಹೂಡಿಕೆ ಮಾಡಿದ್ರೆ ಮಿಕ್ಕ ಎಲ್ಲ ಬೆಳೆಗಳ ನಿರ್ವಹಣೆ ಸಾಧ್ಯವಾಗುತ್ತದೆ.ಅಷ್ಟೇ ಅಲ್ಲ, 1 ಬೆಳೆಯ ಆದಾಯವನ್ನು ಮರುಹೂಡಿಕೆ ಮಾಡಿದ್ರೆ ವರ್ಷದಲ್ಲಿಯೇ ಆ ಹೂಡಿಕೆ 5,10 ಪಟ್ಟು ಹೆಚ್ಚಳವಾಗಿ ಹೂಡಿದ ಹಣವೂ ಬೆಳೆಯುತ್ತದೆ, ಆದಾಯವೂ ಹೆಚ್ಚುತ್ತದೆ. 1 ಎಕರೆ ಪ್ರದೇಶ ನಿರ್ವಹಣೆಗೆ ಕಾರ್ವಿುಕರ ಅವಶ್ಯಕತೆ ಕೂಡ ಇಲ್ಲ. ಗಂಡ -ಹೆಂಡತಿ ಇಬ್ಬರೆ ದಿನಕ್ಕೆ 3 ತಾಸು ಕೆಲಸ ಮಾಡಿದ್ರೆ ಸಾಕು. ಇಬ್ಬರ ದುಡಿಮೆಯಲ್ಲಿ ಅವರ ಜಮೀನಿನ 9 ಚದರ ಅಡಿ ವಿಸ್ತೀರ್ಣದಲ್ಲಿ ವರ್ಷಕ್ಕೆ 3 ಸಾವಿರ ರೂ. ಆದಾಯ ಸಲೀಸಾಗಿ ಗಳಿಸಬಹುದು. 9 ಚದರ ಅಡಿನಲ್ಲಿ 3 ಸಾವಿರ ರೂ. ಬಂದರೆ 1 ಎಕರೆ, ಅಂದ್ರೆ 43,536 ಅಡಿಯಲ್ಲಿ ಎಷ್ಟು ಆದಾಯ ಬರುತ್ತದೆ ಅನ್ನೋದನ್ನು ನೀವೇ ಲೆಕ್ಕ ಹಾಕಿ ನೋಡಿ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಫೈವ್ ಲೇಯರ್ ಕೃಷಿ ಕೋರ್ಸ್: ರೈತರು ಏಕ ಬೆಳೆ ನಂಬದೇ ಬಹುಬೆಳೆ ಮೂಲಕ ದುಪ್ಪಟ್ಟು ಆದಾಯ ಗಳಿಸಬೇಕು ಅನ್ನೋ ದೃಷ್ಟಿಯಿಂದ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಫೈವ್ ಲೇಯರ್ ಕೃಷಿ ಕೋರ್ಸ್ ಅನಾವರಣ ಮಾಡಿದೆ. ಮೂಲತಃ ಉದ್ಯಮಿಯಾಗಿದ್ದರೂ ಕೃಷಿಗೆ ಪದಾರ್ಪಣೆ ಮಾಡಿ ಫೈವ್ ಲೇಯರ್ ಕೃಷಿ ಪದ್ಧತಿ ಅಳವಡಿಸಿಕೊಂಡು ಲಕ್ಷ ಲಕ್ಷ ದುಡಿಯುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಮೂರ್ತಿ ಅವರೇ ಈ ಕೋರ್ಸ್​ನ ಮಾರ್ಗದರ್ಶಕರು.

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ- 9632742525

ಈ ಕೋರ್ಸ್​ನಲ್ಲಿ ಏನಿದೆ..?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಫೈವ್ ಲೇಯರ್ ಕೃಷಿ?
  • ಹೂಡಿಕೆ, ಮರುಹೂಡಿಕೆ ಮತ್ತು ಸರ್ಕಾರದ ಸೌಲಭ್ಯ
  • 5 ಪದರದ ವಿನ್ಯಾಸ
  • ಮಣ್ಣು ಮತ್ತು ಬಿಸಿಲು, ನೀರು, ಗೊಬ್ಬರ ಮತ್ತು ರೋಗ ನಿರ್ವಹಣೆ
  • ಕಟಾವು ಮತ್ತು ಮಾರುಕಟ್ಟೆ
  • ಖರ್ಚು ಮತ್ತು ಆದಾಯದ ಸೂತ್ರ
  • ಸವಾಲು ಮತ್ತು ಕಿವಿಮಾತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net