ಪಂಜರದಲ್ಲೇ ಮೀನು ಸಾಕಿ: ಮನಿಮಾತು..

Vittavani
Published on
64 ಮೀಟರ್ ಸ್ಥಳದಲ್ಲಿ 18 ತಿಂಗಳಿಗೆ 8 ಲಕ್ಷ ಆದಾಯ ಪಡೆಯುಬಹುದು ಇದು ಕೇಜ್ ಕಲ್ಚರ್ (ಪಂಜರ ಪದ್ಧತಿ) ಮೀನು ಕೃಷಿಯ ಸಾಮರ್ಥ್ಯ. ಪ್ರತಿಯೊಬ್ಬ ರೈತರೂ ತಾವು ಮಾಡುತ್ತಿರುವ ಕೃಷಿಯಲ್ಲಿ ವಿಭಿನ್ನತೆ ಹಾಗೂ ವಿಶಿಷ್ಠತೆ ಜತೆಗೆ ಉತ್ತಮ ಆದಾಯ ಗಳಿಸಬೇಕು ಎಂಬ ಆಸೆ ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಎಲ್ಲರೂ ಕೃಷಿಯ ಉಪಕಸುಬುಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ. ಅಂಥಹ ಕೃಷಿಯಲ್ಲಿ ಕೇಜ್ ಕಲ್ಚರ್ ಮೀನು ಕೃಷಿ ಒಂದು.

ಏನಿದು ಕೇಜ್ ಕಲ್ಚರ್?: ನದಿ, ಸಮುದ್ರ, ಅಳಿವೆ ಬಾಗಿಲುಗಳಲ್ಲಿ ಪಂಜರ ಮಾದರಿಯನ್ನು ನಿರ್ವಿುಸಿ ಅದರಲ್ಲಿ ಮೀನು ಸಾಕಾಣೆ ಮಾಡುವುದೇ ಕೇಜ್ ಕಲ್ಚರ್ ಮೀನು ಕೃಷಿ. ಇಲ್ಲಿ ಕೇಜ್ 6/4 ಮೀಟರ್ ಆಳತೆಯಲ್ಲಿ ಆಯಾತಾಕಾರದಲ್ಲಿ ಇರುತ್ತೆ, ಇದರಲ್ಲಿ ಮೀನುಗಳು ಹೊರಗೆ ಹೋಗದಂತೆ ಬಲೆ ಅಥವಾ ನೆಟ್ ಹಾಕಿ ಸಾಕಾಣೆ ಮಾಡಲಾಗುತ್ತೆ.

ಕೇಜ್ ನಿರ್ಮಾಣ ಹೇಗೆ: ಕರಾವಳಿ ಪ್ರದೇಶ ಹಾಗೂ ನದಿ ತೀರದಲ್ಲಿ ಸಾಮಾನ್ಯವಾಗಿ ಮಾಡಬಹುದಾದ ಈ ಕೃಷಿಯಲ್ಲಿ ಸಲಕರಣೆಗಳು ಮಾತ್ರ ಮೀನುಗಳ ರಕ್ಷಣೆಗೆ ಬಹಳ ಮುಖ್ಯ. ಇಲ್ಲಿ ಬೇಕಾಗಿರುವುದು 1.5 ಇಂಚಿನ 8 ಪೈಪ್​ಗಳು, 200 ಲೀಟರ್ ನೀರು ಸಾಮರ್ಥ್ಯದ ಪಿಹೆಚ್​ಡಿಪಿ 10 ಟ್ರಮ್ಳು, ಬಲೆ ಅಥವಾ ನೆಟ್ ಗಳು. ಇವುಗಳನ್ನು ಸೂಕ್ತವಾಗಿ ಜೋಡಣೆ ಮಾಡಿ ಮೀನು ಸಾಕಾಣಿಕೆ ಮಾಡುವ ಸ್ಥಳದಲ್ಲಿ ಹೊಂದಿಸಿ, ಅದರಲ್ಲಿ ಮೀನು ಗಳನ್ನು ಸಾಕಾಣೆ ಮಾಡಬಹುದು.

ತಳಿ ಆಯ್ಕೆ: ಕೇಜ್ ಕಲ್ಚರ್ ಮೀನು ಸಾಕಾಣೆಯನ್ನು ಪ್ರತಿಯೊಂದು ಪ್ರದೇಶದಲ್ಲಿ ಮಾಡಬಹುದಾಗಿರುವುದರಿಂದ ಇಲ್ಲಿ ಎರಡು ರೀತಿಯ ಮೀನುಗಳನ್ನು ಸಾಕಾಣೆ ಮಾಡಬಹುದು.

ಸಿಹಿ ನೀರಿನ ಮೀನುಗಳು: ನದಿ ಸೇರಿ ಇನ್ನಿತರ ಒಳನಾಡು ಪ್ರದೇಶದಲ್ಲಿ ಸಾಕಾಣೆ ಮಾಡಬಹುದಾದ ಮೀನುಗಳು ಉದಾಹರಣೆ - ಸೀ ಬಾಸ್, ಕಾಟ್ಲಾ, ರೋಹು ಮೀನುಗಳು.

ಉಪ್ಪು ನೀರಿನ ಮೀನುಗಳು: ಸಮುದ್ರ ಮತ್ತು ಅಳಿವೆ ಬಾಗಿಲುಗಳಲ್ಲಿ ಸಾಕಾಣೆ ಮಾಡಬಹುದಾದ ಮೀನುಗಳು, ಉದಾಹರಣೆಗೆ: ಸೀ ಬಾಸ್, ಟಿಲಾಪಿಯಾ, ಪರ್ಲ್ ಸ್ಪಾಟ್, ರೆಡ್ ಸ್ನಾಪರ್ ಮತ್ತು ಪೊಂಪಾನೊ. ಪ್ರದೇಶಕ್ಕೆ ಅನುಗುಣವಾಗಿ ಯಾವ ತಳಿ ಹೊಂದಿಕೊಳ್ಳುತ್ತೆ ಅದನ್ನು ಸಾಕಾಣೆ ಮಾಡಿದ್ರೆ ಉತ್ತಮ ಆದಾಯ ಗಳಿಸಬಹುದು.

ಮೀನಿನ ಮಾರುಕಟ್ಟೆ: ಫಿಶ್ ಬಿಸಿನೆಸ್​ಗೆ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಸಾಮಾನ್ಯವಾಗಿ ಫಿಶ್ ಜಾಗತಿಕ ಮಾರುಕಟ್ಟೆ ಮೌಲ್ಯ 113.2ಬಿಲಿಯನ್ ಡಾಲರ್ ಅಂದರೆ 11,320 ಕೋಟಿ ರೂ. ಇದು 2027ಕ್ಕೆ 138 ಬಿಲಿಯನ್ ಡಾಲರ್ ಅಂದ್ರೆ 13800 ಕೋಟಿ ಅಗುವ ನಿರೀಕ್ಷೆಯಲ್ಲಿದೆ. ಹಾಗೆಯೆ ಭಾರತದ ಮಾರುಕಟ್ಟೆ ನೋಡುವುದಾದ್ರೆ ಫಿಶ್ ಬಿಸಿನೆಸ್ ಇಲ್ಲಿನ ಬೇಡಿಕೆಗೆ ತಕ್ಕಂತೆ ಹೆಚ್ಚುತ್ತಿದ್ದು ವಿದೇಶಕ್ಕೂ ರಫ್ತು ಆಗುವಷ್ಟು ಬೆಳೆದಿದೆ. ಫಿಶ್ ಎಕ್ಸ್ಪೋರ್ಟ್​ನಲ್ಲಿ ಭಾರತ ನಾಲ್ಕನೇ ಅತಿ ದೊಡ್ಡ ದೇಶವಾಗಿದೆ. ದೇಶದಲ್ಲಿ 1.23 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದೆ. ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮೀನು ಉತ್ಪಾದನೆಯಾಗುತ್ತದೆ. ಆಂಧ್ರಪ್ರದೇಶ 34 ಟನ್ ಒಳನಾಡು ಮೀನು ಉತ್ಪಾದನೆ ಮಾಡಿದ್ರೆ ಗುಜರಾತ್ 7 ಟನ್ ಸೀ ಫಿಶ್ ಉತ್ಪಾದನೆ ಮಾಡುತ್ತೆ. ಇಷ್ಟು ದೊಡ್ಡ ಮಾರುಕಟ್ಟೆ ಹೊಂದಿರುವ ಈ ಮೀನು ಕೃಷಿಯನ್ನ ರೈತರು ಮಾಡಿದ್ರೆ ಲಾಭ ಗ್ಯಾರಂಟಿ.

