More

    ಏನ್​ ಶಾಟ್​ ಗುರು ಚಟಾಪಟ ಚಟಾಪಟ… ಆರ್​ಸಿಬಿ ಬೆಂಕಿ ಬ್ಯಾಟಿಂಗ್​, ಫ್ಯಾನ್ಸ್​ ಫುಲ್​ ಖುಷ್​

    ಬೆಂಗಳೂರು: ನಿನ್ನೆ (ಫೆ.27) ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ 5ನೇ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂದನಾ (47) ಹಾಗೂ ಸಬ್ಬಿನೇನಿ ಮೇಘನಾ (ಅಜೇಯ 36) ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ಎದುರು 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವ ದಾಖಲಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದನಾ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿದರು. ಕೇವಲ 27 ಎಸೆತಗಳಲ್ಲಿ 8 ಬೌಂಡರಿ ಒಂದು ಸಿಕ್ಸರ್​ ನೆರವಿನಿಂದ 47 ರನ್​ ಕಲೆಹಾಕುವ ಮೂಲಕ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸಬ್ಬಿನೇನಿ ಮೇಘನಾ 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​ ನೆರವಿನಿಂದ ಅಜೇಯ 38 ರನ್​ ಗಳಿಸಿದರು.

    ಆರ್​ಸಿಬಿ ಟ್ವೀಟ್​ ಫ್ಯಾನ್ಸ್​ ಫುಲ್​ ಖುಷ್​
    ಸ್ಮೃತಿ ಮಂದನಾ ಹಾಗೂ ಮೇಘನಾ ಬ್ಯಾಟಿಂಗ್​ಗೆ ಆರ್​ಸಿಬಿ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಅದರಲ್ಲೂ ಮೇಘನಾ ಅವರು ಸಿಕ್ಸರ್ ಬಾರಿಸಿದ ವಿಡಿಯೋ ತುಣುಕನ್ನು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಆರ್​ಸಿಬಿ, ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಅವರ ವೈರಲ್​ ಡೈಲಾಗ್​, ಚಟಾಪಟ ಚಟಾಪಟ ಬಳಿಸಿಕೊಂಡು ಏನ್​ ಶಾಟ್​ ಗುರು, ಚಟಾಪಟ ಚಟಾಪಟ ಎಂದು ಶೀರ್ಷಿಕೆ ನೀಡಿ ಬೆಂಕಿಯ ಎಮೋಜಿಯನ್ನು ಪೋಸ್ಟ್​ ಮಾಡಿದೆ. ಇದೀಗ ವಿಡಿಯೋ ವೈರಲ್​ ಆಗಿದೆ.

    ಆರ್​ಸಿಬಿ ಕನ್ನಡ ಪ್ರೀತಿ
    ಆಗಾಗ ಕನ್ನಡದಲ್ಲೇ ಟ್ವೀಟ್​ ಮಾಡುವ ಆರ್​ಸಿಬಿ ತೋರುವ ಕನ್ನಡ ಪ್ರೀತಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದೆ ತರಾ ಜಾಸ್ತಿ ಕನ್ನಡ ಟ್ವೀಟ್ ಮಾಡ್ತಾ ಇರು ಅಣ್ಣಾ ಎಂದು ಕಮೆಂಟ್​ ಮಾಡಿದ್ದಾರೆ. ನಮ್ಮ ಆರ್​ಸಿಬಿ ಅಡ್ಮಿನ್​ಗೆ ಒಂದು ಪ್ಲೇಟ್​ ಬೆಳ್ಳುಳ್ಳಿ ಕಬಾಬ್​ ಪಾರ್ಸೆಲ್​ ಮಾಡಿ ಎಂದೆಲ್ಲ ಕಾಮೆಂಟ್​ ಮೂಲಕ ಆರ್​ಸಿಬಿ ಅಡ್ಮಿನ್​ರನ್ನು ಹೊಗಳುತ್ತಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂದನಾ ಫೀಲ್ಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಗುಜರಾತ್ ಜೈಂಟ್ಸ್ ತಂಡ ಸ್ಪಿನ್ನರ್ ಸೋಫಿ ಮೂಲಿನೆಕ್ಸ್ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ ಕುಸಿದು 7 ವಿಕೆಟ್​ಗೆ 107 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಸ್ಮೃತಿ ಮಂದನಾ (43 ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭದ ನೆರವಿನಿಂದ 12.3 ಓವರ್​ಗಳಲ್ಲಿ 2 ವಿಕೆಟ್​ಗೆ 110 ರನ್​ಗಳಿಸಿ ಗೆಲುವಿನ ಕೇಕೆ ಹಾಕಿತು. 3ನೇ ವಿಕೆಟ್​ಗೆ ಜತೆಯಾದ ಎಸ್.ಮೇಘನಾ (36*) ಹಾಗೂ ಎಲ್ಲಿಸ್ ಪೆರ್ರಿ (23*) ಜೋಡಿ 23 ಎಸೆತಗಳಲ್ಲಿ 38ರನ್ ಬಾರಿಸಿ 45 ಎಸೆತ ಬಾಕಿಯಿರುವಂತೆಯೆ ಗೆಲುವಿನ ದಡ ಸೇರಿಸಿತು.

