ಸಾಂಕ್ರಾಮಿಕ ರೋಗಗಳನ್ನು ಭಯಪಡದೆ ಧೈರ್ಯದಿಂದ ಎದುರಿಸಬೇಕಾದರೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗಿರುವುದು ಅನಿವಾರ್ಯ. ಅಂತಹ ಮನೆಮದ್ದುಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಹೊಂದಿದರೆ ರೋಗದ ತೀವ್ರತೆ ಕಡಿಮೆಯಾಗಿ ದೇಹಕ್ಕೆ ಅಂಟುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
| ಡಾ. ಶ್ರೀಲತಾ ಪದ್ಯಾಣ
4-5 ತುಳಸಿ ಎಲೆಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ ಆ ನೀರನ್ನು ಕುದಿಯಲು ಇಡಬೇಕು. ನಂತರ ಅದಕ್ಕೆ ಸ್ವಲ್ಪ ಕಾಳುಮೆಣಸು ಹುಡಿ ಮಾಡಿ ಹಾಕಬೇಕು ಹಾಗೂ ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪ ತಣ್ಣಗಾದ ಬಳಿಕ ಈ ಪಾನೀಯವನ್ನು ಸೇವಿಸಿ.
ಕೊತ್ತಂಬರಿ ಬೀಜ, ಜೀರಿಗೆ, ಕಾಳುಮೆಣಸು, ದಾಲ್ಚಿನ್ನಿ, ಲವಂಗ, ಏಲಕ್ಕಿ ಹುಡಿ ಮಾಡಿ ಇಟ್ಟುಕೊಳ್ಳಬೇಕು. ಒಂದು ಚಮಚ ಹುಡಿಯನ್ನು ಹಾಲಿಗೆ ಹಾಕಿ, ಸ್ವಲ್ಪ ಬೆಲ್ಲ, ಅರಿಶಿಣ, ಶುಂಠಿ ಸೇರಿಸಿ ಕುದಿಸಿ ಕಷಾಯ ಮಾಡಬೇಕು. ಇದನ್ನು ನಿತ್ಯ ಸೇವಿಸಿದರೆ ಒಳ್ಳೆಯದು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ. ಅಥವಾ ಊಟದೊಂದಿಗೆಯೂ ಸೇವಿಸಬಹುದು.
ಬೇಯಿಸಿದ ಅನ್ನದ ಗಂಜಿಯನ್ನು ಕುಡಿಯುವುದು ಆರೋಗ್ಯಕರ. ಬೇಕಿದ್ದರೆ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಈರುಳ್ಳಿಯನ್ನು ಹಾಕಬಹುದು.
ಕಾಳುಮೆಣಸು ಹಾಗೂ ಚಿಟಿಕೆ ಕಲ್ಲುಪು್ಪ ಜಗಿಯುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.
ಮಾಡುವ ಪ್ರತಿ ಆಹಾರ ಪದಾರ್ಥದಲ್ಲಿ ಚಿಟಿಕೆ ಪ್ರಮಾಣದ ಅರಿಶಿನವನ್ನು ಹಾಕಿದರೆ ಒಳ್ಳೆಯದು. ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿಣ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಶುಂಠಿ ರಸ ಅಥವಾ ಹುಡಿ ಹಾಗೂ ಜೇನು ಮಿಶ್ರಣ ಮಾಡಿ ತೆಗೆದುಕೊಳ್ಳಬಹುದು.
ಹಿಪ್ಪಲಿಯ ಕಷಾಯ ಒಳ್ಳೆಯದು. ಅದು ಸಿಗದೆ ಇದ್ದಲ್ಲಿ ಆಯುರ್ವೆದ ಅರಿಷ್ಟವನ್ನು ತೆಗೆದುಕೊಳ್ಳಬಹುದು. ನೆಲ್ಲಿಕಾಯಿ ಸೇವನೆ ಒಳ್ಳೆಯದು
ಪ್ರತಿದಿನ ತೆಂಗಿನೆಣ್ಣೆಯನ್ನು ತಲೆಯ ನೆತ್ತಿ ಮೇಲೆ ಸವರಬೇಕು. ಹಾಗೂ ಅಡುಗೆಯಲ್ಲಿ ಬಳಸುವುದು ಉತ್ತಮ. ವಿಟಮಿನ್ ಸಿ ಇರುವ ಹಣ್ಣುಗಳಾದ ನಿಂಬೆ, ಕಿತ್ತಳೆ, ದ್ರಾಕ್ಷಿ, ಮೂಸಂಬಿಯನ್ನು ಸೇವಿಸಬೇಕು.