More

    ಒಂದು ಮೊಟ್ಟೆಯ ಕಥೆ ನಂತರ ರಾಜ್​ ಬಿ.ಶೆಟ್ಟಿಗೆ ಊರು ಬಿಡುವ ಐಡಿಯಾ ಕೊಟ್ಟಿದ್ಯಾರು?

    ಬೆಂಗಳೂರು: ವಿಜಯವಾಣಿ (Vijayavani) ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಟ, ನಿರ್ದೇಶಕ ರಾಜ್​ ಬಿ.ಶೆಟ್ಟಿ (Raj B Shetty), ಒಂದು ಮೊಟ್ಟೆಯ ಕಥೆ ಚಿತ್ರವನ್ನು ಮುಗಿಸಿದ ನಂತರ ನಾನು ನನ್ನ ಸ್ನೇಹಿತ ಊರು ಬಿಟ್ಟು ಹೋಗುವ ಬಗ್ಗೆ ಯೋಚಿಸಿದ್ದೆವು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿಗೆ ಪರಿಹಾರ ಪಾವತಿಸಲು ಆದೇಶ; ವಾ.ಕ.ರಾ.ರ.ಸಾ. ಸಂಸ್ಥೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ

    “ಒಂದು ಮೊಟ್ಟೆಯ ಕಥೆ ಮಾಡುವಾಗ ಪರ್ಫೆಕ್ಷನ್​​ ಬಗ್ಗೆ ಒಂದು ಹುಚ್ಚಿತ್ತು. ಇದು ಹೀಗೆ ಬರಬೇಕು ಅನ್ನೋ ಹಠವಿತ್ತು! ಇದನ್ನು ಈಗೋ ಎಂದು ಕೂಡ ಕರೆಯಬಹುದು. ಇದು ನನ್ನ ಮೂಗಿನ ನೇರಕ್ಕೆ ಬಂದರೆ ಮಾತ್ರ ಸರಿ ಎಂದು ಭಾವಿಸುತ್ತಿದ್ದೆ. ಆದ್ರೆ, ಈಗ ಅದು ಕಡಿಮೆಯಾಗಿದೆ ಬಿಟ್ಟರೆ, ಅಂತ ದೊಡ್ಡ ಬದಲಾವಣೆ ಏನು ನನ್ನಲ್ಲಿ ಆಗಿಲ್ಲ” ಎಂದು ಹೇಳಿದರು.

    “ಪ್ರತಿಯೊಂದು ಕೂಡ ಸಿನಿಮಾ, ಒಂದೊಂದು ಸವಾಲುಗಳು ಬರುತ್ತಿರುತ್ತದೆ, ಅದನ್ನು ಎದುರಿಸಲೇಬೇಕು. ಅದೇ ರೀತಿಯ ಸವಾಲು ನನಗೆ ಒಂದು ಮೊಟ್ಟೆಯ ಕಥೆ ಮಾಡುವಾಗ ಕಾಡಿತ್ತು. ಈ ಚಿತ್ರ ನಮ್ಮಿಂದ ಮಾಡಲು ಸಾಧ್ಯವಾಗುತ್ತಾ? ಎಂಬುದೇ ನಮಗೆ ನಂಬಿಕೆ ಇರಲಿಲ್ಲ. ನಾವು ಮಾಡುವ ಸಿನಿಮಾ ಒಂದು ಗಂಟೆಯಾಗುತ್ತದೋ, 2 ಗಂಟೆಯಾಗುತ್ತದೋ ಎಂಬುದೇ ಗೊತ್ತಿರುವುದಿಲ್ಲ. ಅದು ಹೇಗೋ ಮಾಡುತ್ತೀವಿ, ಇದು ಹೇಗೋ ಆಗುತ್ತದೆ ಅಷ್ಟೇ!” ಎಂದು ಹೇಳಿದರು.

    ಇದನ್ನೂ ಓದಿ: ಪ್ರತಾಪ ಸಿಂಹ ವಿರುದ್ಧ ಅವಹೇಳನಕಾರಿ ಪೋಸ್ಟ್ : ಹೆಡ್‌ಕಾನ್‌ಸ್ಟೇಬಲ್ ಅಮಾನತು

    “ನಮ್ಮ ಪರಿಸ್ಥಿತಿ ಕೂಡ ಹಾಗೆಯೇ ಇತ್ತು. ಸಿನಿಮಾ ಮಾಡಿದ ಬಳಿಕ ನನ್ನ ಸ್ನೇಹಿತ ಪ್ರವೀಣ್​ಗೆ ಕರೆ ಮಾಡಿ ಕೇಳಿದೆ, ಈ ಚಿತ್ರದ ಶೂಟಿಂಗ್ ಎಲ್ಲಾ ಮಾಡಿದ್ದೇವೆ, ಇದು 20 ನಿಮಿಷ ಬಂದ್ರೆ ನಾವು ಏನು ಮಾಡೋದು ಅಂತ. ಆಗ ಅವನು ಊರು ಬಿಟ್ಟು ಹೋಗೋಣ ಎಂದು ಸಲಹೆ ಕೊಟ್ಟ” ಎಂದು ಹಾಸ್ಯಸ್ಪದವಾಗಿ ಹೇಳಿದರು. ರಾಜ್​ ಬಿ.ಶೆಟ್ಟಿ ಅವರ ಸಿನಿಪಯಣದ ಬಗ್ಗೆ ಮತ್ತಷ್ಟು ಕೂತಹಲಕಾರಿ ಸಂಗತಿಗಳನ್ನು ತಿಳಿಯಲು ಕೆಳಗೆ ನೀಡಿರುವ ಸಂದರ್ಶನದ ವೀಡಿಯೋ ಮೇಲೆ ಕ್ಲಿಕ್ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts