More

    ದೇಶದ 2ನೇ ಐಟಿ ದಿಗ್ಗಜ ಇನ್ಫೋಸಿಸ್​ನಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ!

    ಬೆಂಗಳೂರು: ದೇಶದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ(ಐಟಿ) ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಿಸಿದೆ. ಹೆಚ್ಚಿಸಿದ ಸಂಬಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಉದ್ಯೋಗಿಗಳಿಗೆ ಆದೇಶ ಪ್ರತಿಯನ್ನು ಸಹ ನೀಡಿದೆ.

    ಇದನ್ನೂ ಓದಿ: 2 ದಿನ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ, ಹಲವೆಡೆ ಚಳಿ..ಚಳಿ
    ವರದಿ ಪ್ರಕಾರ, ಇನ್ಫೋಸಿಸ್​ ಸರಾಸರಿ ವೇತನ ಶೇ.10ಕ್ಕಿಂತ ಕಡಿಮೆ ಹೆಚ್ಚಳವಾಗಿದೆ. ಸಾಂಪ್ರದಾಯಕವಾಗಿ ಏಪ್ರಿಲ್​ 1ರಿಂದ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ.

    ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮವಾಗಿ ಇನ್ಫೋಸಿಸ್ ಈ ಕ್ರಮ ಕೈಗೊಂಡಿದೆ. ಏಪ್ರಿಲ್​1 ರ ಸಂಬಳದ ಜತೆ ಹೆಚ್ಚಾದ ವೇತನ ನೀಡಲು ನಿರ್ಧರಿಸಿದೆ. ವೇತನ ಹೆಚ್ಚಳದ ನಿರ್ದಿಷ್ಟ ವಿವರಗಳು ಸದ್ಯಕ್ಕೆ ಲಭ್ಯವಿಲ್ಲವಾದರೂ, ಆಂತರಿಕ ಮೂಲಗಳು ಹೇಳುವಂತೆ ಸರಾಸರಿ ಹೆಚ್ಚಳವು ಒಂದೇ ಶ್ರೇಣಿಯಲ್ಲಿ ಇರಬಹುದು ಎನ್ನಲಾಗುತ್ತಿದೆ.

    ಇನ್ನು ವೇತನ ಪರಿಷ್ಕರಣೆ ನವೆಂಬರ್ 1ರಿಂದ ಜಾರಿಗೆ ಬರುತ್ತದೆ. ಕಂಪೆನಿಯು ತನ್ನ ಉದ್ಯೋಗಿಗಳಿಗೆ ಈ ಬದಲಾವಣೆಯನ್ನು ತಿಳಿಸಿದೆ. ಸಂಸ್ಥೆಯು ಕರೋನಾ ಮತ್ತಿತರ ಸಂಕಷ್ಟ ಕಾಲದಲ್ಲಿ ​ಉದ್ಯೋಗಿಗಳು ತೋರಿದ ಬದ್ಧತೆ ಮತ್ತು ಅಸಾಧಾರಣ ಕಾರ್ಯಕ್ಷಮತೆಗೆ ಕೃತಜ್ಞತೆ ವ್ಯಕ್ತಪಡಿಸಿದೆ.

    ವೇತನ ಹೆಚ್ಚಳವು ಮುಖ್ಯವಾಗಿ ಸಂಸ್ಥೆಯೊಳಗಿನ ಅನುಭವಿ, ವೃತ್ತಿಪರರ ಮೇಲೆ ಕೇಂದ್ರೀಕರಿಸುವಂತಿದೆ. ಪ್ರವೇಶ ಹಂತದ ಉದ್ಯೋಗಿಗಳನ್ನು ಈ ವರ್ಷದ ವೇತನ ಹೆಚ್ಚಳದಿಂದ ಹೊರಗಿಡಲಾಗಿದೆ. ಒಟ್ಟಾರೆ ಸರಾಸರಿ ಹೆಚ್ಚಳವು ಶೇ.10 ಕ್ಕಿಂತ ಕಡಿಮೆ ಇದೆ.

    ಈ ಸಕಾರಾತ್ಮಕ ಬೆಳವಣಿಗೆ ಡಿ.16 ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ‘ನಕ್ಷತ್ರದ ಶನಿವಾರ ಸಂಸ್ಕೃತಿ ಕಾರ್ನಿವಲ್’ ಕಾರ್ಯಕ್ರಮಕ್ಕೆ ಒಂದು ದಿನದ ಮೊದಲು ವೇತನ ಹೆಚ್ಚಳ ಆದೇಶ ಪತ್ರಗಳನ್ನು ವಿತರಿಸಿ ಉದ್ಯೋಗಿಗಳಲ್ಲಿ ಸಂತಸ ಉಂಟು ಮಾಡಲು ಯತ್ನಿಸಿದೆ.

    ಇನ್ಫೋಸಿಸ್​ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಭಾರತದ ಯುವಕರು ವಾರಕ್ಕೆ 70ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು, ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಅವರು ತನ್ನ ಸಂಸ್ಥೆ ಉದ್ಯೋಗಿಗಳಿಗೆ ಮೊದಲು ಸಂಬಳ ಹೆಚ್ಚಿಸಲಿ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎತ್ತಿದ್ದರು.

    ತಮಿಳುನಾಡಿನ 4 ಜಿಲ್ಲೆಗಳು ಜಲಾವೃತ; ಶಾಲಾ-ಕಾಲೇಜುಗಳು, ಕಚೇರಿಗಳಿಗೆ ರಜೆ, ಹಲವು ವಿಮಾನಗಳು-ರೈಲುಗಳು ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts