More

    ಗಗನಯಾತ್ರಿಯನ್ನು ರಹಸ್ಯವಾಗಿ ವಿವಾಹವಾದ ದಕ್ಷಿಣದ ಜನಪ್ರಿಯ ನಟಿ; 40 ದಿನಗಳ ನಂತರ ಬಹಿರಂಗ

    ನವದೆಹಲಿ: 2024 ರಲ್ಲಿ ಅನೇಕ ಸ್ಟಾರ್​​​​ಗಳು ಮದುವೆಯಾಗಲಿದ್ದಾರೆ. ಇನ್ನು ಅನೇಕರು ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರ್ಷದ ಆರಂಭದಲ್ಲಿ ಅಮೀರ್ ಖಾನ್ ಅವರ ಪುತ್ರಿ ಆಯ್ರಾ ಖಾನ್ ಮತ್ತು ನೂಪುರ್ ಶಿಖರೆ ಅವರು ರಾಜಮನೆತನದ ಶೈಲಿಯಲ್ಲಿ ಮದುವೆಯಾದರು. ಇತ್ತೀಚೆಗೆ ಬಾಲಿವುಡ್ ನಟಿ ರಾಕುಲ್ ಪ್ರೀತ್, ನಟ ಜಾಕಿ ಭಗ್ನಾನಿ ಅವರೊಂದಿಗೆ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾದರು.

    ಸದ್ಯ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಎಲ್ಲರಿಗೂ ಗೊತ್ತಿರುವಂತೆ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಬಹಳ ದೊಡ್ಡ ಮಟ್ಟದಲ್ಲಿ ಮದುವೆಯಾಗುತ್ತಾರೆ. ಆದರೆ ಕೆಲವು ಸೆಲೆಬ್ರಿಟಿಗಳು ಮಾತ್ರ ರಹಸ್ಯವಾಗಿ ಮದುವೆಯಾಗುತ್ತಾರೆ. ಅದು ವರ್ಷಗಳು ಮತ್ತು ತಿಂಗಳುಗಳ ನಂತರ ರಿವೀಲ್ ಆಗುತ್ತದೆ. ಅಂದಹಾಗೆ ಇತ್ತೀಚೆಗೆ ನಟಿಯೊಬ್ಬರು ಸೀಕ್ರೆಟ್ ಆಗಿ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Lenaa ലെന (@lenaasmagazine)

    ದಕ್ಷಿಣದ ಪ್ರಸಿದ್ಧ ನಟಿ
    ಇತ್ತೀಚೆಗಷ್ಟೇ ನಟಿಯೊಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆ ನಟಿ ಬೇರಾರೂ ಅಲ್ಲ, ಲೀನಾ ಕುಮಾರ್. ಲೀನಾ ಕುಮಾರ್ ಮಲಯಾಳಂ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಅವರು ‘ಸ್ನೇಹಮ್’ ಮತ್ತು ‘ಟ್ರಾಫಿಕ್’ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಲೀನಾ ಮದುವೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, 40 ದಿನಗಳ ಹಿಂದೆ ಗಗನ್ಯಾನ್‌ ಗಗನಯಾತ್ರಿಯನ್ನು ಮದುವೆಯಾಗಿದ್ದಾರೆ. ಈಗ ಅವರು ತಮ್ಮ ರಹಸ್ಯ ವಿವಾಹವನ್ನು ಬಹಿರಂಗಪಡಿಸಿದ್ದಾರೆ.

    ಗಗನಯಾತ್ರಿ ಜೊತೆ ವಿವಾಹ
    ಇತ್ತೀಚೆಗೆ ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ‘ಗಗನ್‌ಯಾನ್ ಮಿಷನ್‌’ ಗಾಗಿ ತರಬೇತಿ ಪಡೆಯುತ್ತಿರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು.

    ಇದರಲ್ಲಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್ ಮತ್ತು ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರ ಹೆಸರನ್ನು ಗಗನ್‌ಯಾನ್ ಮಿಷನ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಮೋದಿ ಈ ಪೈಲಟ್‌ಗಳನ್ನು ಮೊದಲ ಬಾರಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಸಾರ್ವಜನಿಕವಾಗಿ ಭೇಟಿ ಮಾಡಿದರು. ಈ ನಾಲ್ಕು ಗಗನಯಾತ್ರಿಗಳಲ್ಲಿ ಒಬ್ಬರು ನಟಿ ಲೀನಾ ಕುಮಾರ್ ಅವರ ಪತಿ. ಫೈಟರ್ ಪೈಲಟ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರೇ ಲೀನಾ ಪತಿ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Lenaa ലെന (@lenaasmagazine)

    ಹೌದು, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಲೀನಾ ಕುಮಾರ್ ಅವರ ಪತಿ. ಗಗನ್‌ಯಾನ್ ಮಿಷನ್‌ಗೆ ತೆರಳಿದ್ದಕ್ಕಾಗಿ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರು ಮೋದಿಯಿಂದ ವಿಶೇಷ ಗೌರವವನ್ನು ಪಡೆದ ನಂತರ, ಲೀನಾ ಕುಮಾರ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ಇತ್ತೀಚಿನ ವಿಡಿಯೋ ಹಂಚಿಕೊಂಡಿದ್ದು, ಅವರು ತಮ್ಮ ಪತಿ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ, ನಟಿ ತನ್ನ ಪತಿ ಗಗನಯಾತ್ರಿ ಪ್ರಶಾಂತ್ ನಾಯರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

    ಈ ವಿಡಿಯೋ ಹಂಚಿಕೊಳ್ಳುವಾಗ ಶೀರ್ಷಿಕೆಯಲ್ಲಿ ಜನವರಿ 17, 2024 ರಂದು ಅಂದರೆ ಇಂದಿಗೆ 40 ದಿನಗಳ ಮೊದಲು, ಅವರು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಮದುವೆಯ ವಿಚಾರವನ್ನು ನಾವು ಎಲ್ಲರಿಗೂ ಗೌಪ್ಯವಾಗಿಟ್ಟಿದ್ದೇವೆ. ಈ ಘೋಷಣೆಗೆ ಇಂದು ಸರಿಯಾದ ದಿನ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪ್ರಶಾಂತ್ ಅವರಿಗೆ ಬಾಹ್ಯಾಕಾಶ ಪ್ರಯಾಣ ವಿಭಾಗವನ್ನು ನೀಡಿರುವುದು ನಮಗೆ ಮತ್ತು ಕೇರಳಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದೂ ಅವರು ತಿಳಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts