ಮನಿಮಾತು | ಅರಣ್ಯ ಕೃಷಿಯಲ್ಲಿ ಕೋಟಿ ಗಳಿಸೋದು ಹೇಗೆ?

Money Mathu
Published on

‘ಕಾಡು ಬೆಳೆಸಿ -ನಾಡು ಉಳಿಸಿ’ ಎಂಬ ಹೇಳಿಕೆ ಚಾಲ್ತಿಯಲ್ಲಿರೋದೇನೊ ನಿಜ. ಆದ್ರೆ, ನಾವು ಅದೆಷ್ಟು ಜನ ಅರಣ್ಯ ಭೂಮಿಗೆ ಪ್ರಾಮುಖ್ಯತೆ ಕೊಡ್ತಿದ್ದೀವಿ? ಲೆಕ್ಕ ಹಾಕಿದ್ರೆ, ಬೆರಳೆಣಿಕೆಯಷ್ಟು ಮಾತ್ರ. ನಮಗೆ ಕೂರೋಕೆ ಕುರ್ಚಿ, ಟೇಬಲ್, ಮಲಗೋ ಮಂಚ ಹೀಗೆ ಪ್ರತಿಯೊಂದು ಪೀಠೋಪಕರಣಗಳಿಗೆ ಮರಗಳು ಬೇಕೇ ಬೇಕು. ಅಷ್ಟೇ ಯಾಕೆ, ನಾವೀಗ ಓದುತ್ತಿರುವ ಈ ದಿನಪತ್ರಿಕೆ ಕೂಡ ಮರದ ಉತ್ಪನ್ನವೇ. ಆದ್ರೆ, ಲಭ್ಯವಿರುವ ಮರಗಳ ಸಂಖ್ಯೆ ಮಾತ್ರ ಬಹಳ ಕಡಿಮೆ. ನಮ್ಮ ದೇಶದಲ್ಲಿ ಶೇ.24.82 ಮಾತ್ರ ಅರಣ್ಯ ಭೂಮಿ ಇದೆ. ಆದ್ರೆ, ಭೌಗೋಳಿಕವಾಗಿ ಇದು ಶೇ.34 ಇರಬೇಕಿದೆ. ಸದ್ಯ ನಾವು ಶೇ.60 ಮರ ಅಥವಾ ಮರದ ಉತ್ಪನ್ನಗಳನ್ನು ಬೇರೆ ದೇಶದಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗೆ ಆದ್ರೆ, ನಾವು ಪ್ರತಿಯೊಂದಕ್ಕೂ ಬೇರೆ ದೇಶಗಳನ್ನು ಅವಲಂಬಿಸುವ ಪರಿಸ್ಥಿತಿ ಬರುತ್ತೆ. ಆಗ ನಮ್ಮ ಆತ್ಮನಿರ್ಭರ ಭಾರತದ ಕನಸು ಕನಸಾಗೇ ಉಳಿಯುತ್ತೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲೋಕೆ ನಾವು ಅರಣ್ಯ ಕೃಷಿಗೆ ಪ್ರಾಧಾನ್ಯತೆ ಕೊಡಬೇಕಿದೆ. ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕಿದೆ. ನೀವು ನಂಬಲ್ಲ, ಅರಣ್ಯ ಕೃಷಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 10 ಕೋಟಿ ರೂ. ಸಂಪಾದನೆ ಮಾಡಿರುವ ರೈತರಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ ಬೆಳೆಯಿಂದ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಾ ಯಶೋಗಾಥೆ ಮೆರೆಯುತ್ತಿದ್ದಾರೆ. ಅದು ಹೇಗೆ ಸಾಧ್ಯ ಎಂಬ ವಿವರಣೆ ಈ ಅಂಕಣದಲ್ಲಿದೆ.

ಅರಣ್ಯ ಕೃಷಿಯ ಆರ್ಥಿಕ ಮಹತ್ವ: ಕಾಡು ಬೆಳೆಸುವದರ ಜತೆಜತೆಗೆ ಮಾಡುವ ಕೃಷಿ ಪದ್ಧತಿಗೆ ಅರಣ್ಯ ಕೃಷಿ ಅಂತ ಕರೆಯಲಾಗುತ್ತೆ. ಒಂದು ಎಕರೆ ಜಮೀನಿನಲ್ಲಿ 10 ಕೋಟಿ ರೂ. ಗಳಿಸೋದಕ್ಕೆ ಸಾಧ್ಯವಾಗೋದು ಅರಣ್ಯ ಕೃಷಿಯಲ್ಲಿ ಮಾತ್ರ. ಒಂದು ಎಕರೆ ಕೃಷಿ ಭೂಮಿಯಲ್ಲಿ 500 ಶ್ರೀಗಂಧದ ಮರಗಳನ್ನ ಬೆಳೆಸಬಹುದು. ಒಂದು ಶ್ರೀಗಂಧ ಮರದ ಬೆಲೆ 15 ವರ್ಷಗಳ ನಂತರ ಸುಮಾರು 2 ಲಕ್ಷ ರೂ. ಅಂದ್ರೆ, 500 ಮರಕ್ಕೆ 10 ಕೋಟಿ ರೂ. ಸಿಗುತ್ತೆ. ಅಷ್ಟೇ ಅಲ್ಲ, 15 ವರ್ಷ ಅಲ್ಲದೆ 20 ಅಥವಾ 25 ವರ್ಷಗಳ ನಂತರ ಮರಗಳನ್ನು ಮಾರಾಟ ಮಾಡ್ತೀರಿ ಅಂದ್ರೆ ಅದಕ್ಕೆ ದುಪ್ಪಟ್ಟು ಲಾಭ. ಯಾವ ಬ್ಯಾಂಕ್​ನಲ್ಲೂ ಈ ರೀತಿಯಾಗಿ ಬಡ್ಡಿ ಸಿಗೋದಿಲ್ಲ. ಅತಿ ಹೆಚ್ಚು ಬಂಡವಾಳ ಹೂಡಿಕೆ ಮಾಡದೆ ಕೋಟ್ಯಂತರ ರೂ. ಗಳಿಸೋ ಉದ್ಯಮ ಅದುವೇ ಅರಣ್ಯ ಕೃಷಿ. ಶ್ರೀಗಂಧ, ತೇಗ, ಬೀಟೆ, ಮಹಾಗನಿ, ಸಾಗುವಾನಿ, ಹೆಬ್ಬೇವು ಈ ರೀತಿಯ ಹತ್ತು ಹಲವಾರು ಮರಗಳು ನಿಮ್ಮ ಜೀವನಕ್ಕೆ ಶ್ರೀಮಂತಿಕೆ ತಂದು ಕೊಡುತ್ತವೆ.

ಅರಣ್ಯ ಕೃಷಿಯ ಅನುಕೂಲಗಳು: ಅರಣ್ಯ ಬೆಳೆಗಳು ರೈತರಿಗೆ ಹೆಚ್ಚು ಹಣ ಸಂಪಾದಿಸಲು ಸಹಕಾರಿಯಾಗುವುದಲ್ಲದೆ, ಅರಣ್ಯ ಬೆಳೆ ಬೆಳೆಯೋದರಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು. ಜತೆಗೆ ಅರಣ್ಯ ಪ್ರದೇಶದ ಆರೋಗ್ಯವೂ ಹೆಚ್ಚುತ್ತದೆ, ಮಳೆ ಪ್ರಮಾಣವನ್ನು ವೃದ್ಧಿಸುತ್ತದೆ ಮತ್ತು ತಂಪಾದ ಆರೋಗ್ಯಕರ ಗಾಳಿಯನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲ, ಮರದ ಉತ್ಪನ್ನಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಬದಲಾಗಿ ನಾವೇ ರಫ್ತು್ತ ಮಾಡುವ ಮೂಲಕ ನಮ್ಮ ದೇಶದ ಜಿಡಿಪಿಯನ್ನೂ ಕೂಡ ವೃದ್ಧಿಗೊಳಿಸಬಹುದು. ಹಿಂದೆಲ್ಲ ಶ್ರೀಗಂಧದಂತಹ ಅರಣ್ಯ ಬೆಳೆಗಳನ್ನು ಬೆಳೆಯಲು ಸರ್ಕಾರದಿಂದ ಪರವಾನಗಿ ಪಡೆಯಬೇಕಿತ್ತು. ಆದರೆ ಈಗ ಹಾಗಿಲ್ಲ, ಸರ್ಕಾರದಿಂದಲೇ ಉಚಿತ ಸಸಿಗಳು ಕೂಡ ಲಭ್ಯವಿವೆ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವೆಂದರೆ, ಶ್ರೀಗಂಧ ಬೆಳೆಯ ಕಟಾವಿನ ಸಂದರ್ಭದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು. ಜತೆಗೆ ಅರಣ್ಯ ಬೆಳೆಗೆ ಸಾಲದ ಜತೆಗೆ ಸಬ್ಸಿಡಿ ಕೂಡ ಲಭ್ಯ ಇದೆ.

