ಜ್ಞಾಪಕ ಶಕ್ತಿ ಏಕಾಗ್ರತೆ ಸಾಧಿಸಲು ಹಾಕಿನಿ ಮುದ್ರೆ

Mudre (1)
Published on
ಹಾಕಿನಿ ಮುದ್ರೆಯು ಪವಿತ್ರವಾದ ಕೈಸನ್ನೆ ಮುದ್ರೆಯಾಗಿದ್ದು, ಹಿಂದೂ ದೇವತೆ ಹಾಕಿನಿಯ ಹೆಸರನ್ನು ಇಡಲಾಗಿದೆ. ಈ ಮುದ್ರೆಯು ವಿಶೇಷವಾಗಿ ಧ್ಯಾನದ ಅಭ್ಯಾಸದ ಸಮಯದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತದೆ. ಸಂಸ್ಕೃದಲ್ಲಿ ಹಾಕಿನಿ ಎಂದರೆ ಶಕ್ತಿ ಅಥವಾ ಆಡಳಿತ. ಈ ಮುದ್ರೆಯು ಅಭ್ಯಾಸ ಮಾಡುವವರಿಗೆ ತಮ್ಮ ಮನಸ್ಸಿನ ಮೇಲೆ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಇಲ್ಲಿ ಎರಡು ಕೈಗಳ ಪಂಚತತ್ವಗಳು ಜೊತೆ ಸೇರುತ್ತವೆ. ಎರಡು ಕೈಗಳ ಬೆರಳಿನ ಅಗ್ರ ಭಾಗವನ್ನು ಮೃದುವಾಗಿ ರ್ಸ³ಸಿ ಅಭ್ಯಾಸ ಮಾಡಬೇಕು. ಇದಕ್ಕೆ ಮನಸ್ಸಿನ ಮುದ್ರೆ ಎಂದು ಸಾಧಕರು ಹೇಳುತ್ತಾರೆ. ಇದನ್ನು ಸೂರ್ಯೂೕದಯದ ಸಮಯದಲ್ಲಿ ನಿರ್ವಹಿಸಿದರೆ ಉತ್ತಮ.

ಹಾಕಿನಿ ಮುದ್ರೆ ಮಾಡುವ ವಿಧಾನ: ಎರಡು ಕೈಗಳ ಎಲ್ಲಾ ಬೆರಳುಗಳ ಅಗ್ರ ಭಾಗವನ್ನು ಒಟ್ಟಿಗೆ ಮೃದುವಾಗಿ ರ್ಸ³ಸಿ. ಕೈಗಳನ್ನು ಒಟ್ಟಿಗೆ ಜೋಡಿಸಬಾರದು. ಹಾಕಿನಿ ಮುದ್ರೆಯನ್ನು ಪ್ರತಿದಿನ 30 ನಿಮಿಷಗಳವರೆಗೆ ಅಭ್ಯಾಸ ಮಾಡಬಹುದು ಅಥವಾ ಈ ಮುದ್ರೆಯನ್ನು ಸುಮಾರು 5 ರಿಂದ 10 ನಿಮಿಷದಂತೆ ದಿನಕ್ಕೆ 4 ರಿಂದ 6 ಬಾರಿ ವರೆಗೆ ಅಭ್ಯಾಸಮಾಡಬಹುದು. ಇಷ್ಟ ದೇವರು ಯಾ ಲಘು ಮಂತ್ರ ‘ಓಂ ಐಂ ಓಂ’ ಎಂದು 108 ಬಾರಿ ಪಠಿಸಿ.

ಪ್ರಯೋಜನವೇನು?: ಹಾಕಿನಿ ಮುದ್ರೆಯ ಅಭ್ಯಾಸದಿಂದ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಕೇಂದ್ರೀಕೃತ ಮತ್ತು ಆಳವಾದ ಉಸಿರಾಟವು ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಅಂತಿಮವಾಗಿ ಬ್ರೈನ್ ಪವರ್ ಜಾಸ್ತಿಯಾಗುತ್ತದೆ. ಹಾಕಿನಿ ಮುದ್ರೆಯು ರ್ತಾಕ ಚಿಂತನೆ ಮತ್ತು ಸೃಜನಾತ್ಮಕ ಅಂಶಗಳನ್ನು ಗ್ರಹಿಸಲು ಸಹಾಯ ಮಾಡುತ್ತದೆ. ಏಕೆಂದರೆ ಆಜ್ಞಾ ಚಕ್ರವು ಮಿದುಳಿನ ಎರಡೂ ಅರ್ಧಗೋಳಗಳನ್ನು ಸಶಕ್ತಗೊಳಿಸುತ್ತದೆ. ಕ್ರಮವಾಗಿ ಆಜ್ಞಾ ಚಕ್ರ ಗ್ರಹಿಕೆ, ಗಮನ, ಜಾಗರೂಕತೆ, ಅಂತರ್ಬೇಧೆ ಮತ್ತು ಕುತೂಹಲದ ಗುಣಗಳನ್ನು ಸಕ್ರಿಯಗೊಳಿಸುತ್ತದೆ. ಒತ್ತಡ, ಆತಂಕ, ಖಿನ್ನತೆ ಮುಂತಾದ ವಿವಿಧ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಾತ್ವಿಕ ಜೀವನಶೈಲಿಯನ್ನು ಅನುಸರಿಸುವಾಗ ಈ ಮುದ್ರೆಯನ್ನು ಅಭ್ಯಾಸ ಮಾಡುವುದು ಆಧ್ಯಾತ್ಮಿಕ ಮಾರ್ಗದಲ್ಲಿ ಸಹಾಯ ಮಾಡುತ್ತದೆ. ಅನುಭವಿ ಗುರು ಅಥವಾ ಶಿಕ್ಷಕರ ಅಡಿಯಲ್ಲಿ ಹಾಕಿನಿ ಮುದ್ರೆಯನ್ನು ಕಲಿತು ಅಳವಡಿಸಿಕೊಂಡಲ್ಲಿ ಜಾಗೃತಿಗೆ ಕಾರಣವಾಗುತ್ತದೆ. ಇದು ಹಿಂದಿನ ಮತ್ತು ಭವಿಷ್ಯದ ಒಳನೋಟಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ. ಈ ಮುದ್ರೆಯು ರಕ್ತದೊತ್ತಡ ಮತ್ತು ದೇಹದ ದೋಷಗಳನ್ನು (ವಾತ, ಪಿತ್ತ ಮತ್ತು ಕಫ) ಸಮತೋಲಗೊಳಿಸಲು ಸಹಾಯ ಮಾಡುತ್ತದೆ. ನಿರಂತರ ಉಸಿರಾಟವು ಮೂಗಿನ ಹೊಳ್ಳೆಗಳನ್ನು ಸಹ ಸ್ಪಷ್ಟಪಡಿಸುತ್ತದೆ. ಇದರಲ್ಲಿ ಎಲ್ಲಾ ಪಂಚ ತತ್ವಗಳು ಜತೆಗೂಡುತ್ತವೆ. ಆಜ್ಞಾಚಕ್ರ ಬಲಗೊಳ್ಳುತ್ತದೆ. ಮರೆಯುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಮನಸ್ಸು ಶಾಂತವಾಗುತ್ತದೆ. ಚಿತ್ತ ಶುದ್ಧಿಯಾಗುತ್ತದೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಲು ಸಹಾಯಮಾಡುತ್ತದೆ. ಈ ಮುದ್ರೆಯಿಂದ ಮನಸ್ಸು ಪರಿಶುದ್ಧವಾಗಿ ಒಳ್ಳೆಯ ವಿಚಾರಗಳನ್ನೂ ಚಿಂತನೆಗಳನ್ನೂ ಹೆಚ್ಚಿಸಲು ಸಹಾಯವಾಗುತ್ತದೆ. ಕೆಲವೊಮ್ಮೆ ಉಪನ್ಯಾಸ, ವಿಚಾರಗೋಷ್ಠಿಗಳಲ್ಲಿ ಕೆಲವು ವಿಚಾರಗಳು ಹೇಳಲು ಇಚ್ಛಿಸಿದಾಗ ನೆನಪಿಗೆ ಬರುತ್ತಿಲ್ಲ ಎಂದಿಟ್ಟುಕೊಳ್ಳಿ. ಆ ಸಂದರ್ಭದಲ್ಲಿ ಈ ಹಾಕಿನಿ ಮುದ್ರೆಯನ್ನು ಬಳಸಿದಾಗ ಹೇಳುವಂತಹ ವಿಚಾರಗಳು ನೆನಪಾಗುತ್ತವೆ ಎಂದು ಅನುಭವಿಗಳು ಹೇಳುತ್ತಾರೆ. ವಯೋಮಾನದಲ್ಲಿ ಕಾಡುವ ನೆನಪಿನ ಶಕ್ತಿಯ ತೊಂದರೆಯನ್ನು ಈ ಮುದ್ರೆಯ ಮೂಲಕ ಪರಿಹರಿಸಿಕೊಳ್ಳಬಹುದು. ಸಾಧ್ಯವಾದರೆ ಈ ಮುದ್ರೆಯಲ್ಲಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ದೀರ್ಘ ಉಸಿರಾಟವನ್ನು 3 ರಿಂದ 6 ಬಾರಿ ಅಭ್ಯಾಸ ಮಾಡಿ. ಹಾಕಿನಿ ಮುದ್ರೆಯಲ್ಲಿ ಸ್ಪಷ್ಟವಾಗಿ ಯೋಚಿಸಲು ಸಹಕಾರಿಯಾಗುತ್ತದೆ. ಮನಬಿಚ್ಚಿ ಮಾತನಾಡಲು ಈ ಮುದ್ರೆಯ ಅಭ್ಯಾಸದಿಂದ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ಓದಿದ ವಿಷಯಗಳು ನೆನಪಾಗಲು ಈ ಮುದ್ರೆ ಸಹಕಾರಿಯಾಗುತ್ತದೆ. ಮಕ್ಕಳಿಗೂ ಈ ಮುದ್ರೆ ಸಹಕಾರಿಯಾಗುತ್ತದೆ. ಮನಸ್ಸಿನ ಏಕಾಗ್ರತೆ ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net