ಪದೋನ್ನತಿ ಪಡೆಯುವುದು ಹೇಗೆ? | ಸರ್ಕಾರಿ ಕಾರ್ನರ್​

corner
Published on
ದಿನದ ಪ್ರಶ್ನೆ 

ನಾನು ಸರ್ಕಾರಿ ಇಲಾಖೆಯಲ್ಲಿ ಶೀಘ್ರಲಿಪಿಕಾರನಾಗಿ 5 ವರ್ಷ ಸೇವೆ ಸಲ್ಲಿಸಿದ್ದು ಸರ್ಕಾರಿ ಆದೇಶದ ಮೇರೆಗೆ 1 ವರ್ಷ ಪ್ರಥಮ ದರ್ಜೆ ಸಹಾಯಕರ ತರಬೇತಿಯನ್ನೂ ಸಹ ಪೂರೈಸಿರುತ್ತೇನೆ. ನಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತ್ಯ 5 ವರ್ಷ ಶೀಘ್ರ ಲಿಪಿಕಾರರಾಗಿ ಸೇವೆ ಸಲ್ಲಿಸಿದವರಿಗೆ ಕಚೇರಿ ಅಧೀಕ್ಷಕರ ಹುದ್ದೆಗಳಿಗೆ ಪದೋನ್ನತಿ ನೀಡಲು ಅವಕಾಶವಿದೆ. ಆದರೆ ನಮ್ಮ ಇಲಾಖೆಯ ಕೆಲವು ಕೆಳಗಿನ ಅಧಿಕಾರಿಗಳು ತರಬೇತಿ ಅವಧಿಯನ್ನುಳಿದು 5 ವರ್ಷ ಸೇವೆ ಸಲ್ಲಿಸಬೇಕೆಂದು ನನಗೆ ಪದೋನ್ನತಿ ನೀಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ನಿಯಮಾವಳಿ ರೀತ್ಯ ಸೂಕ್ತ ಪರಿಹಾರ ಸೂಚಿಸಿ.

| ಮಂಗಳಾ ಕೋಲಾರ

1982ರ ಸರ್ಕಾರಿ ಆದೇಶದಲ್ಲಿ ಕ್ಷೇತ್ರ ಇಲಾಖೆಗಳಲ್ಲಿ ಪದೋನ್ನತಿ ಪಡೆಯಬೇಕಾದರೆ ಅವರು 5 ವರ್ಷ ಸೇವೆ ಸಲ್ಲಿಸಿ ಅದರಲ್ಲಿ ವರ್ಷ ಪ್ರಥಮ ದರ್ಜೆ ಸಹಾಯಕರ ತರಬೇತಿಯನ್ನು ಸಹ ಪಡೆಯತಕ್ಕದೆಂದು ಸೂಚಿಸಲಾಗಿದೆ. ಹೀಗಿರುವಾಗ ನಿಮ್ಮ ಇಲಾಖೆಯ ಕೆಳಗಿನ ಅಧಿಕಾರಿಗಳು ತರಬೇತಿ ಅವಧಿಯನ್ನು ಹೊರತುಪಡಿಸಿ 5 ವರ್ಷ ಸೇವಾ ಅರ್ಹತೆ ಹೊಂದಬೇಕೆಂದು ಸೂಚಿಸುವುದು ಸ್ವಾಭಾವಿಕ ನ್ಯಾಯಕ್ಕೆ ಅಪಚಾರವೆಸಗಿದಂತಾಗುತ್ತದೆ. ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಅಥವಾ ಪದೋನ್ನತಿ ಮೂಲಕ ತುಂಬುವಾಗ ಅವರ ಸೇವಾ ಅರ್ಹತೆಯನ್ನು 5 ವರ್ಷಗಳು ಎಂದು ನಿಗದಿಪಡಿಸಿರುವಾಗ ತತ್ಸಮಾನ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಶೀಘ್ರ ಲಿಪಿಕಾರರಿಗೂ ಸಹ ಈ ಆದೇಶದ ಹಿನ್ನೆಲೆಯಲ್ಲಿ ಹಾಗೂ ಇಲಾಖೆಯ ನೇಮಕಾತಿ ನಿಯಮಾವಳಿಯಂತೆ ಪದೋನ್ನತಿಯನ್ನು ನೀಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net