ಗಣಿತದ ಕ್ಲಿಸ್ಟ ಸಮಸ್ಯೆಗಳನ್ನು ಭೇದಿಸಿದ ಗೂಗಲ್​..'ಫನ್‌ಸರ್ಚ್‌' ಎಂದರೇನು? ವಿವರ ಇಲ್ಲಿದೆ

google
Published on

ನವದೆಹಲಿ: ಗಣಿತಕ್ಕೆ ಸಂಬಂಧಿಸಿ ಕೇಳುವ ಕಠಿಣ ಪ್ರಶ್ನೆಗಳಿಗೆ ಕೂಡಲೇ ಉತ್ತರ ಸಿಗುವಂತೆ ಗೂಗಲ್​ನಲ್ಲಿ ಸಂಶೋಧಕರು ಫನ್‌ಸರ್ಚ್‌ನ ಅನ್ನು ಅನಾವರಣಗೊಳಿಸಿದ್ದಾರೆ, ಇದು ಈ ಹಿಂದೆ ಪರಿಹರಿಸಲಾಗದ ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವ ಕೃತಕ ಬುದ್ಧಿಮತ್ತೆ (ಎಐ) ಮಾದರಿಯಾಗಿದೆ.

ಗೂಗಲ್​ನ ಪರಿಣಿತ ಸಂಶೋಧಕರು ಗಣಿತ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವ ಕೃತಕ ಬುದ್ಧಿಮತ್ತೆಯ ಮಾದರಿ ಫನ್‌ಸರ್ಚ್‌​ ಅನ್ನು ಸೃಷ್ಟಿಸಿದ್ದಾರೆ. ಇದು ಈ ಹಿಂದೆ ತಿಳಿದಿಲ್ಲದ ಮತ್ತು ಮೌಲ್ಯಯುತವಾದ ಹೊಸ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ. ದೀರ್ಘಕಾಲದ ವೈಜ್ಞಾನಿಕ ಒಗಟಿಗೆ ಪರಿಹಾರವನ್ನು ಬಹಿರಂಗಪಡಿಸಲು ಮೊದಲ ಬಾರಿಗೆ ದೊಡ್ಡ ಭಾಷಾ ಮಾದರಿಯನ್ನು (ಎಲ್‌ಎಲ್‌ಎಂ) ಬಳಸಿ ಆವಿಷ್ಕರಿಸಲಾಗಿದೆ ಎನ್ನಲಾಗಿದೆ.

ಎಲ್​ಎಲ್​ಎಂಗಳು ಇಲ್ಲಿತನಕ ಊಹಾತ್ಮಕ ವಿಷಯವನ್ನು ಸೃಷ್ಟಿಸುತ್ತವೆ ಎನ್ನಲಾಗುತ್ತಿತ್ತು. ಆದರೆ ಅವುಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮತ್ತು ಆಯ್ದ ವಿಧಾನದೊಂದಿಗೆ ಸಂಶೋಧನೆಗಳನ್ನು ಮಾಡಬಹುದು ಎಂದು ತೋರಿಸುತ್ತದೆ. ಆಲ್ಫಾ ಟೆನ್ಸರ್​ನ ಲೆಕ್ಕಾಚಾರಗಳ ವೇಗವರ್ಧನೆ ಮತ್ತು ಪ್ರಮುಖ ಅಲ್ಗಾರಿದಮ್‌ಗಳ ಆಪ್ಟಿಮೈಸೇಶನ್ ಅನ್ನು ಅನುಸರಿಸಿ ಎಐ ಅನ್ನು ಬಳಸಿಕೊಂಡು ಮೂಲಭೂತ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಡೀಪ್​ಮೈಂಡ್​ನ ಸಾಧನೆಗಳ ಸರಣಿಯನ್ನು ಫನ್​ಸರ್ಚಚ ಮುಂದುವರಿಸುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಫನ್​ಸರ್ಚ್​ ಈ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ ತಪ್ಪಾದ ಉತ್ತರಗಳನ್ನು ತಿರಸ್ಕರಿಸುವ ಮತ್ತು ಮಾನ್ಯವಾದವುಗಳನ್ನು ಮತ್ತೆ ಪ್ರಕ್ರಿಯೆಯಲ್ಲಿ ಸಂಯೋಜಿಸುವ ಇತರ ಸಿಸ್ಟಮ್‌ಗಳೊಂದಿಗೆ ಕೋಡಿ ಎಂಬ ದೊಡ್ಡ ಭಾಷಾ ಮಾದರಿಯನ್ನು ಸಂಯೋಜಿಸುವ ಮೂಲಕ ಒಂದು ಅನನ್ಯ ವಿಧಾನವನ್ನು ತೆಗೆದುಕೊಳ್ಳುತ್ತದೆ. ಗೂಗಲ್ ಡೀಪ್‌ಮೈಂಡ್‌ನ ಸಂಶೋಧನಾ ಉಪಾಧ್ಯಕ್ಷ ಪುಷ್ಮೀತ್ ಕೊಹ್ಲಿ ನೇತೃತ್ವದ ಸಂಶೋಧನಾ ತಂಡವು ಪೈಥಾನ್‌ನಲ್ಲಿ ಆರಂಭದಲ್ಲಿ ವಿವರಿಸಿದ ಸಮಸ್ಯೆಗೆ ಕೋಡ್ ಪರಿಹಾರಗಳನ್ನು ಸೂಚಿಸಲು ಫನ್‌ಸರ್ಚ್‌ಗೆ ಅವಕಾಶ ಮಾಡಿಕೊಟ್ಟಿತು ಎಂದು ಗೂಗಲ್​ ಮಾಹಿತಿ ನೀಡಿದೆ.

ಕಂಪ್ಯೂಟರ್ ಸೈನ್ಸ್‌ನಲ್ಲಿನ ಅನ್ವಯಗಳೊಂದಿಗೆ ಗಣಿತದಲ್ಲಿ ಸವಾಲಿನ ಕೆಲಸವಾದ ಬಿನ್ ಪ್ಯಾಕಿಂಗ್ ಸಮಸ್ಯೆಗೆ ಅನ್ವಯಿಸುವ ಮೂಲಕ ಫನ್‌ಸರ್ಚ್‌ನ ಬಹುಮುಖತೆಯನ್ನು ಮತ್ತಷ್ಟು ಪ್ರದರ್ಶಿಸಲಾಯಿತು. ಫನ್​ಸರ್ಚ್​ ಕೇವಲ ಪರಿಹಾರವನ್ನು ಕಂಡುಕೊಂಡಿಲ್ಲ, ಅದು ಮಾನವ-ಕಲ್ಪಿತ ವಿಧಾನಗಳನ್ನು ಮೀರಿಸಿದೆ, ವೈವಿಧ್ಯಮಯ ಸಮಸ್ಯೆ-ಪರಿಹರಿಸುವ ಸನ್ನಿವೇಶಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳಲಾಗುತ್ತಿದೆ.

ಸಂಕೀರ್ಣ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಎಐ ಯ ಸಾಮರ್ಥ್ಯಗಳನ್ನು ಬಳಸಿಕೊಳ್ಳುಬಹುದಾಗಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಗಣಿತಜ್ಞರು ಪ್ರತಿಪಾದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net