ಅರಣ್ಯ ಕೃಷಿಗೆ ಎಷ್ಟು ಭೂಮಿ ಬೇಕು?: ಯಾವುದೇ ತೊಂದರೆಗಳಿಲ್ಲದೆ, ಹೆಚ್ಚಿನ ಬಂಡವಾಳವಿಲ್ಲದೆ ಕನಿಷ್ಠ ಅರ್ಧ ಎಕರೆಯಲ್ಲೂ ಅರಣ್ಯ ಕೃಷಿ ಆರಂಭಿಸಬಹುದು. ನನಗೆ ಪೂರ್ಣ ಪ್ರಮಾಣದಲ್ಲಿ ಅರಣ್ಯ ಕೃಷಿ ಬೇಡ ಎನ್ನುವವರು ಮಿಶ್ರ ಕೃಷಿ ಮಾಡುವ ಮುಖೇನ ಇತರ ಆಹಾರ ಬೆಳೆಗಳೊಂದಿಗೆ ಅರಣ್ಯಕ್ಕೆ ಸಂಬಂಧಿಸಿದ ತೇಗ, ಶ್ರೀಗಂಧ, ಹೆಬ್ಬೇವಿನಂಥ ಮರಗಳನ್ನು ಬೆಳೆಸಬಹುದು. ಇದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗುತ್ತದೆ.

ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಅರಣ್ಯ ಕೃಷಿ ಬಗ್ಗೆ ಕೋರ್ಸ್: ರೈತರು ಇಷ್ಟೆಲ್ಲ ಸಂಪಾದನೆ ಮಾಡಬಹುದಾ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡದೇ ಇರೋದಿಲ್ಲ. ಆದ್ರೆ, ಇದು ಸಾಧ್ಯ ಅನ್ನೋದನ್ನು ಇಂಡಿಯನ್ ಮನಿ.ಕಾಮ್ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನ ಅರಣ್ಯ ಕೃಷಿ ಎಂಬ ಕೋರ್ಸ್ ನಲ್ಲಿರುವ ಮಾರ್ಗದರ್ಶಕರು ತೋರಿಸಿಕೊಟ್ಟಿದ್ದಾರೆ. ಒಬ್ಬೊಬ್ಬ ಮಾರ್ಗದರ್ಶಕರು ಕೂಡ ಅರಣ್ಯ ಕೃಷಿ ಮೂಲಕ ಕೋಟ್ಯಂತರ ರೂ. ಗಳಿಸಲು ಸಾಧ್ಯ ಎನ್ನುವುದನ್ನು ಪ್ರತ್ಯಕ್ಷವಾಗಿ ಸಾಬೀತುಮಾಡಿದ್ದಾರೆ. ಸಸಿಗಳ ಆಯ್ಕೆ ಹೇಗಿರಬೇಕು? ಬಂಡವಾಳ ಎಷ್ಟು ಬೇಕು? ಕೀಟಬಾಧೆ ನಿಯಂತ್ರಣ, ಕಟಾವು ಮತ್ತು ಸಂಗ್ರಹಣೆ ಹೇಗೆ ಎಂಬಿತ್ಯಾದಿ ಮೂಲ ಪ್ರಶ್ನೆಗಳಿಂದ ಹಿಡಿದು ಅರಣ್ಯ ಕೃಷಿಯಲ್ಲಿ ಯಶಸ್ವಿಯಾಗಲು ಬೇಕಾಗುವ ಎಲ್ಲ ಟೆಕ್ನಿಕ್ಸ್​ಗಳನ್ನು ನೀವು ಈ ಕೋರ್ಸ್ ಮೂಲಕ ತಿಳಿದುಕೊಳ್ಳಬಹುದು. ಹಾಗಾಗಿ, ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಅರಣ್ಯ ಕೃಷಿಯಲ್ಲಿ ಕೋಟ್ಯಂತರ ರೂ. ಗಳಿಸೋದು ಹೇಗೆ? ಎಂಬ ಕೋರ್ಸ್ ಅನ್ನು ನೋಡಲಾರಂಭಿಸಿ ಮತ್ತು ನೀವು ಕೋಟ್ಯಂತರ ರೂ. ಗಳಿಸಿ.

ಅರಣ್ಯ ಕೃಷಿ ಕೋರ್ಸ್​ನಲ್ಲಿ ಏನೇನಿದೆ?

1 ಕೋರ್ಸ್ ಪರಿಚಯ 2 ಮಾರ್ಗದರ್ಶಕರ ಪರಿಚಯ 3 ಅರಣ್ಯ ಕೃಷಿ ಯಾಕೆ? 4 ಮೂಲ ಪ್ರಶ್ನೆಗಳು 5 ಬೇಕಿರುವ ಬಂಡವಾಳ ಮತ್ತು ಸರ್ಕಾರದ ಸವಲತ್ತು 6 ಅರಣ್ಯ ಇಲಾಖೆ ಒಪ್ಪಂದ, ಮಾರಾಟ ಮತ್ತು ಸುರಕ್ಷತೆ 7 ಸಸಿಗಳ ಆಯ್ಕೆ ಮತ್ತು ಕೀಟಬಾಧೆ ನಿಯಂತ್ರಣ 8 ಲಾಭ ಮತ್ತು ಸವಾಲುಗಳು 9 ಕೆಲಸಗಾರರು ಮತ್ತು ಇತರ ಖರ್ಚು ವೆಚ್ಚ 10 ಕಟಾವು ಮತ್ತು ಸಂಗ್ರಹಣೆ 11 ಮಾರುಕಟ್ಟೆ ಮತ್ತು ರಫ್ತು 12 ಅವಲಂಬಿಸಿರುವ ಕೈಗಾರಿಕೆಗಳು 13 ಭವಿಷ್ಯದ ನೋಟ

ಮಾರ್ಗದರ್ಶಕರ ಪರಿಚಯ

  • ಪ್ರೊ.ರಾಮಕೃಷ್ಣ ಹೆಗ್ಡೆ, ಮುಖ್ಯಸ್ಥರು, ಅರಣ್ಯ ವಿಶ್ವವಿದ್ಯಾಲಯ, ಕೊಡಗು
  • ಡಾ.ರಾಮಾಂಜನೇಯ ನೆಕಂತಿ, ಮಹಾಗನಿ ಬೆಳೆಗಾರರು, ದಾವಣಗೆರೆ
  • ಆರ್.ಎ.ದಯಾನಂದ ಮೂರ್ತಿ, ಅರಣ್ಯ ಕೃಷಿಕರು, ಚಿತ್ರದುರ್ಗ
  • ವಿಶು ಕುಮಾರ್, ಶ್ರೀಗಂಧ ಬೆಳೆಗಾರರು, ಚಿಕ್ಕಮಗಳೂರು
  • ಡಾ. ಎಲ್.ಸಿ. ಸುಆನ್ಸ್, ಬಿದಿರು ಬೆಳಗಾರರು ಮತ್ತು ವಿಜ್ಞಾನಿ, ಮೂಡುಬಿದಿರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net