ಮೀನು ಕೃಷಿಯ ಲೆಕ್ಕಾಚಾರ: ಸಿಹಿ ಮತ್ತು ಸಮುದ್ರದ ನೀರಿನಲ್ಲಿ ಸಾಕಾಣೆ ಮಾಡಬಹುದಾದ ಸೀ ಬಾಸ್ ಮೀನನ್ನು ನಾವು ಲೆಕ್ಕ ಚಾರಕ್ಕೆ ತೆಗದುಕೊಂಡ್ರೆ. ಒಂದು ಕೇಜ್​ನಲ್ಲಿ ಸುಮಾರು 1000 ಮರಿಗಳನ್ನು ಬಿಡಬಹುದು, ಅದರಲ್ಲಿ 700 ಮೀನುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಈ ಮೀನುಗಳನ್ನು 18 ತಿಂಗಳು ಕಾಲ ಪೋಷಣೆ ಮಾಡಿದರೆ ಪ್ರತಿ ಮೀನಿಗೆ 3 ಕೆ.ಜಿ ಯಂತೆ 18 ತಿಂಗಳಿಗೆ 2 ಟನ್ ಮೀನು ಇಳುವರಿ ಬರುತ್ತೆ. ಒಂದು ಕೇಜಿ ಮೀನಿನ ದರ 400 ರೂಪಾಯಿ, ಅಂದ್ರೆ ನಮಗೆ 2 ಟನ್ ನಿಂದ 8 ಲಕ್ಷ ರೂ. ಆದಾಯ ಕೈ ಸೇರುತ್ತೆ. ಇದರಲ್ಲಿ 1:1.5 ಅಂದ್ರೆ 1 ಕೆ.ಜಿ ಮೀನು ಬೆಳೆಯುವುದಕ್ಕೆ 1.5 ಕೆ.ಜಿ ಫೀಡ್ ಬೇಕಾಗುತ್ತೆ, ಇದರ ಜತೆಗೆ ನಿರ್ವಹಣೆ ಖರ್ಚ ಸೇರಿ ನಾವು ಕೆ.ಜಿಗೆ 225 ರೂ. ತೆಗೆದ್ರು 1 ಕೆ.ಜಿಯಿಂದ 175 ರೂ. ಲಾಭ ದೊರೆಯುತ್ತೆ, ಅದೇ 2 ಟನ್ ಗೆ 3.5 ಲಕ್ಷ ರೂ. ಲಾಭ ಕೇವಲ 1 ಕೆ.ಜ್ ನಿಂದ ಕೈ ಸೇರುತ್ತೆ, ಇದನ್ನೇ ನಾವು ದೊಡ್ಡ ಮಟ್ಟದಲ್ಲಿ ಮಾಡಿದ್ರೆ ಎಷ್ಟು ಆದಾಯ ಗಳಿಸಬಹುದು ಲೆಕ್ಕ ಹಾಕಿ.

ಸಬ್ಸಿಡಿ: ಒಂದು ಕೇಜ್ ನಿರ್ಮಾಣ ಮಾಡುವುದಕ್ಕೆ 1 ಲಕ್ಷ ರೂ. ಖರ್ಚು ಬರುತ್ತೆ, ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಿಂದ ಸಹಾಯ ಪಡೆಯಬಹುದು. ಸಾಮಾನ್ಯ ವರ್ಗದವರಿಗೆ 40% ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಹಾಗೂ ಮಹಿಳೆಯರಿಗೆ 60% ಸಬ್ಸಿಡಿ ದೊರೆಯುತ್ತಿದೆ.

ffreedom appನಲ್ಲಿ ಕೇಜ್ ಕಲ್ಚರ್ ಮೀನು ಕೃಷಿ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ffreedom app ಕೇಜ್ ಕಲ್ಚರ್ ಮೀನು ಕೃಷಿ ಬಗ್ಗೆ ಕೋರ್ಸ್ ಸಿದ್ಧಪಡಿಸಿದೆ. ಇಲ್ಲಿ ನಿಮಗೆ ಈ ಕೇಜ್ ಕಲ್ಚರ್ ನಲ್ಲಿ ಮೀನು ಕೃಷಿ ಮಾಡಿ ಯಶಸ್ವಿಯಾಗಿರುವ ಹಾಗೂ ಮೀನು ಕೃಷಿ ಸಾಧನೆಗೆ ffreedom app ಅವಾರ್ಡ್ಸ್ ಪಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಕಿಯ ಹೇಮರಾಜ್ ಅವರೇ ಮಾರ್ಗದರ್ಶನ ನೀಡುತ್ತಾರೆ.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಕೇಜ್ ಕಲ್ಚರ್?
  • ನೀರಿನ ಮೂಲ
  • ಬಂಡವಾಳ, ಸರ್ಕಾರದ ಯೋಜನೆಗಳು, ಸಬ್ಸಿಡಿ
  • ಮೂಲ ಸೌಕರ್ಯ ಮತ್ತು ಸಲಕರಣೆಗಳು
  • ಕೇಜ್ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ
  • ತಳಿ ಆಯ್ಕೆ
  • ಆಹಾರ ಪೂರೈಕೆ ಮತ್ತು ರೋಗ ನಿಯಂತ್ರಣ
  • ಕಟಾವು ಮತ್ತು ಕಟಾವು ನಂತರದ ಪ್ರಕ್ರಿಯೆ
  • ಮಾರ್ಕೆಟಿಂಗ್, ಬೇಡಿಕೆ ಮತ್ತು ಮಾರಾಟ
  • ಆದಾಯ, ಖರ್ಚು ಮತ್ತು ಲಾಭ
  • ಸವಾಲುಗಳು ಮತ್ತು ಕಿವಿಮಾತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net