ಲಾಸ್ ಇಲ್ಲದ ಲಾಂಡ್ರಿ ಬಿಸಿನೆಸ್: ಮನಿಮಾತು..

Laundry
Published on
ಒಂದು ಜತೆ ಬಟ್ಟೆಗೆ ಕನಿಷ್ಠ 50 ರೂಪಾಯಿ ಚಾರ್ಜ್ ಮಾಡಿದರೂ ದಿನಕ್ಕೆ 100 ಜತೆ ಕ್ಲೀನ್ ಮಾಡಿದರೆ ಸಾಕು, 5000 ರೂ. ಗಳಿಸಬಹುದು. ಇದು ಲಾಂಡ್ರಿ ಬಿಸಿನೆಸ್ ಸಾಮರ್ಥ್ಯ. ಪ್ರಸ್ತುತ ಬಟ್ಟೆ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಮಾರುಕಟ್ಟೆಗೆ ನಾನಾ ವೆರೈಟಿ ರೆಡಿಮೇಡ್, ಸಿಲ್ಕ್ ಬಟ್ಟೆಗಳು ಲಗ್ಗೆ ಇಡುತ್ತಿವೆ. ಇದಕ್ಕೆ ಅನುಗುಣವಾದ ಹಾಗೂ ಅಗತ್ಯ ಸೇವೆಗಳಿಗಾಗಿಯೇ ದಿನದಿಂದ ದಿನಕ್ಕೆ ಹೊಸ ಉದ್ಯಮಗಳು ಸೃಷ್ಟಿಯಾಗುತ್ತಿವೆ. ಅವು ಕೂಡ ಪ್ರಗತಿಯಾಗುತ್ತಿವೆ. ಅಂಥ ಬಿಸಿನೆಸ್​ಗಳಲ್ಲಿ ಲಾಂಡ್ರಿ ಬಿಸಿನೆಸ್ ಕೂಡ ಒಂದು.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಧುನಿಕರಣ ಮತ್ತು ತಂತ್ರಜ್ಞಾನ ಅಳವಡಿಕೆಯಿಂದ ಪ್ರಗತಿಯಾಗುತ್ತಿರುವ ಈ ಬಿಸಿನೆಸ್ ಕೇವಲ ನಗರ ಪ್ರದೇಶದ ಜತೆಗೆ ಪ್ರಗತಿಯಾಗುತ್ತಿರುವ ಗ್ರಾಮೀಣ ಪ್ರದೇಶದ ಕಡೆಯೂ ಮುಖ ಮಾಡಿದೆ. ಇಂಥ ಬಿಸಿನೆಸ್ ಮಾಡಿದರೆ ಯಾರಾದರೂ ಯಶಸ್ವಿಯಾಗಬಹುದು.

ಲಾಂಡ್ರಿ ಬಿಸಿನೆಸ್: ಈ ಬಿಸಿನೆಸ್ ಮಾಡುವುದಕ್ಕೆ ಯಾವುದೇ ವಿದ್ಯಾರ್ಹತೆ ಅವಶ್ಯಕತೆಯಿಲ್ಲ. ನಿಮಗೆ ಬಿಸಿನೆಸ್ ಬಗ್ಗೆ ಅನುಭವ, ಉತ್ತಮ ಕಮ್ಯುನಿಕೇಷನ್ ಸ್ಕಿಲ್ ಹಾಗೂ ಸೂಕ್ತ ಸಮಯಕ್ಕೆ ಗುಣಮಟ್ಟದ ಸರ್ವೀಸ್ ಕೊಟ್ಟರೆ ಈ ಬಿಸಿನೆಸ್​ನಲ್ಲಿ ಗೆಲವು ಸಾಧಿಸಬಹುದು. ಅಂಗಡಿ ತೆರೆದು ಅಥವಾ ನಿಮ್ಮ ಮನೆಯಲ್ಲಿಯೇ ನೀವು ಲಾಂಡ್ರಿ ಆರಂಭಿಸಬಹುದು. ಅಷ್ಟೇ ಅಲ್ಲದೆ, ಲಾಂಡ್ರಿಯಲ್ಲಿ ಹೆಸರಾಂತ ಬ್ರಾ್ಯಂಡ್​ನ ಫ್ರಾಂಚೈಸಿ ತೆಗೆದುಕೊಳ್ಳಬಹುದು. ದಿನದಿಂದ ದಿನಕ್ಕೆ ಇದರ ಮಾರುಕಟ್ಟೆ ಗಾತ್ರ ಹೆಚ್ಚುತ್ತಿರುವುದರಿಂದ ಸಾಕಷ್ಟು ಸ್ಟಾರ್ಟಪ್​ಗಳು ಹೆಚ್ಚುತ್ತಿವೆ. ಈ ಎಲ್ಲ ಕಾರಣದಿಂದ ಲಾಂಡ್ರಿ ಬಿಸಿನೆಸ್​ನಲ್ಲಿ ಉತ್ತಮ ಆದಾಯ ಗಳಿಸುವುದಕ್ಕೆ ಅವಕಾಶಗಳು ಹೆಚ್ಚಿವೆ.

ಟಾರ್ಗೆಟ್ ಗ್ರಾಹಕರು: ಸಣ್ಣ ಬಿಸಿನೆಸ್​ಗಳ ಸಾಲಿಗೆ ಬರುವ ಈ ಉದ್ಯಮ ಗ್ರಾಹಕರ ಆಧಾರದ ಮೇಲೆ ಲಾಭ ಕೈ ಸೇರುತ್ತೆ. ಆದರಿಂದ ಜನವಸತಿ ಇರುವ ಪ್ರದೇಶ ಅಂದರೆ ಹೋಟೆಲ್, ಆಸ್ಪತ್ರೆ, ಪಿಜಿ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಆರಂಭಿಸಿದ್ರೆ ಹೆಚ್ಚು ಗ್ರಾಹಕರನ್ನು ತಲುಪಬಹುದು. ಅಷ್ಟೆ ಅಲ್ಲದೆ, ಇದರಲ್ಲಿ ಬಲ್ಕ್ ಆರ್ಡರ್ ತೆಗೆದುಕೊಂಡರೆ ಪ್ರತಿನಿತ್ಯ ಕೆಲಸ ಇರುತ್ತೆ. ಇತರ ಬಿಸಿನೆಸ್​ಗೆ ಹೊಲಿಕೆ ಮಾಡಿದರೆ ಲಾಂಡ್ರಿಗೆ ವರ್ಷದ 365 ದಿನವೂ ಕೆಲಸ ಖಂಡಿತಾ. ಯಾಕಂದ್ರೆ ಬಟ್ಟೆ ಹಾಕುವವರು ಎಲ್ಲಿವರೆಗೆ ಇರುತ್ತಾರೆ ಅಲ್ಲಿವರೆಗೂ ಲಾಂಡ್ರಿ ಬಿಸಿನೆಸ್ ಇರುತ್ತದೆ. ಇಲ್ಲಿ ಗುಣಮಟ್ಟದ ಸರ್ವೀಸ್ ಮುಖ್ಯವಾಗಿರುತ್ತೆ.

ಲಾಂಡ್ರಿ ಸೆಟ್ ಆ್ಯಪ್​: ಲಾಂಡ್ರಿ ಘಟಕವನ್ನು ನಗರದ ಹೊರವಲಯ ಪ್ರದೇಶದಲ್ಲಿ ಮಾಡುವುದು ಸೂಕ್ತ. ಇದಕ್ಕೆ ನೀರು, ವಿದ್ಯುತ್ ಪೂರೈಕೆ ಮತ್ತು ತ್ಯಾಜ್ಯ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ, ವಾಹನಗಳು, ಕೆಮಿಕಲ್ ಸೂಕ್ತವಾಗಿ ನಿರ್ವಹಣೆ ಮಾಡಬೇಕು. ರ್ಪಾಂಗ್​ಗೆ ಸೂಕ್ತ ಜಾಗ ಇರುವಂತೆ ನೋಡಿಕೊಳ್ಳಬೇಕು. ಇದು ಪ್ರಮುಖ ಅಂಶವಾದರೆ ಇನ್ನು, ಲಾಂಡ್ರಿಗೆ ಬೇಕಾದ ಬಾಯ್ಲರ್, ಕೆಮಿಕಲ್, ವಾಷಿಂಗ್ ಮಷಿನ್, ಐರನ್ ಬಾಕ್ಸ್ ಮತ್ತು ಬಟ್ಟೆಗಳನ್ನು ಜೋಡಿಸಿ ಇಡುವುದಕ್ಕೆ ಸೂಕ್ತ ಸ್ಥಳ ಮತ್ತು ಇನ್ನಿತರ ಚಿಕ್ಕ ಪುಟ್ಟ ಸಾಮಗ್ರಿಗಳು ಇದ್ದರೆ ಸಾಕು ಬಿಸಿನೆಸ್ ಆರಂಭಿಸಬಹುದು. ಸಾಮಾನ್ಯವಾಗಿ ಪ್ರತಿಯೊಬ್ಬರು ಆರಂಭಿಸಬಹುದಾದ ಈ ಬಿಸಿನೆಸ್ ಹೂಡಿಕೆ ಮೇಲೆ ಖರ್ಚು ಮತ್ತು ಆದಾಯ ಇರುತ್ತದೆ. ಇದನ್ನು 50 ಸಾವಿರದಿಂದ 1 ಕೋಟಿ ರೂ. ಬಂಡವಾಳ ಹಾಕಿ ಪ್ರಾರಂಭಿಸಬಹುದು. ಇದು ಆರಂಭಿಕ ಬಂಡವಾಳ. ಇನ್ನು ರ್ವಂಗ್ ಬಂಡವಾಳ ತಿಂಗಳಿಗೆ ಬಿಸಿನೆಸ್ ಆಧಾರದ ಮೇಲೆ ಇರಲಿದೆ.

ಲಾಂಡ್ರಿ ಬಿಸಿನೆಸ್ ಲೆಕ್ಕಾಚಾರ: ಬಂಡವಾಳ ಆಧಾರದ ಮೇಲೆ ನಿರ್ಧಾರವಾಗುವಂತಹ ಆದಾಯ ಹೊಂದಿರುವ ಈ ಬಿಸಿನೆಸ್ ಕಾರ್ವಿುಕರ ಅಗತ್ಯತೆ ಸಹ ಹೆಚ್ಚು ಇರುತ್ತೆ. ಗುಣಮಟ್ಟದ ಸರ್ವೀಸ್, ಗ್ರಾಹಕರ ಜತೆ ಒಡನಾಟ, ಹೋಂ ಡೆಲಿವರಿ ಈ ಬಿಸಿನೆಸ್ ಗೆಲ್ಲಿಸುತ್ತೆ. ನೀವು ಒಂದು ಲಾಂಡ್ರಿ ಮಾಡಿ 1 ಜತೆ ಬಟ್ಟೆಗೆ ಸಂಪೂರ್ಣ ವಾಷ್ ಮತ್ತು ಐರನ್ ಸೇರಿ ಕನಿಷ್ಠ 50 ರೂ. ಚಾರ್ಜ್ ಮಾಡಿದರೂ ದಿನಕ್ಕೆ 100 ಜತೆ ಬಟ್ಟೆ ವಾಷ್ ಮಾಡಬಹುದು. ಇದರಿಂದ ನೀವು ದಿನಕ್ಕೆ 5000 ರೂ. ಗಳಿಸುವುದಕ್ಕೆ ಸಾಧ್ಯ. ಇದರಲ್ಲಿ ಶೇ. 60 ಖರ್ಚು ತೆಗೆದರೂ, ಅಂದರೆ 3000 ಸಾವಿರ ರೂ. ವೆಚ್ಚವಾದರೂ 2 ಸಾವಿರ ರೂ. ದಿನಕ್ಕೆ ಲಾಭ ಗಳಿಸಬಹುದು. ತಿಂಗಳಿಗೆ 1.5 ಲಕ್ಷ ರೂ. ಸಂಪಾದನೆ ಮಾಡಿದರೆ ಅದರಲ್ಲಿ ಸಂಪೂರ್ಣ ಖರ್ಚು ತೆಗೆದು 50-60 ಸಾವಿರ ರೂ. ಲಾಭ ಗಳಿಸುವುದಕ್ಕೆ ಸಾಧ್ಯವಿದೆ. ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡಿದರೆ ಎಷ್ಟು ಆದಾಯ ಗಳಿಸಬಹುದು ನೀವೇ ಲೆಕ್ಕ ಹಾಕಿ.

ಲೈಸೆನ್ಸ್, ಸರ್ಕಾರದ ಸೌಲಭ್ಯ: ಪ್ರತಿಯೊಬ್ಬರಿಗೂ ಆರಂಭಿಸಲು ಸಾಧ್ಯವಾದ ಈ ಬಿಸಿನೆಸ್​ಗೆ ಮಾಲಿನ್ಯ ಮಂಡಳಿಯ ಲೈಸೆನ್ಸ್, ಕಾರ್ವಿುಕರು ಮತ್ತು ಶಾಪ್ ಲೈಸೆನ್ಸ್ ಅಗತ್ಯ. ಅಲ್ಲದೆ, ಇದು ಸಣ್ಣ ಉದ್ಯಮ ವಾಗಿರುವುದರಿಂದ ಅದಕ್ಕೆ ಮುದ್ರಾಲೋನ್ ಸೇರಿ ಸಾಕಷ್ಟು ಬ್ಯಾಂಕ್​ಗಳಿಂದ ಸಾಲ ಕೂಡ ದೊರಕುತ್ತದೆ.

ffreedom appನಲ್ಲಿ ಲಾಂಡ್ರಿ ಬಿಸಿನೆಸ್ ಕೋರ್ಸ್: ಪ್ರತಿಯೊಬ್ಬರು ಕೂಡ ಬಿಸಿನೆಸ್ ಮಾಡಿ ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವಂತಹ ffreedom app ಲಾಂಡ್ರಿ ಬಿಸಿನೆಸ್ ಕೋರ್ಸ್ ಸಿದ್ಧಪಡಿಸಿದೆ. ಈ ಹಿಂದೆ ಮೆಡಿಕಲ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸಕ್ಕೆ ರಾಜೀನಾಮೆ ನೀಡಿ ಲಾಂಡ್ರಿ ಬಿಸಿನೆಸ್ ಆರಂಭಿಸಿ ಯಶಸ್ವಿಯಾದ ಮೈಸೂರಿನ ಪದ್ಮಶ್ರೀ ಹಾಗೂ ಸಂದೇಶ್ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕೋರ್ಸ್​ಗಳನ್ನು ವೀಕ್ಷಿಸಬಹುದು. ಇಷ್ಟೇ ಅಲ್ಲದೆ, ಯಶಸ್ವಿ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು ನೀವು ಕೂಡ ನಿಮ್ಮ ಶ್ರೀಮಂತಿಕೆಯ ಪ್ರಯಾಣ ಆರಂಭಿಸಬಹುದು.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಲಾಂಡ್ರಿ ಬಿಸಿನೆಸ್ ಯಾಕೆ?
  • ಸ್ಥಳದ ಆಯ್ಕೆ ಹೇಗೆ?
  • ಬಂಡವಾಳ, ನೋಂದಣಿ ಮತ್ತು ಸರ್ಕಾರದ ಸವಲತ್ತು
  • ಲಾಂಡ್ರಿ ವಿವಿಧ ಸೇವೆಗಳು
  • ಅಗತ್ಯ ಮೂಲಸೌಕರ್ಯ
  • ಸಿಬ್ಬಂದಿ ಮತ್ತು ತರಬೇತಿ
  • ಮಾರ್ಕೆಟಿಂಗ್, ಡಿಜಿಟಲೀಕರಣ ಮತ್ತು ಹೋಂ ಡೆಲಿವರಿ
  • ದೊಡ್ಡ ಕಾಂಟ್ರಾಕ್ಟ್​ಗಳನ್ನು ಪಡೆಯೋದು ಹೇಗೆ?
  • ಗ್ರಾಹಕರ ಸೇವೆ
  • ಬೆಲೆ ನಿಗದಿ ಪಡಿಸೋದು ಹೇಗೆ?
  • ಮಾರ್ಗದರ್ಶಕರ ಸಲಹೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net