ಜನಮತ: ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊರ ಬರುವುದು ಹೇಗೆ?

Janamata
Published on

ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ಭಾರತದ ಮೇಲೂ ಬಿದ್ದು, ಹಲವು ವಲಯಗಳು ನಷ್ಟ ಅನುಭವಿಸಿದವು. ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿಯಿತು.ತೆರಿಗೆ ಸಂಗ್ರಹ ಪ್ರಮಾಣ ಕೂಡ ಕಡಿಮೆಯಾಯಿತು.

ಇದರಿಂದ, ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ ಆಗಿ, ಯುವಸಮೂಹ, ಜನಸಾಮಾನ್ಯರು ಸಂಕಷ್ಟ ಪಡುವಂತಾಯಿತು. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಕರೊನಾ ವೈರಸ್​ನ ಆಘಾತದಿಂದ ಹಲವು ದೇಶಗಳ ಷೇರುಪೇಟೆಗಳು ಕುಸಿದಿದ್ದು, ಭಾರತವು ಹೊರತಾಗಿ ಉಳಿದಿಲ್ಲ. ಷೇರು ಮಾರುಕಟ್ಟೆ ಮಾತ್ರವಲ್ಲ ಪ್ರವಾಸೋದ್ಯಮ, ವ್ಯಾಪಾರ ಸೇರಿ ಹಲವು ರಂಗಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ.

ಈಗ ಇದರಿಂದ ಹೊರಬರುವುದು ಹೇಗೆ ಎಂಬ ದಾರಿ ಕಾಣದಂತಾಗಿದೆ. ಈಗಾಗಲೇ ದೇಶದ ಜಿಡಿಪಿ ಕುಸಿದಿದೆ. ಆರ್ಥಿಕ ರಂಗದಲ್ಲಿ ಇದೇ ನೈರಾಶ್ಯದ ಸ್ಥಿತಿ ಮುಂದುವರಿದರೆ ಬರುವ ದಿನಗಳು ಮತ್ತಷ್ಟು ಕಷ್ಟದಿಂದ ಕೂಡಿರಲಿವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಸರ್ಕಾರ, ಆರ್ಥಿಕ ತಜ್ಞರು ಈ ನಿಟ್ಟಿನಲ್ಲಿ ಪರ್ಯಾಯ ಕ್ರಮಗಳನ್ನು ಶೋಧಿಸಬೇಕಾದ ಅಗತ್ಯತೆ ಇದೆ. ಆರ್ಥಿಕತೆಗೆ ಚೇತರಿಕೆ ಒದಗಿಸುವ ಕ್ರಮಗಳಿಗೆ ಮೊದಲ ಆದ್ಯತೆ ನೀಡುವಂತಾಗಲಿ.

| ರವಿ ಮಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net