

ನಾನು 3ನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮೂರಿಂದ 4 ಕಿ.ಮೀ. ದೂರದ ಸ್ಕೂಲ್ಗೆ ನನ್ನ ಸೇರಿಸಿದ್ದರು ಅಪ್ಪಾ. ಸ್ಕೂಲ್ ಬಸ್ ಡ್ರೖೆವರ್ ಅಂಕಲ್ ಅಂದರೆ ಎಲ್ಲ ಮಕ್ಕಳಿಗೂ ಪ್ರೀತಿ. ಅದೊಂದು ದಿನ ಡ್ರೖೆವರ್ ಅಂಕಲ್ನನ್ನು ಕೆಲಸದಿಂದ ತೆಗೆದುಬಿಟ್ಟರು. ನಾನು ಮನೆಗೆ ಹೋಗಿ, ‘ನಮಗೆ ಬೇರೆ ಡ್ರೖೆವರ್ ಅಂಕಲ್ ಬರ್ತಾರೆ ಅಪ್ಪಾ; ಹಳೇ ಅಂಕಲ್ ಬರ್ತಾ ಇಲ್ಲ’ ಅಂದೆ. ಯಾಕೆ ಅಂತ ಕೇಳಿದಾಗ ನಾನು ಗೊತ್ತಿಲ್ಲ ಅಂದೆ. ‘ಅಪ್ಪಾ ಡ್ರೖೆವರ್ ಅಂಕಲ್ ಮತ್ತೆ ಬರ್ಬೆಕು ಅಂದ್ರೆ ಏನು ಮಾಡ್ಬೇಕು’ ಅಂತ ಕೇಳಿದಕ್ಕೆ ಪ್ರತಿಭಟನೆ ಮಾಡ್ಬೇಕು ಅಂದ್ರು. ಅಪ್ಪಾ ಹೇಳಿಕೊಟ್ಟ ಹಾಗೆ ಸ್ಕೂಲ್ ಮುಂದೆ ಒಬ್ಬಳೇ ಕೂತು ಪ್ರತಿಭಟನೆ ಮಾಡಿದೆ. ಟೀಚರ್ ಬೆತ್ತ ತಂದು ಬಾಸುಂಡೆ ಬರುವ ಹಾಗೆ ಹೊಡೆದರು. ಆಮೇಲೆ ಸ್ಕೂಲ್ ಮ್ಯಾನೇಜ್ವೆುಂಟ್ನವರು ಡ್ರೖೆವರ್ ಅಂಕಲ್ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರು. ಆ ಚಿಕ್ಕ ವಯಸ್ಸಿನಲ್ಲಿಯೇ ತಪ್ಪನ್ನು ಪ್ರತಿಭಟಿಸಲು ಹೇಳಿಕೊಟ್ಟ ನನ್ನಪ್ಪ ನಿಜವಾದ ಹೀರೋ ಅಲ್ಲವೇ?
| ಮೇಘಾ ಲೋಕೇಶ್ ಬಾಬು