

ನಾವೆಲ್ಲರೂ ನಮ್ಮ ದೈಹಿಕ ಸಾಮರ್ಥ್ಯ, ಆರೋಗ್ಯ, ಪೋಷಣೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದಿಲ್ಲ. ಒತ್ತಡ, ಆತಂಕ, ಪ್ಯಾನಿಕ್ ಅಟ್ಯಾಕ್, ಕಾರಣವಿಲ್ಲದೆ ದುಃಖಿತರಾಗುವುದು, ದಿನನಿತ್ಯದ ಚಟುವಟಿಕೆ ಮಾಡಲು ಸಾಧ್ಯವಾಗದಿರುವುದು ಅಥವಾ ಕಷ್ಟವಾಗುವುದು, ಅತಿಯಾಗಿ ಯೋಚಿಸುವುದು ಸಹ ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಕೇತ. ಹೌದು, ಮಾನಸಿಕ ಆರೋಗ್ಯವು ನಾವು ಹೇಗೆ ಯೋಚಿಸುತ್ತೇವೆ, ಭಾವಿಸುತ್ತೇವೆ, ವರ್ತಿಸುತ್ತೇವೆ ಅಥವಾ ಒತ್ತಡವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಜೀವನದಲ್ಲಿ ವಿವಿಧ ಸಂದರ್ಭಗಳು ಮತ್ತು ಸಮಸ್ಯೆಗಳು ಬಂದಾಗ ಅದನ್ನು ಎದರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.
ಉದಾಹರಣೆಗೆ ಮಗುವು ಬೆಳೆಯುತ್ತಿರುವಾಗ ದೈಹಿಕ ಆಕ್ರಮಣ, ಭಾವನಾತ್ಮಕ ನಿಂದನೆ, ಪಾಲಕರು ಅಥವಾ ಸಮಾಜದ ನಿರ್ಲಕ್ಷ್ಯವನ್ನು ಸರಿಯಾದ ಸಮಯದಲ್ಲಿ ಗಮನಹರಿಸದಿದ್ದರೆ ತೀವ್ರ ಮಾನಸಿಕತೆಗೆ ಕಾರಣವಾಗಬಹುದು. ನಿಂದನೆಯು ಖಿನ್ನತೆ, ಆತಂಕ, ಸ್ಟ್ರೆಸ್ ಮಾನಸಿಕ ಅಸ್ವಸ್ಥತೆಗಳನ್ನು ಹೆಚ್ಚು ಮಾಡಬಹುದು . ಜೀನ್ಗಳು ಅಥವಾ ಮೆದುಳಿನ ರಸಾಯನಶಾಸ್ತ್ರ, ಕುಟುಂಬದ ಇತಿಹಾಸ ಕೂಡ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು.
ಬೇರೆಯವರನ್ನು ದೂಷಿಸುವುದಲ್ಲ: ನಮ್ಮ ಮಾನಸಿಕ ಆರೋಗ್ಯ ಸಮಸ್ಯೆಗೆ ಜೀವನದಲ್ಲಿ ಬರುವ ಕಠಿಣ ಪರಿಸ್ಥಿತಿಗಳು ಅಥವಾ ಬೇರೆಯವರನ್ನು ದೂಷಿಸುವದು ತರವಲ್ಲ. ಮಾನಸಿಕ ಆರೋಗ್ಯದ ಸಂಪೂರ್ಣ ಜವಾಬ್ದಾರಿ ನಮ್ಮದಾಗಿರುತ್ತದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಾಗ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ.
1. ದಿನನಿತ್ಯ ನಿಯಮಿತ ವ್ಯಾಯಾಮ ಮಾಡುವುದು.
2. ವಿಶ್ರಾಂತಿ ಮತ್ತು ನಿದ್ರೆಗೆ ಒತ್ತು ನೀಡುವುದು
3. ಧ್ಯಾನ ಮತ್ತು ಓದುವ ಹವ್ಯಾಸ
3. ಸ್ವ-ಆರೈಕೆ ಅಭ್ಯಾಸ, ಧ್ಯಾನದಂತಹ ಚಟುವಟಿಕೆಗಳಿಂದ ಒತ್ತಡ ನಿಯಂತ್ರಿಸಬಹುದು
4. ಬಂಧುಬಳಗದ ಜೊತೆ ಸಂಪರ್ಕದಲ್ಲಿರುವುದು
5. ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಕಾಪಾಡಿಕೊಳ್ಳುವುದು.
6. ಜೀವನದಲ್ಲಿ ಬರುವ ಕಷ್ಟಗಳನ್ನು ಸ್ಥಿರ ಮನಸ್ಸಿನಿಂದ ಎದುರಿಸುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೊಂದಿರುವುದು.
6. ಕುಟುಂಬ, ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ಮುಖ್ಯ. ನಿಮಗೆ ಅವರ ಅಗತ್ಯವಿದ್ದರೆ ಅವರ ಸಹಾಯ ಕೇಳುವುದು ತಪ್ಪಲ್ಲ.
7. ಮಾನಸಿಕ ಚಿಕಿತ್ಸೆ ಅಥವಾ ಥೆರಪಿ ನಿಮ್ಮ ನಡವಳಿಕೆಗಳನ್ನು ಮತ್ತು ಮಾನಸಿಕ ಕಷ್ಟಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ.
8. ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ, ನಿರ್ವಹಿಸುವ ಮೂಲಕ, ಆರೋಗ್ಯಕರ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಬಹುದು.