

| ಅನೀಶ್ ಬಿ., ಕೊಪ್ಪ
ಏನಿದು ರೋಬೋ ವೆಹಿಕಲ್?
ರೋಬೋ ವೆಹಿಕಲ್/ಡ್ರೖೆವರ್ಲೆಸ್ ವಾಹನವು ತನ್ನ ಪರಿಸರವನ್ನು ಗ್ರಹಿಸಲು ಕಡಿಮೆ ಅಥವಾ ಮಾನವ ಸಹಾಯವೇ ಇಲ್ಲದೆ ಸುರಕ್ಷಿತ ಚಾಲನೆಗನುಗುಣವಾಗಿ ರೂಪುಗೊಂಡಿರುತ್ತದೆ. ಥರ್ವೇಗ್ರಾಫಿಕ್ ಕ್ಯಾಮೆರಾ, ರೇಡಾರ್, ಲಿಡಾರ್ (Mಟಠಿಜಿಟ್ಞ ಠಛ್ಞಿಠಟ್ಟ), ಸೋನಾರ್, ಜಿಪಿಎಸ್, ಓಡೋಮೆಟ್ರಿಗಳಂತಹ ವಿವಿಧ ರೀತಿಯ ಸೆನ್ಸರ್ಗಳನ್ನು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಗ್ರಹಿಸಲು ಸ್ವಯಂ-ಚಾಲನಾ ವಾಹನಗಳು ಒಳಗೊಂಡಿರುತ್ತವೆ. ಸುಧಾರಿತ ನಿಯಂತ್ರಣ ವ್ಯವಸ್ಥೆಗಳು ಸೂಕ್ತವಾದ ಸಂಚರಣಾ ಮಾರ್ಗಗಳನ್ನು ಗುರುತಿಸಲು ಸಂವೇದನಾ ಮಾಹಿತಿಯನ್ನು ಅರ್ಥೈಸಿಕೊಳ್ಳುತ್ತವೆ. ಹಾಗೆಯೇ ಅಡೆತಡೆಗಳು ಮತ್ತು ಸಂಬಂಧಿತ ಚಿಹ್ನೆಗಳನ್ನು ಕೂಡ ಅರ್ಥೈಸಿಕೊಳ್ಳುತ್ತವೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ನಿಯಂತ್ರಣ ವಿಧಾನಗಳು ವಾಹನವನ್ನು ನಿಯಂತ್ರಿಸಲು ಮತ್ತು ವಿವಿಧ ಸ್ವಾಯತ್ತ ಚಾಲನಾ ಕಾರ್ಯಗಳನ್ನು ನಡೆಸಲು ಪ್ರೇರೇಪಿಸುತ್ತವೆ. ರೋಬೋ ವಾಹನಗಳ ಸಾಫ್ಟ್ವೇರ್ ರೀ-ಪೋ›ಗ್ರಾಮೇಬಲ್ ಆಗಿರುವುದರಿಂದ ಬದಲಾವಣೆಗೆ ಯೋಗ್ಯವಾಗಿ ವಾಹನದ ಮಾಲೀಕ ತನ್ನ ವಾಹನವನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ನಿರುದ್ಯೋಗದ ಬವಣೆ
ರಾವಣನ ಪುಷ್ಪಕವಿಮಾನದ ಕಲ್ಪನೆಯಿಂದ ಇಂದಿನವರೆಗೂ ಜಟಕಾಬಂಡಿ, ದ್ವಿಚಕ್ರ-ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಚಾಲಕನೆಂದರೆ ವಾಹನ ಸಂಚಾರದ ಅವಿಭಾಜ್ಯ ಅಂಗವೇ ಆಗಿದ್ದಾನೆ. ಟ್ರಕ್, ಜೆಸಿಬಿ, ಟ್ರಾ್ಯಕ್ಟರ್ನಂತಹ ವಾಹನ ಓಡಿಸಲಂತೂ ವಿಶೇಷ ಪರಿಣತಿಯೇ ಬೇಕು. ಅಂಥದ್ದರಲ್ಲಿ ಚಾಲಕರಹಿತ ವಾಹನಗಳು ನಮ್ಮ ರಸ್ತೆಗಳಿಗೆ ಇಳಿಯುವುದು ಸಮಂಜಸವೇ ಅಲ್ಲವೇ ಎಂಬುದು ಪ್ರಶ್ನಾರ್ಹವಾಗಿದೆ. ಆಡಳಿತಾರೂಢ ಸರ್ಕಾರವಂತೂ ಚಾಲಕರಹಿತ ವಾಹನವು ಭಾರತದಂತಹ ಅತ್ಯಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ದೇಶಕ್ಕೆ ಬೇಡವೇ ಬೇಡ ಎಂಬ ನಿಲುವನ್ನು ತಳೆದಿದೆ.
ಭಾರತದ ಔದ್ಯೋಗಿಕ ರಂಗದಲ್ಲಿ ಚಾಲಕನ ಉದ್ಯೋಗ ಮಹತ್ತರ ಪಾತ್ರ ವಹಿಸುತ್ತವೆ. ಲಕ್ಷಾಂತರ ಕುಟುಂಬಗಳು ಆ ವೃತ್ತಿಯನ್ನು ಅವಲಂಬಿಸಿ, ಉದರಪೋಷಣೆಗಾಗಿ ಹಗಲಿರುಳು ದುಡಿಯುತ್ತಿವೆ. ಶಾಲಾ-ಕಾಲೇಜುಗಳ ಶಿಕ್ಷಣದ ಮಟ್ಟ ಕಡಿಮೆ ಇದ್ದರೂ ಚಾಲನಾ ಕೌಶಲ ಹೊಂದಿದ ವ್ಯಕ್ತಿ, ಕನಿಷ್ಠ ವಿದ್ಯಾರ್ಹತೆ ಯೊಂದಿಗೆ ವಾಹನ ಚಾಲನೆಯ ಮೂಲಕ ದೇಶ ಸುತ್ತಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಪ್ರಪಂಚದ ಆಗುಹೋಗುಗಳನ್ನು ತನ್ನ ವಿವೇಚನಾ ಕಕ್ಷೆಗೆ ತಂದುಕೊಳ್ಳುವ ರಂಗ ಇದಾಗಿದೆ. ಇಷ್ಟೊಂದು ಔದ್ಯೋಗಿಕ ಅವಕಾಶಗಳ ಹೆಬ್ಬಾಗಿಲಿನಂತಿರುವ ಈ ರಂಗದಲ್ಲಿ ರೋಬೋ ವಾಹನಗಳು ಕಾಲಿಟ್ಟರೆ ಭಾರತದಲ್ಲಿ ಚಾಲನಾ ವೃತ್ತಿಯನ್ನೇ ದುಡಿಮೆ ಆಗಿಸಿಕೊಂಡಿರುವ 70-80 ಲಕ್ಷ ಜನತೆಗೆ ನಿರುದ್ಯೋಗದ ಬವಣೆಗೆ ಬೀಳುವುದು ನಿಶ್ಚಿತ. ಹೀಗಾಗಿಯೇ ಭಾರತ ದಲ್ಲಿ ಡ್ರೖೆವರ್ಲೆಸ್ ಕಾರುಗಳನ್ನು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಸಾರಿಗೆ ಸಚಿವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಯಾಕೆ ಸಮಂಜಸವಲ್ಲ?
ಸ್ವಯಂಚಾಲಿತ ವಾಹನ ರಸ್ತೆಗಿಳಿಯುವುದರ ಬಗ್ಗೆ ತುಸು ಯೋಚಿಸಲು ಹೊರಟರೆ ನಮ್ಮಲ್ಲಿ ಅದನ್ನು ನಿರ್ವಹಿಸಲು ಗೊತ್ತಿರುವವರಿದ್ದಾರೆಯೇ? ಹಾಳಾದರೆ ರೋಬೋ ವಾಹನವನ್ನು ರಿಪೇರಿ ಮಾಡುವ ಪರಿಣತರನ್ನು ತಕ್ಷಣದಲ್ಲಿ ಅಣಿಗೊಳಿಸಲು ಸಾಧ್ಯವೇ? ಟ್ರಾಫಿಕ್,ತಿರುವು-ಮುರುವು, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಸ್ವಯಂಚಾಲಿತ ವಾಹನ ಎಷ್ಟು ದಿನ ಓಡಾಡಬಹುದು? ಎಂಬುದರ ಕುರಿತು ಪ್ರಶ್ನೆಗಳು ಮೂಡುವುದು ಸಾಮಾನ್ಯ. ಇದರ ಬಗ್ಗೆ ವಿವೇಚಿಸಿದಾಗ ನಮಗೆ ಭಾರತದಲ್ಲಿ ರೋಬೋ ಕಾರ್ ರೋಡಿಗಿಳಿಯುವುದು ಸಮಂಜಸವಲ್ಲ ಎಂದೆನಿಸುತ್ತದೆ.
ಹ್ಯಾಕ್ ಆಗಬಹುದು!
ಚಾಲಕರ ಉದ್ಯೋಗವನ್ನು ಕಸಿದುಕೊಳ್ಳಬಹುದಾದ ಈ ಸ್ವಯಂಚಾಲನಾ ಕಾರುಗಳು ಹ್ಯಾಕಿಂಗ್ಗೆ ಸಹ ಗುರಿಯಾಗಬಹುದು. ಹೌದು.. ಸ್ವಯಂಚಾಲಿತ ಕಾರುಗಳು ಪರಸ್ಪರ ಸಂವಹನ ಮತ್ತು ಸಮನ್ವಯಕ್ಕೆ ಒಂದೇ ನೆಟ್ವರ್ಕ್ ಪೋ›ಟೋಕಾಲ್ ಹಂಚಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಕಾರುಗಳು ಒಂದೇ ನೆಟ್ವರ್ಕ್ ಹಂಚಿಕೊಂಡರೆ, ಅವುಗಳ ನೆಟ್ವರ್ಕ್ ಹ್ಯಾಕಿಂಗ್ಗೆ ಸಹ ಗುರಿಯಾಗಬಹುದು. ಒಂದು ಸಣ್ಣ ಹ್ಯಾಕ್ ಕೂಡ ರೋಬೋ ಕಾರಿನ ಮಾರ್ಗ ತಪ್ಪಿಸಲಿಕ್ಕಾಗಿಯೋ ಅಥವಾ ಅಪಘಾತಕ್ಕೆ ಎಡೆಮಾಡಿಕೊಡಬಹುದು.
ಸಾಧಕಗಳೇನು?
ಸ್ವಯಂಚಾಲಿತ ಕಾರಿನಲ್ಲಿನ ಅತ್ಯಾಧುನಿಕ ವ್ಯವಸ್ಥೆಗಳು ಮತ್ತು ಅಲ್ಗಾರಿಥಮ್ಳು ಬಹುಪಾಲು ಮಾನವ ದೋಷವನ್ನು ತಪ್ಪಿಸಬಹುದಾಗಿವೆ. ಕುಡಿದು ಚಾಲನೆ ಸೇರಿದಂತೆ ಸಾಮಾನ್ಯ ರಸ್ತೆ ಅಪಘಾತಗಳಿಗಿನ ಪ್ರಮುಖ ಕಾರಣಗಳನ್ನು ಸ್ವಯಂ-ಚಾಲನಾ ಕಾರುಗಳು ಬಗೆಹರಿಸಬಲ್ಲವು. ಇವುಗಳು ರಸ್ತೆಗಿಳಿದರೆ ಅಪಘಾತಗಳನ್ನು ಶೇ.90 ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.