ಮೊದಲಿಗೆ ಈ ಆದೇಶದಡಿಯಲ್ಲಿ ಯಾವ ವೀಸಾಗಳಿಗೆ ‘ತಾತ್ಕಾಲಿಕ ನಿರ್ಬಂಧ’ ವಿಧಿಸಲಾಗಿದೆ ಮತ್ತು ಅಂತಹ ನಿರ್ಬಂಧದ ಅವಧಿ ಬಗ್ಗೆ ಸ್ವಲ್ಪ ಗಮನಿಸಬೇಕು. ನಿಷೇಧಕ್ಕೆ ಒಳಗಾಗಿರುವ ವೀಸಾ ಏ1ಆ, ಏ4, ಔ1. ಹಾಗೂ ನಿಷೇಧದ ಅವಧಿ ಈ ವರ್ಷದ ಡಿಸೆಂಬರ್ ತನಕ. ಇಂತಹ ವೀಸಾಗಳನ್ನು ತಾತ್ಕಾಲಿಕ ನೆಲೆಯಲ್ಲಿ ಅಮೆರಿಕಕ್ಕೆ ಬರುವ ಸಾಫ್ಟ್ವೇರ್ ಇಂಜಿನಿಯರಿಂಗ್ ವೃತ್ತಿಪರರಿಗೆ ನೀಡಲಾಗುತ್ತದೆ. ಇದರಲ್ಲಿ ಪ್ರತಿಭಾವಂತ ವೃತ್ತಿಪರ ಪದವೀಧರರು ಮತ್ತು ಅವರ ಪತಿ ಅಥವಾ ಪತ್ನಿ ಸೇರುತ್ತಾರೆ. ಆದರೆ ಎಚ್4 ಎಂಬುದು ಅವಲಂಬಿತರ ವೀಸಾ. ಅವರು ಉದ್ಯೋಗ ಮಾಡುವಂತಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಈ ವರ್ಗದ ಉದ್ಯೋಗಿಗಳು ಭಾರತೀಯ ಮೂಲದ ಸಂಸ್ಥೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಮುಂತಾದ ಅಮೆರಿಕ ಮೂಲದ ಸಂಸ್ಥೆಗಳೇ ಹೆಚ್ಚು. ಈ ನಿಷೇಧದಿಂದ ಇಂಥ ಮಾಹಿತಿ-ತಂತ್ರಜ್ಞಾನ ದಿಗ್ಗಜರಿಗೇ ಹೆಚ್ಚಿನ ಹೊಡೆತ ಬೀಳುತ್ತದೆ. ಆದ್ದರಿಂದ ಗೂಗಲ್ ಸಂಸ್ಥೆಯ ಮುಖ್ಯಸ್ಥ, ಭಾರತೀಯ ಮೂಲದ ಸುಂದರ ಪಿಚ್ಚೈ ಈ ಆದೇಶವನ್ನು ಖಂಡಿಸಿದ್ದಾರೆ. ಎರಡನೆಯದಾಗಿ ಇಂಥ ವೀಸಾಗಳಿಗೆ ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಒಟ್ಟು 85,000ದಷ್ಟು ಈ ವೀಸಾ ನೀಡಲಾಗುತ್ತದೆ. ಆದರೆ ಸ್ವೀಕೃತವಾಗುವ ಅರ್ಜಿಗಳ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚು. ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಆರೋಗ್ಯ ಕ್ಷೇತ್ರದ ದುಬಾರಿ ವೆಚ್ಚದ ನಿರ್ವಹಣೆಗೆ ಈ ವೀಸಾ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಿ, ಸ್ವೀಕೃತವಾದ ಅರ್ಜಿಗಳಲ್ಲಿ ಲಾಟರಿ ವಿಧಾನದಲ್ಲಿ ಆಯ್ಕೆ ಮಾಡುವ ಪದ್ಧತಿ ಜಾರಿಗೊಳಿಸಿದರು. ಟ್ರಂಪ್ ಅಧ್ಯಕ್ಷರಾದ ಕೂಡಲೇ ‘ಒಬಾಮ ಕೇರ್’ ಆರೋಗ್ಯ ಯೋಜನೆಯನ್ನು ರದ್ದುಪಡಿಸಿದರು, ಆದರೂ ಶುಲ್ಕವನ್ನು ಮಾತ್ರ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಿಸಿದರು. 2020ರ ಸಾಲಿನ ಅರ್ಜಿ ಆಹ್ವಾನ ಪ್ರಕ್ರಿಯೆ ಮುಗಿದಿದೆ. ಕೋಟ್ಯಂತರ ಡಾಲರ್ ಖಜಾನೆಗೆ ಸೇರಿದೆ. ಈ ಹಂತದಲ್ಲಿ ವೀಸಾ ಪ್ರಕ್ರಿಯೆಯನ್ನು ‘ತಾತ್ಕಾಲಿಕ ತಡೆಹಿಡಿಯಲಾಗಿದೆ’! ಈ ನಿರ್ಬಂಧಗಳು ವೈದ್ಯಕೀಯ ಕ್ಷೇತ್ರದ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಅನ್ವಯಿಸುವುದಿಲ್ಲವಂತೆ, ಹೇಗಿದೆ ಕರಾಮತ್ತು? ಅವರು ಈಗಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಬರುವುದೂ ಇಲ್ಲ, ಅದು ಬೇರೆ ವಿಷಯ. ಇದೆಲ್ಲ ಏಕೆಂದರೆ, ಇದೇ ನವೆಂಬರ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿದೆ. ಕರೊನಾ ನಿರ್ವಹಣೆ