

ವರ್ಷವಿಡೀ ಬೆಳೆಯಬಹುದು: ವರ್ಷವಿಡೀ ಅಣಬೆ ಕೃಷಿ ಮಾಡಬಹುದು. ಅತ್ಯಧಿಕ ಪೊ›ಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ಅಣಬೆ ಕೃಷಿಯನ್ನು ಒಳಾಂಗಣದಲ್ಲಿ ಅಂದರೆ ಒಂದು ಶೆಡ್ನಲ್ಲಿ , ರೂಮ್ಲ್ಲಿ ಮಾಡಬೇಕಾಗುತ್ತದೆ. ಭಾರತದಲ್ಲಿ ಆಯಿಸ್ಟರ್ ಅಣಬೆ, ಬಿಳಿಅಣಬೆ, ಕಪ್ಪೆಚಿಪ್ಪಿನ ಅಣಬೆ, ಭತ್ತದ ಹುಲ್ಲಿನ ಅಣಬೆ ಗುಂಪಿಗೆ ಸೇರಿದ ಎಲ್ಲ ಅಣಬೆ ತಳಿಗಳನ್ನು ಬೆಳೆಯಬಹುದು. ಕಪ್ಪೆಚಿಪ್ಪಿನ ಅಣಬೆಯನ್ನು ಬೆಳೆಸುವುದು ಅತಿ ಸುಲಭ. ಇದಕ್ಕೆ 22 ಡಿಗ್ರಿ ಸೆಲ್ಶಿಯಸ್ನಿಂದ 30ಡಿಗ್ರಿ ಸೆಲ್ಶಿಯಸ್ವರೆಗಿನ ಎಲ್ಲ ಹವಾಮಾನವನ್ನು ಹೊಂದಿಕೊಂಡು ಬೆಳೆಯುವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಸುಮಾರು 45 ದಿನಗಳ ಬೇಸಾಯ ಇದಾಗಿದ್ದು, ನಾಟಿ ಮಾಡಿದ 20 ದಿನಗಳಿಗೆ ಅಣಬೆ ಬಿಡಿಸಿಕೊಳ್ಳಬಹುದು.
ಒಣಗಿಸಿರುವ ಅಣಬೆ ಕೆ.ಜಿ.ಗೆ 3 ಸಾವಿರ ರೂ.!: ಅಣಬೆಯನ್ನು ನೀವು ಒಂದೊಮ್ಮೆ ಸರಿಯಾದ ಸಮಯಕ್ಕೆ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಒಣಗಿಸಿಡಬಹುದು. ಒಣಗಿಸಿದ ಅಣಬೆ ಕೆಜಿಗೆ 3 ಸಾವಿರ ರೂ.ವರೆಗೂ ಮಾರಾಟವಾಗುತ್ತದೆ. ಅಣಬೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವುದೇ ಬಗೆಯ ಅಡುಗೆಯಲ್ಲಾದರು ಪುಡಿ ಬೆರಸಬಹುದು. ಶೇಂಗಾ, ಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.
ಅತವೃಷ್ಟಿಯ ತಲೆನೋವಿಲ್ಲ: ಅತವೃಷ್ಟಿ, ನೆರೆಯಿಂದ ತತ್ತರಿಸಿರುವ ರೈತರಿಗೆ ಅಣಬೆ ಒಂದು ಒಳ್ಳೆಯ ಪರ್ಯಾಯ ಬೇಸಾಯ. ಪ್ರಾಕೃತಿಕ ವಿಕೋಪಗಳಿಂದ ಇದಕ್ಕೆ ತೊಂದರೆಯಾಗುದಿಲ್ಲ. ಅಣಬೆ ಬೆಳೆಯುವ ರೂಮ್ಲ್ಲಿ ಕೆಲ ಉಪಕರಣಗಳ ಸಹಾಯದಿಂದ ಹವಾಮಾನ ಕಾಪಾಡಿಕೊಂಡರೆ ಆಯಿತು, ಅಣಬೆ ಕೃಷಿಯಲ್ಲಿ ನಿರಂತರ ಆದಾಯ ಗಳಿಸಲು ಸಾಧ್ಯವಿದೆ.