    ಗುಜರಾತ್ ಜೈಂಟ್ಸ್: 7 ವಿಕೆಟ್​ಗೆ 107 (ಬೆಥ್ ಮೂನಿ 8, ಹರ್ಲೀನ್ 22, ಲಿಚ್ಛಿಫೀಲ್ಡ್ 5, ವೇದಾ 9, ಗಾರ್ಡ್​ನರ್ 7,ಹೇಮಲತಾ 31*, ಸ್ನೇಹಾ ರಾಣಾ 12, ಮೂಲಿನೆಕ್ಸ್ 25ಕ್ಕೆ 3, ರೇಣುಕಾ 14ಕ್ಕೆ 2).

    ಆರ್​ಸಿಬಿ: 12.3 ಓವರ್​ಗಳಲ್ಲಿ 2 ವಿಕೆಟ್​ಗೆ 110 (ಡಿವೈನ್ 6, ಸ್ಮೃತಿ 43, ಮೇಘನಾ 36*,ಎಲ್ಲಿಸ್ ಪೆರ್ರಿ 23*, ಗಾರ್ಡ್​ನರ್ 25ಕ್ಕೆ 1).

    ಸಂಘಟಿತ ದಾಳಿ
    ಇನಿಂಗ್ಸ್ ಆರಂಭಿಸಿದ ನಾಯಕಿ ಬೆಥ್ ಮೂನಿ (8) ವಿಕೆಟ್ ಬೇಗನೆ ಕಬಳಿಸಿದ ರೇಣುಕಾ ಸಿಂಗ್ ಆರ್​ಸಿಬಿ ತಂಡಕ್ಕೆ ಮೊದಲ ಯಶಸ್ಸು ತಂದರು. ಬಳಿಕ ಪೋಬಿ ಲಿಚ್ಛಿಫೀಲ್ಡ್ (5) ಸಹ ರಿಚಾ ಘೋಷ್ ಚುರುಕಿನ ಸ್ಟಂಪಿಂಗ್​ಗೆ ಡಗೌಟ್ ಸೇರಿದರು. ಆಗ ಹರ್ಲಿನ್ ಡಿಯೋಲ್ (22) ಜತೆಯಾದ ಕನ್ನಡತಿ, ವೇದಾ ಕೃಷ್ಣಮೂರ್ತಿ (9) 3ನೇ ವಿಕೆಟ್​ಗೆ 15 ರನ್​ಗಳಿಸಿತು. ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ ವೇದಾ, ಈ ಬಾರಿ ಸಿಕ್ಸರ್ ಸಿಡಿಸಿ ಭರವಸೆ ಮೂಡಿಸಿದರು. ತವರಿನ ಅಂಗಣದಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎಡಗೈ ಸ್ಪಿನ್ನರ್ ಸೋಫಿ ಮೂಲಿನೆಕ್ಸ್ ಸ್ಪಿನ್ ದಾಳಿಗೆ ಗುಜರಾತ್ ನಿರಂತರ ವಿಕೆಟ್ ಕಳೆದುಕೊಂಡಿತು. ಆಶ್ಲೇ ಗಾರ್ಡ್​ನರ್ (6) ಹಾಗೂ ಹೇಮಲತಾ 5 ವಿಕೆಟ್​ಗೆ 20 ರನ್ ಸೇರಿಸಿ ಚೇತರಿಕೆ ನೀಡಿತು. ಏಳನೇ ವಿಕೆಟ್​ಗೆ ಹೇಮಲತಾ ಹಾಗೂ ಸ್ನೇಹಾ ರಾಣಾ (12) ಜೋಡಿ 25 ರನ್ ಪೇರಿಸಿ ತಂಡವನ್ನು 100ರ ಗಡಿ ದಾಟಿಸಿದರು.

    ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

    ಅಪ್ಪಿತಪ್ಪಿ ಈ ಆಹಾರಗಳ ಜತೆ ಬಾಳೆಹಣ್ಣು ತಿನ್ನಬೇಡಿ… ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts