ಪರಿಷತ್ ಚುನಾವಣೆ; ಶಿಕ್ಷಕರಿಗೆ ಹಂಚಲು ಕಾಂಗ್ರೆಸ್​ನವರು ಕೊಂಡೊಯ್ಯುತ್ತಿದ್ದ ಹಣ ವಶ..

Cash 1
Published on

ವಿಜಯಪುರ: ವಿಧಾನ ಪರಿಷತ್ ಚುನಾವಣೆ ಹಿಂದಿನ ದಿನ ಶಿಕ್ಷಕರಿಗೆ ಹಣ ಹಂಚಲು ಮುಂದಾಗಿದ್ದ ಕಾಂಗ್ರೆಸ್​ನವರು ನಗದು ಸಮೇತ ಸಿಕ್ಕಿಬಿದ್ದಿದ್ದು, ಧನರೂಪದಲ್ಲಿ ಪ್ರಭಾವ ಬೀರಲು ಹೊರಟ ತಂತ್ರ ಬಯಲಾಗಿದೆ.

ಕಾಂಗ್ರೆಸ್​ ಅಭ್ಯರ್ಥಿಯ ಪರವಾಗಿ ಹಂಚಲು ವಿಜಯಪುರದ ಗೋದಾವರಿ ಹೋಟೆಲ್ ಬಳಿ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ.

ಈ ಸಂದರ್ಭದಲ್ಲಿ ಸಿಕ್ಕ ಚೀಲದಲ್ಲಿ ಹಣವಿದ್ದ ಲಕೋಟೆಗಳು ಸಿಕ್ಕಿವೆ. ಬಹಳಷ್ಟರಲ್ಲಿ ತಲಾ 10 ಸಾವಿರ ರೂ. ಇದ್ದು, ಒಟ್ಟು 17.4 ಲಕ್ಷ ರೂ. ಪತ್ತೆಯಾಗಿವೆ. ಚುನಾವಣೆಯ ಹಿಂದಿನ ದಿನವಾದ ಇಂದು ರಾತ್ರಿ ಇದನ್ನು ಮತದಾರರಿಗೆ ನೀಡಿ ಪ್ರಭಾವ ಬೀರಲು ಯೋಜನೆ ಹಾಕಿಕೊಳ್ಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣೆ ಅಧಿಕಾರಿ (ಎಫ್‌.ಎಸ್‌.ಟಿ) ಎ.ಎಸ್‌. ಕೋಲಾರ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಕನ್ನೂರನಿಂದ ಬರುವಾಗ ತಹಸೀಲ್ದಾರ್‌ ಕಚೇರಿಯಿಂದ ಕರೆ ಬಂತು. ವಾಹನವೊಂದರಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ವಾಹನದಲ್ಲಿ ಒಟ್ಟು 17.40 ಲಕ್ಷ ರೂ.ಇದ್ದು ಕಾಂಗ್ರೆಸ್‌ ಅಭ್ಯರ್ಥಿಯ ಫೋಟೊ ಇವೆ ಎಂದರು.

ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಸಂಪರ್ಕಿಸಲಾಗಿ, ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದು ಹಣ ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ. ದೂರು ದಾಖಲಿಸಿದ ಬಳಿಕವೇ ಸಮಗ್ರ ಮಾಹಿಸಿ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net