ಹೋರಾಟದಿಂದ ಮಾತ್ರ ಯೋಜನೆ ಸಾಧ್ಯವೇನೋ...?

Railway 16 March 20
Published on

ಸಮಸ್ತ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರವು ಕೈಬಿಟ್ಟಿದೆ. ಇದಕ್ಕೆ, ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಹಾಗೂ ಕಾಣದ ಕೈಗಳ ಕೈವಾಡ ಮತ್ತು ರಾಜಕೀಯ ಪಕ್ಷಗಳ, ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೇರವೇರಿಸಿದ್ದ ಈ ಹುಬ್ಬಳ್ಳಿ-ಅಂಕೋಲಾ ರೈಲ್ವೆಮಾರ್ಗ ನಿರ್ವಣದ ಕೆಲಸ ಹಲವು ಅಡೆತಡೆಗಳಿಂದ ನನೆಗುದಿಗೆ ಬಿದ್ದಿದೆ. ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ವಿರೋಧ ಪಕ್ಷದಲ್ಲಿರುವಾಗ ಒಂದು ಮಾತು ಹಾಗೂ ಅದೇ ಪಕ್ಷ ಆಡಳಿತದಲ್ಲಿ ಬಂದಾಗ ಇನ್ನೊಂದು ತರಹ ಮಾತನಾಡುವುದರಿಂದ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲಿ ್ಲ ಕುಂಟುತ್ತಲೇ ಸಾಗಿವೆ. ಜನಪ್ರತಿನಿಧಿಗಳ ಸುಳ್ಳು ಆಶ್ವಾಸನೆಗಳನ್ನು ಕೇಳಿ ಜನರು ಬೇಸತ್ತು ಹೋಗಿದ್ದಾರೆ.

ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿ ಹಗಲಿರುಳು ಅಭಿವೃದ್ಧಿ-ಅಭಿವೃದ್ಧಿ ಎಂದು ಜಪಿಸುವುದು ಕೇವಲ ಚುನಾವಣೆ ತಂತ್ರವೇ? ಉತ್ತರ ಕರ್ನಾಟಕ ಜನತೆ ಅದರಲೂ ್ಲ ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಸರ್ಕಾರಕ್ಕೆ ಜ್ಞಾನೋದಯ ಆಗಬಹುದೇನೋ?

ಕೆಲ ‘ಬುದ್ಧಿಜೀವಿ’ಗಳ ಒತ್ತಡಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಹಾಗೂ ಅಧಿಕಾರಿಗಳು ಮಣಿದರೆ? ಈಗಲಾದರೂ ನಮ್ಮ ಘನ ಸರ್ಕಾರ ಈ ರೈಲ್ವೆ ಮಾರ್ಗ ಯೋಜನೆಯನ್ನು ಪುನಃ ಪರಿಶೀಲಿಸಿ ಯಾರ ಒತ್ತಡಕ್ಕೂ ಮಣಿಯದೆ ಶೀಘ್ರವಾಗಿ ಅನುಮೋದನೆ ನೀಡಿ ಅನುದಾನವನ್ನು ಬಿಡುಗಡೆ ಮಾಡಬೇಕು. ಇಂದಿನ ವೈಜ್ಞಾನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳಿಗೆ ಹೆಚ್ಚಿನ ಹಾನಿಯಾಗದಂತೆ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕು.

| ರಾಜಸ ಸದಾನಂದ ತೋಡುರ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net