ಅಭಿವೃದ್ಧಿಗೆ ಕಲ್ಯಾಣಮಸ್ತು!; ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯಕ್ಕೆ ಸಚಿವ ಸಂಪುಟ ಅಸ್ತು

kalyan k
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವೇಗ ನೀಡಿ ಸಮಾನತೆ ಸಾಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಏಳು ಜಿಲ್ಲೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 11,770 ಕೋಟಿ ರೂ. ಅನುಮೋದನೆ, ಕಲ್ಯಾಣ ಭಾಗದ ಸರ್ಕಾರಿ ಕಚೇರಿಗಳಲ್ಲಿನ ಖಾಲಿ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ, ಸಭೆ ಬಳಿಕ ಮಾಧ್ಯಮಗಳೊಂದಿಗೆ ಸಭೆಯ ಮಾಹಿತಿ ಹಂಚಿಕೊಂಡರು. ಕಲ್ಯಾಣ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಸಲಾದ ಸಭೆಯಲ್ಲಿ ಒಟ್ಟು 56 ವಿಷಯಗಳು ಚರ್ಚೆಯಾಗಿ ಒಪ್ಪಿಗೆ ಪಡೆಯಲಾಗಿದೆ. ಇದರಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟ ಸಂಗತಿಗಳಾಗಿದ್ದವು ಎಂದರು.

ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ತೀರ್ವನಿಸಿದೆ. ಇದರಿಂದ ಈ ಭಾಗದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹೆಚ್ಚ್ಚುವರಿ ಹುದ್ದೆ ಮಂಜೂರು, ಪ್ರಾಂತದ ಅಭಿವೃದ್ಧಿ ಮಂಡಳಿಗೆ ತಲಾ ಒಬ್ಬ ಹೆಚ್ಚುವರಿ ಕಾರ್ಯದರ್ಶಿ, ಮುಖ್ಯ ಇಂಜಿನಿಯರ್ ಹುದ್ದೆ ಸೃಷ್ಟಿ ಜತೆಗೆ ಹೆಚ್ಚುವರಿ ಸಿಬ್ಬಂದಿ ನೀಡಲಾಗುತ್ತದೆ. ಅಲ್ಲದೇ ಸಂವಿಧಾನ ಅನುಚ್ಛೇದ 371ಜೆ ಅನ್ವಯ ಸ್ಥಳೀಯ ವೃಂದದಲ್ಲಿ (ಪ್ರಾದೇಶಿಕ ಮತ್ತು ರಾಜ್ಯಮಟ್ಟದ) ನೇಮಕಾತಿ ಮತ್ತು ಮುಂಬಡ್ತಿಯ ಲಭ್ಯವಿರುವ ಖಾಲಿ ಹುದ್ದೆ ಭರ್ತಿ ಮಾಡುವ ಬಗ್ಗೆ ಸಂಪುಟು ರ್ಚಚಿಸಿತು. ಪ್ರಸ್ತುತ 29,691 ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದು ಬಾಕಿ ಇದ್ದು, ಹಂತಹಂತವಾಗಿ ಭರ್ತಿ ಮಾಡಲು ತೀರ್ವನಿಸಲಾಯಿತೆಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ನಗರ ಪಾಲಿಕೆ ಸ್ಥಾನ: ಒಟ್ಟು ಯೋಜನೆಗಳಿಗೆ ವೆಚ್ಚ ಮಾಡಲು 12692 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ. ಜತೆಗೆ ಬೀದರ್, ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಹಾಗೆಯೇ, ಬೀದರ್, ಕಲಬುರಗಿ ಜಿಲ್ಲೆಗಳ ಎಲ್ಲಾ ಜನ ವಸತಿ ಪ್ರದೇಶಕ್ಕೆ ಜಲಜೀವನ್ ಮಿಷನ್ ಅಡಿ 7200 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ತೀರ್ವನಿಸಿರುವುದಾಗಿ ಸಿಎಂ ವಿವರಿಸಿದೆ.

ನಂಜುಂಡಪ್ಪ ಅಧ್ಯಕ್ಷತೆಯ ಸಮಿತಿ ವರದಿಯಲ್ಲಿನ ಹಿಂದುಳಿದ 119 ತಾಲೂಕುಗಳಲ್ಲಿ ಇದುವರೆಗೂ ಏನೆಲ್ಲಾ ಪ್ರಗತಿ ಆಗಿದೆ ಎನ್ನುವುದನ್ನು ಅರಿಯಲು ಆರ್ಥಿಕ ತಜ್ಞ ಗೋವಿಂದರಾವ್ ಅಧ್ಯಕ್ಷತೆಯ ಸಮಿತಿ ಮಾಡಿದ್ದೇವೆ. 6 ತಿಂಗಳಲ್ಲಿ ಸಮಿತಿ ವರದಿ ನೀಡುತ್ತದೆ ಎಂದರು.

ಹಂಪಿ ಸನಿಹ ಡಾರ್ವಿುಟರಿ: ಹಂಪಿ ಸಮೀಪದ ಕಮಲಾಪುರ ಪಟ್ಟಣದಲ್ಲಿ 15 ಕೋಟಿ ರೂ. ಅಂದಾಜು ಮೊತ್ತದಲ್ಲಿ ಡಾರ್ವಿುಟರಿ ನಿರ್ಮಾಣ ಮಾಡಲು ಅನುಮೋದನೆ ನೀಡಲಾಯಿತು. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ 8-9ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡ ಕೋಟೆಯ ಸಂರಕ್ಷಣಾ ಕಾಮಗಾರಿಗಳು ಮತ್ತು ಸಾರ್ವಜನಿಕ ಮೂಲಭೂತ ಸೌಕರ್ಯಗಳ ಅಬಿವೃದ್ಧಿ ಕಾಮಗಾರಿ 34 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿಯಲ್ಲಿರುವ ಕೃಷ್ಣಾ ನದಿಯ ಗೂಗಲ್ ಬ್ಯಾರೆಜ್ ಹಾಗೂ ಶ್ರೀ ಅಲ್ಲಮಪ್ರಭು ಗುಹಾಂತರ ದೇವಾಲಯದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಅಂಜನಾದ್ರಿ ಬೆಟ್ಟ ಬಳ್ಳಾರಿ ಕೋಟೆ ಹಾಗೂ ವೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರೋಪ್-ವೇ ಅಭಿವೃದ್ಧಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಅಶೋಕನ ಶಿಲಾಶಾಸನ ಪ್ರದೇಶದಲ್ಲಿ 10 ಕೋಟಿ ರೂ. ಅಂದಾಜಿನಲ್ಲಿ ಪ್ರವಾಸಿ ಸೌಲಭ್ಯ ಕಲ್ಪಿಸುವುದು, ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕಾಮಗಾರಿಗೆ 100 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ 77.28 ಎಕರೆ ಖಾಸಗಿ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು 29.51 ಕೋಟಿ ರೂ.ನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಯಿತು.

ಆರೋಗ್ಯ ಕ್ರಾಂತಿಗೆ ಮುನ್ನುಡಿ: ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾ ಗುತ್ತದೆ, 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾಡಲು ತೀರ್ಮಾನ ಮಾಡಿದ್ದೇವೆ. 9 ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದರಲ್ಲಿ ಎರಡನ್ನು ಜಿಲ್ಲಾ ಆಸ್ಪತ್ರೆಗಳಾಗಿ ಮೇಲ್ದರ್ಜೆ ಗೇರಿಸಲಾಗುವುದು. ಇದಕ್ಕೆ ್ಝ;892 ಕೋಟಿ ವೆಚ್ಚ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.

ಸಂಪುಟ ಸಭೆ ಮುಖ್ಯಾಂಶ

1. ಮಿನಿ ವಿಧಾನಸೌಧಗಳಿಗೆ ಪ್ರಜಾಸೌಧ ಎಂದು ನಾಮಕರಣಕ್ಕೆ ನಿರ್ಧಾರ

2. ಗ್ರಾಮೀಣ-ಪಂಚಾಯತ್ ರಾಜ್ ವಿವಿಗೆ ಸರ್ಕಾರದಿಂದಲೇ ಕುಲಪತಿ ನೇಮಕ

3. ವಕ್ಫ್ ಅನುದಾನದಲ್ಲಿ 15 ಮಹಿಳಾ ಪ.ಪೂರ್ವ ಕಾಲೇಜು ಕಟ್ಟಡ ನಿರ್ಮಾಣ

4. ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ನೀಡುವುದು

5. ಗ್ರಾಮೀಣ ಕುಡಿಯುವ ನೀರು ಸರಬರಾಜು ನೀತಿ ಜಾರಿಗೊಳಿಸುವುದು

ನೆರವಿಗೆ ಕೇಂದ್ರಕ್ಕೆ ಮೊರೆ: 371ಜೆ ಜಾರಿಯಾದ ಬಳಿಕ ಈವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಹೀಗಾಗಿ ವಿಶೇಷ ಅನುದಾನ ಕೊಡುವಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ರಾಜ್ಯ ಸರ್ಕಾರದ ಈ ಭಾಗಕ್ಕೆ ಕೊಟ್ಟಿರುವಷ್ಟೇ ಪ್ರಮಾಣದ 5000 ಕೋಟಿ ರೂ.ಗಳನ್ನು ಕೇಂದ್ರವೂ ಕೊಡಬೇಕೆಂದು ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ರಾಜಭವನದ ನಡೆ ಬಗ್ಗೆ ಅಸಮಾಧಾನ: ಸರ್ಕಾರಿ ನೌಕರರ ಕುರಿತು ಅಭಿಯೋಜನೆಗೆ ಲೋಕಾಯುಕ್ತ ಮಾಡಿದ ಶಿಫಾರಸಿನ ಮಾಹಿತಿ ಬಯಸಿದ ರಾಜ್ಯಪಾಲರ ಕ್ರಮಕ್ಕೆ ಸರ್ಕಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅನಗತ್ಯವಾಗಿ ಈ ಬಗ್ಗೆ ಮಾಹಿತಿ ಬಯಸುತ್ತಿರುವುದರಿಂದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಹಿರಿಯ ಸಚಿವರು ಸಂಪುಟ ಸಭೆ ಬಳಿಕ ತಮ್ಮ ಬೇಸರ ಹೊರಹಾಕಿದ್ದಾರೆ.

25ರಿಂದ ಆರು ದಿನವೂ ಮೊಟ್ಟೆ: ಸೆ.25ರಂದು ಯಾದಗಿರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದ ಆರು ದಿನವೂ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವುದು, ಅದೇ ದಿನ ಸಚಿವರೆಲ್ಲರೂ ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ತೀರ್ವನವಾಗಿದೆ. ಸದ್ಯ ವಾರದಲ್ಲಿ ಎರಡು ದಿನ ಮಾತ್ರ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ವಿತರಣೆ ಅವಧಿಯನ್ನು ವಾರಕ್ಕೆ ಆರು ದಿನ ವಿಸ್ತರಿಸುವ ಯೋಜನೆಗೆ ವಿಪ್ರೋ ಕೈಜೋಡಿಸಿದೆ. ಇದಕ್ಕೆ 1590 ಕೋಟಿ ರೂ. ವೆಚ್ಚವಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಒಟ್ಟು 11,770 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. | ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರವಾಸ ಪಥ ಅಭಿವೃದ್ಧಿ

* ಅನುಭವ ಮಂಟಪದಿಂದ ಅಂಜನಾದ್ರಿ ಸಂಕಲ್ಪ

* ಹಂಪಿ ಧ್ವನಿ, ಬೆಳಕು ವ್ಯವಸ್ಥೆಗೆ -ಠಿ;45 ಕೋಟಿ

*ಮಾರ್ಗ ಮಧ್ಯದ ಐತಿಹಾಸಿಕ ಸ್ಥಳ ಅಭಿವೃದ್ಧಿ

*ಬೀದರ್​ನ ಕರೇಜ್ ಸಂರಕ್ಷಣೆಗೆ ತೀರ್ಮಾನ

* ಭೂ ಅಂತರ್ಗತ ನೀರು ಪೂರೈಕೆ ವ್ಯವಸ್ಥೆ

* ಕರೇಜ್ ಕಾಮಗಾರಿಗೆ 95 ಕೋಟಿ ರೂ.

* ನಾಗಾವಿ ಅಭಿವೃದ್ಧಿಗೆ 68 ಕೋಟಿ ರೂ.

* ನಾಗಾವಿ ಕನ್ನಡದ ಪ್ರಾಚೀನ ವಿಶ್ವವಿದ್ಯಾಲಯ

* ಯಾದಗಿರಿ ಜಿಲ್ಲೆ, ಕೋಟೆ ಅಭಿವೃದ್ಧಿಗೆ ಒತ್ತು

* ಕೋಟೆಗಳ ಕಾಮಗಾರಿಗೆ 95 ಕೋಟಿ ರೂ.

* ಯಾದಗಿರಿ ಸಿರಿವಾಳ ಗ್ರಾಮಕ್ಕೆ ವಿಶೇಷ ಒತ್ತು

* ಗ್ರಾಮದ ದೇಗುಲಗಳ ಅಭಿವೃದ್ಧಿಗೆ -ಠಿ;75 ಕೋಟಿ

* ದಖನ್ ಸ್ಮಾರಕ, ಕೋಟೆಗೆ ವಿಶ್ವಮಾನ್ಯತೆ ಯತ್ನ

* ಪಾರಂಪರಿಕ ತಾಣವಾಗಿ ಘೊಷಣೆಗೆ ಶಿಫಾರಸು

* ಮೂಲಭೂತ ಪ್ರವಾಸಿ ಸೌಲಭ್ಯಕ್ಕೆ -20 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net