ಸ್ವಂತ ಉದ್ಯಮ ಆರಂಭಿಸೋಕೂ ಮುನ್ನ: ಮನಿಮಾತು

Money Mathu
Published on
ಬಹಳಷ್ಟು ಜನರು ತಮ್ಮದೇ ಉದ್ಯಮ ಶುರು ಮಾಡುವ ಆಸೆ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ ಉದ್ಯಮ ಶುರು ಮಾಡುತ್ತಾರೆ. ಆದರೆ ಆ ಬಿಸಿನೆಸ್​ನಲ್ಲಿ ಕೆಲವೇ ತಿಂಗಳು, ವರ್ಷದಲ್ಲಿ ನಷ್ಟ ಅನುಭವಿಸುತ್ತಾರೆ. ಯಾಕೆ ಹೀಗೆ ಆಗುತ್ತೆ? ಇದಕ್ಕೆ ಉತ್ತರ ಸಿಂಪಲ್, ಅನುಭವದ ಕೊರತೆ! ನಾವು ಅನೇಕ ಕಡೆ ನೋಡುತ್ತಿರುತ್ತೇವೆ. ಕೆಲವೊಂದು ಕಂಪನಿಗಳಲ್ಲಿ ಐಐಟಿ, ಐಐಎಂ ಅಥವಾ ಯಾವುದೋ ಉತ್ತಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರಿಗೆ ಹೆಚ್ಚು ಮನ್ನಣೆ ಕೊಡುತ್ತಾರೆ. ಆ ಕಂಪನಿಗಳು ಯಶಸ್ವಿಯಾಗಿರುತ್ತವೆ. ಇದು ಹೇಗೆ ಸಾಧ್ಯವೆಂದರೆ, ಅವರು ಡೇಟಾ ಡ್ರಿವೆನ್ ಡಿಷಿಶನ್ಸ್ (ದತ್ತಾಂಶ ಆಧಾರಿತ ನಿರ್ಧಾರಗಳು) ತೆಗೆದುಕೊಳ್ಳುತ್ತಾರೆ.

ಡೇಟಾ ಡ್ರಿವೆನ್ ಡಿಷಿಶನ್ಸ್ ಅಂದ್ರೆ: ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಡೇಟಾ ಅಧ್ಯಯನ ಮತ್ತು ಮಾರ್ಕೆಟ್ ರಿಸರ್ಚ್ (ಸಂಶೋಧನೆ) ಮಾಡಿ, ಯಾವುದು ಉಪಯೋಗವಾಗುತ್ತೆ, ಯಾವುದು ಅಗುವುದಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ. ನೀವು ಕೂಡ ನಿಮ್ಮದೇ ಉದ್ಯಮ ಕಟ್ಟುವ ಕನಸು ಕಾಣುತ್ತಿದ್ದರೆ, ನಾನು ನಿಮಗೆ 5 ಸ್ಟೆಪ್ಸ್ ಹೇಳಿಕೊಡುತ್ತೇನೆ. ಅವುಗಳನ್ನು ಅನುಸರಿಸಿದರೆ ಮಾಡಿದರೆ ಸಕ್ಸಸ್ ಆಗುತ್ತೀರಿ.

5 ಸ್ಟೆಪ್ಸ್ ಯಾವುವು?

1. ಪ್ರಾಡಕ್ಟ್/ ಸರ್ವಿಸ್​ಗೆ ಬೇಡಿಕೆ ಅಗತ್ಯ: ಯಾವುದೇ ಕ್ಷೇತ್ರದಲ್ಲಿ ಬಿಸಿನೆಸ್ ಕಟ್ಟುವುದಕ್ಕೆ ಮುಂದಾದರೆ, ಅಲ್ಲಿ ನೀವು ಮಾರುಕಟ್ಟೆಗೆ ತರುವಂತಹ ಪ್ರಾಡಕ್ಟ್​ಗೆ ಉತ್ತಮ ಬೇಡಿಕೆ ಇರಬೇಕಾಗುತ್ತೆ. ಒಂದು ವೇಳೆ ನಿಮ್ಮ ಉತ್ಪನ್ನಕ್ಕೆ ಬೇಡಿಕೆ ಇಲ್ಲದಿದ್ದರೆ ಅದು ಫೇಲ್ ಆಗುತ್ತೆ.

ಉದಾಹರಣೆಗೆ ಒಂದು ನಾನ್ ವೆಜ್ ಬಿರಿಯಾನಿ ಹೋಟೆಲ್ ಮಾಡಬೇಕಾದರೆ, ಎಲ್ಲಿ ಜನ ಬಿರಿಯಾನಿ ತಿನ್ನುತ್ತಾರೋ, ಅ ಜಾಗದಲ್ಲೇ ಮಾಡಬೇಕು. ಅದನ್ನು ಬಿಟ್ಟು ನಾನ್ ವೆಜ್ ತಿನ್ನದೇ ಇರುವಂತಹ ಸ್ಥಳದಲ್ಲಿ ಹೋಟೆಲ್ ಮಾಡಿದ್ರೆ ಅದಕ್ಕೆ ಗ್ರಾಹಕರು ಬರುವುದಿಲ್ಲ, ಪರಿಣಾಮ ಹೋಟೆಲ್ ಕೆಲ ತಿಂಗಳಿನಲ್ಲೇ ಮುಚ್ಚಬೇಕಾಗುತ್ತದೆ. ಅದೇ ರೀತಿ, ನೀವು ಬೇಡಿಕೆ ಇರುವಂತಹ ಉತ್ಪನ್ನ/ ಸೇವೆಗಳನ್ನೇ ಜನರಿಗೆ ನೀಡಬೇಕು. ನಾವು ಒಂದು ಪ್ರಾಡಕ್ಟ್ ಮಾರುಕಟ್ಟೆಗೆ ತರುವ ಮುನ್ನ ಅದಕ್ಕೆ ಸೂಕ್ತ ಬೇಡಿಕೆ ಇದೆಯೇ? ಅದು ಜನರಿಗೆ ಅಗತ್ಯವೇ? ಎಂಬುದನ್ನು ತಿಳಿದುಕೊಳ್ಳಲೇಬೇಕು. ಕೆಲವೊಮ್ಮೆ ಹೊಸ ಪ್ರಾಡಕ್ಟ್ ಗಳಿಗೆ ಹೆಚ್ಚು ಬೇಡಿಕೆ ಇಲ್ಲದೇ ಇರಬಹುದು. ಆದರೆ ಅದು ಜನರಿಗೆ ಅವಶ್ಯಕವಾಗಿರಬೇಕು. ಅಂದರೆ ನಮ್ಮ ಪ್ರಾಡಕ್ಟ್ ಪೇನ್ ಕಿಲ್ಲರ್ ಮಾತ್ರೆಯಾ ಅಥವಾ ವಿಟಮಿನ್ನಾ? ಎಂಬುದನ್ನು ತಿಳಿದುಕೊಳ್ಳಬೇಕು. ಯಾಕೆಂದರೆ, ವಿಟಮಿನ್ ಮಾತ್ರೆಗಳನ್ನು ವರ್ಷ ನಂತರ ತೆಗೆದುಕೊಂಡರೂ ನಡೆಯುತ್ತೆ, ಆದರೆ ಪೇನ್ಕಿಲ್ಲರ್ ಮಾತ್ರೆಗಳನ್ನು ದೇಹದಲ್ಲಿ ನೋವು ಕಾಣಿಸಿಕೊಂಡ ತಕ್ಷಣದಲ್ಲೇ ತೆಗೆದುಕೊಳ್ಳಬೇಕು, ಅದನ್ನು ನಾಳೆ ಅಥವಾ ವರ್ಷದ ಬಳಿಕ ತೆಗೆದುಕೊಂಡರೆ ಅಗುವುದಿಲ್ಲ. ಅದೇರೀತಿ ನೀವು ಕೊಡುವ ಪ್ರಾಡಕ್ಟ್, ಸರ್ವಿಸ್ ಅಥವಾ ಸಲ್ಯೂಷನ್ ಪೇನ್ ಕಿಲ್ಲರ್ ಆಗಿರಬೇಕು.

2. ಅನುಭವ ಇರಬೇಕು: ಯಾವುದೇ ಪ್ರಾಡಕ್ಟ್ ಅನ್ನು ಮಾರುಕಟ್ಟೆಯಲ್ಲಿರುವ ಪೈಪೋಟಿಗಳನ್ನು ಎದುರಿಸಿ ಉತ್ತಮ ರೀತಿಯಲ್ಲಿ ಜನರಿಗೆ ನೀಡಬೇಕು ಅಂದರೆ, ಆ ಕ್ಷೇತ್ರದಲ್ಲಿ ಹೆಚ್ಚು ಅನುಭವ ಇರಬೇಕು, ಅದರಲ್ಲಿ ಪರಿಣತರಾಗಿರಬೇಕು. ಒಂದು ವೇಳೆ ನೀವು ಮಾಡುವಂತಹ ಉದ್ಯಮದಲ್ಲಿ ನಿಮಗೆ ಅನುಭವ ಇಲ್ಲ. ನೀವಿನ್ನೂ ಕಲಿಯುತ್ತಿದ್ದೀರಿ ಅಂದರೆ ನೀವು ನಷ್ಟ ಅನುಭವಿಸುವುದು ಗ್ಯಾರಂಟಿ, ಯಾಕೆಂದರೆ, ನಿಮ್ಮ ಪ್ರಯೋಗವನ್ನು ಉತ್ತೇಜಿಸುವ ಜನರು ಕಡಿಮೆ. ಜನ ಏನು ಕೇಳುತ್ತಾರೆ? ಅವರ ನಿರೀಕ್ಷೆಗಳಿಗೆ ತಕ್ಕಂತೆ ಉತ್ಪನ್ನ/ ಸೇವೆ ಒದಗಿಸುವ ತಜ್ಞತೆ ಬಹಳ ಮುಖ್ಯ.

3. ಕ್ರೆಡಿಬಲಿಟಿ (ವಿಶ್ವಾಸಾರ್ಹತೆ): ಉದ್ಯಮದಲ್ಲಿ ನಂಬಿಕೆ ಬಹಳ ಮುಖ್ಯ. ನೀವು ಹೊರತರುವ ಹೊಸ ಉತ್ಪನ್ನವನ್ನು ಜನರು ಬಳಸಬೇಕೆಂದರೆ, ಅವರಿಗೆ ನಿಮ್ಮ ಮೇಲೆ ನಂಬಿಕೆ ಬರಬೇಕು. ಹೀಗಾಗಿ ಪ್ರತೀ ದಿನ ಆ ಉತ್ಪನ್ನದ ಗುಣವರ್ಧನೆ, ಮೌಲ್ಯವರ್ಧನೆ ಮಾಡುತ್ತಿರಬೇಕಾಗುತ್ತದೆ. ಹೋಮ್ ಡೆಲಿವರಿ ಕೊಡುವಾಗ ಗುಣಮಟ್ಟದ ವಸ್ತು ನೀಡದೆ ಇದ್ದಲ್ಲಿ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ನಂಬಿಕೆ ಇಲ್ಲ ಅಂದರೆ, ಬಿಸಿನೆಸ್ ಗೆಲ್ಲುವುದಿಲ್ಲ. ಹಾಗಾಗಿ ಬಿಸಿನೆಸ್ ಶುರು ಮಾಡುವಾಗ ಗ್ರಾಹಕರು, ಬ್ಯಾಂಕ್, ಫೈನಾನ್ಷಿಯಲ್ ಕಂಪನಿ ಪ್ರತಿಯೊಂದರಲ್ಲಿಯೂ ನಂಬಿಕೆ ಇರುವಂತೆ ನೋಡಿಕೊಳ್ಳಬೇಕು.

4. ಸಂಪನ್ಮೂಲ ನಿರ್ವಹಣೆ ಅಗತ್ಯ: ನಮ್ಮದೇ ಉದ್ಯಮ ಆರಂಭಿಸಬೇಕು ಅಂದರೆ ಸಂಪನ್ಮೂಲಗಳ ನಿರ್ವಹಣೆ ಕಲಿಯುವುದು ಅಗತ್ಯ. ಬಹಳಷ್ಟು ಜನರು ಹೆಚ್ಚು ಬಂಡವಾಳ ಹೂಡಿಕೆ ಮಾಡಿ ತಜ್ಞ ವ್ಯಕ್ತಿಗಳ ನೆರವು ಪಡೆದುಕೊಂಡು ಉದ್ಯಮ ಆರಂಭಿಸಿದಾಗಲೂ ಅನುಭವಿಸಿರುವ ಉದಾಹರಣೆಗಳಿವೆ. ಬಿಸಿನೆಸ್​ನ ಸಕ್ಸಸ್​ಗೆ ನನ್ನ ಹತ್ತಿರ ಏನಿದೆ? ಅನ್ನುವುದು ಮುಖ್ಯವಲ್ಲ, ಅದನ್ನು ಹೇಗೆ ನಿರ್ವಹಣೆ ಮಾಡುತ್ತೇವೆ ಅನ್ನುವುದು ಕಾರಣವಾಗಿರುತ್ತೆ. ಒಂದು ವೇಳೆ ಬಿಸಿನೆಸ್ ಆರಂಭಿಸಿದ ಬಳಿಕ ಸೂಕ್ತವಾಗಿ ಸಂಪನ್ಮೂಲಗಳನ್ನು ನಿರ್ವಹಣೆ ಮಾಡುವುದಕ್ಕೆ ಬರುವುದಿಲ್ಲ ಅಂದರೆ ಬಿಸಿನೆಸ್​ನಲ್ಲಿ ಪ್ರಗತಿ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಸಿಬ್ಬಂದಿ, ಬಂಡವಾಳ, ಯಂತ್ರಗಳು ಮತ್ತು ಆಫೀಸ್ ಇವೆಲ್ಲವನ್ನೂ ನಿರ್ವಹಣೆ ಮಾಡುವ ಚಾಕಚಕ್ಯತೆ ನಿಮ್ಮಲ್ಲಿ ಇರಬೇಕು.

5. ಹೊಸತನದ ಅನ್ವೇಷಣೆ ಇರಬೇಕು: ಯಾವುದೇ ಬಿಸಿನೆಸ್ ಮಾಡಿದರೂ ಅದು ನಿಂತ ನೀರಾಗಬಾರದು, ಬದಲಿಗೆ ಅದರಲ್ಲಿ ಪ್ರತಿ ಹಂತದಲ್ಲಿ ಅನ್ವೇಷಣೆ, ಸುಧಾರಣೆ ನಡೆಯುತ್ತಿರಬೇಕು. ಯಾವುದೋ ಕಾಲದಲ್ಲಿ ಏನೋ ಒಂದು ಆರಂಭಿಸಿದ್ದೆ, ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ ಅಂದರೆ ಬಿಸಿನೆಸ್​ನಲ್ಲಿ ಅದು ನಡೆಯುವುದಿಲ್ಲ. ಜನರ ಬೇಡಿಕೆಗೆ ತಕ್ಕ ಹಾಗೆ ಬದಲಾವಣೆ ಮಾಡಬೇಕಾಗುತ್ತದೆ, ಹಾಗೆ ಮಾಡಿದಾಗ ಮಾತ್ರ ಜನ ನಮ್ಮ ಪ್ರಾಡಕ್ಟ್ ತೆಗೆದುಕೊಳ್ಳುತ್ತಾರೆ. ನೀವು ಈ 5 ವಿಚಾರವನ್ನು ಅನುಸರಿಸಿದರೆ, ನಿಮ್ಮದೇ ಉದ್ಯಮದಲ್ಲಿ ಸಕ್ಸಸ್ ಕಾಣುವುದು ಸಾಧ್ಯ. ನಾನು ಈ ವಿಷಯವನ್ನೆಲ್ಲ ಐಛಜಿಚ್ಞMಟ್ಞಛಿಢಯ f್ಟಛಿಛಟಞ ಅಟಟನಲ್ಲಿರುವ ಏಟಡಿ ಠಿಟ ಠಠಿಚ್ಟಠಿ ಚ ಆಠಜ್ಞಿಛಿಠಠ ಇಟ್ಠ್ಟಛಿ?ನಲ್ಲಿ ಡಿಟೇಲ್ ಆಗಿ ಹೇಳಿದ್ದೇನೆ. ಈ ಕೋರ್ಸ್​ನಲ್ಲಿ ತಮ್ಮದೇ ಬಿಸಿನೆಸ್ ಕಟ್ಟಿ ಸಾಧನೆ ಮಾಡುವುದು ಹೇಗೆ? ಎಂಬುದು ತಿಳಿಯುತ್ತೆ. ಇಷ್ಟೇ ಅಲ್ಲ, f್ಟಛಿಛಟಞ ಚಟಟನಲ್ಲಿ ಬಿಸಿನೆಸ್, ಕೃಷಿಗೆ ಸಂಬಂಧಿಸಿದಂತೆ 800 ಕೋರ್ಸ್​ಗಳಿವೆ. ಅದರಲ್ಲಿ ಸಾಧಕರು ಹೇಳಿದ ಈ 5 ವಿಚಾರಗಳನ್ನು ಸಾಮಾನ್ಯವಾಗಿ ನೋಡುತ್ತೀರಿ. ಅವರಿಂದ ಬಿಸಿನೆಸ್​ನಲ್ಲಿ ಸಕ್ಸಸ್ ಅಗುವುದು ಹೇಗೆ? ಎಂಬುದನ್ನು ಕಲಿಯಿರಿ. ನೀವು ಸಾಧನೆ ಮಾಡಿ, ನಿಮ್ಮದೇ ಆದ ಉದ್ಯಮವನ್ನು ಕಟ್ಟಿ, ಹಲವು ಜನರಿಗೆ ಉದ್ಯೋಗ ನೀಡಿ.

ಆಲ್ ದಿ ಬೆಸ್ಟ್. 

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡ ಬಯಸುವವರಿಗೆ ಇಂಡಿಯನ್ ಮನಿ ಡಾಟ್ ಕಾಂನಲ್ಲಿ ಸುವರ್ಣಾವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ 02262116777.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net