ಅಣಬೆಯಲ್ಲಿದೆ ಆರೋಗ್ಯ ಭಾಗ್ಯ!: ಅಣಬೆಯ ಪದಾರ್ಥಗಳು ಪೊ›ಟೀನ್, ಜೀವಸತ್ವಗಳು, ಖನಿಜಾಂಶಗಳಿಂದ ಕೂಡಿವೆ. ಸಕ್ಕರೆ, ಕೊಬ್ಬಿನಾಂಶ ಕಡಿಮೆ ಪ್ರಮಾಣದಲ್ಲಿದ್ದು ಡಯಾಬಿಟೀಸ್ ಮತ್ತು ಹೃದ್ರೋಗಿಗಳಿಗೆ ಇದು ಉತ್ತಮ ಆಹಾರ. ಅಣಬೆ ಸಸ್ಯವರ್ಗಕ್ಕೆ ಸೇರಿದ ಶಿಲೀಂದ್ರ. ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಅಣಬೆಯನ್ನು ತರಕಾರಿ ಎಂದು ಗುರುತಿಸಲಾಗುತ್ತದೆ. ಇದೊಂದು ಉತ್ತಮ ಆಹಾರ. ಹಲವಾರು ವಿಧದ ಅಣಬೆಗಳಿದ್ದು, ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿವೆ.
ಸರ್ಕಾರದಿಂದ ಸಿಗುವ ಸವಲತ್ತು: ಅಣಬೆ ಬೆಳೆಯುವ ರೈತರಿಗೆ, ಸ್ವಸಹಾಯ ಗುಂಪುಗಳಿಗೆ ಶೆಡ್ ನಿರ್ವಣಕ್ಕಾಗಿ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಶೆಡ್ಗಾಗಿ 95 ಸಾವಿರ ರೂ. ನೀಡಲಾಗುತ್ತದೆ. ವ್ಯವಸಾಯ ಮೂಲದಿಂದ ಬರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮನೆ ಅಂಗಳದಲ್ಲಿಯೇ ಆಣಬೆ ಬೆಳೆಯಬಹುದು. ಹೆಚ್ಚಿನ ಭೂಮಿ ಅಗತ್ಯವಿಲ್ಲ. ಕಡಿಮೆ ಅವಧಿಯಲ್ಲಿ, ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ವಿದ್ಯಾವಂತ ನಿರುದ್ಯೊಗಿ ಯುವಕರಿಗೆ, ಮಹಿಳೆಯರಿಗೆ ಅಣಬೆ ಕೃಷಿ ವರದಾನವಾಗಿದೆ. ಹಾಗಾಗಿ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಅಣಬೆ ಕೃಷಿ ಕೋರ್ಸ್: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಅಣಬೆ ಕೃಷಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಅಣಬೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ಕೋರ್ಸ್ನಲ್ಲಿದೆ. ಅಣಬೆ ಕೃಷಿ ಹೇಗೆ ಆರಂಭಿಸಬೇಕು ಎನ್ನುವುದರಿಂದ ಹಿಡಿದು ಮಾರುಕಟ್ಟೆ ಎಲ್ಲಿದೆ? ಅಣಬೆ ರಫ್ತು ಮಾಡಲು ಇರುವ ಅವಕಾಶ ಎಷ್ಟು? ಎಲ್ಲೆಲ್ಲಿ ಅಣಬೆಗೆ ಬೇಡಿಕೆ ಇದೆ? ಬೇಡಿಕೆ ಇಲ್ಲದ ಕಡೆಯೂ ಅಣಬೆಗೆ ಹೇಗೆ ಮಾರುಕಟ್ಟೆ ಕಂಡುಕೊಳ್ಳಬಹುದು? ಹೀಗೆ ಪ್ರತಿಯೊಂದು ಮಾಹಿತಿ ಕೂಡ ವಿಡಿಯೋ ವಿವರಣೆ ಸಮೇತ ಇದೆ. ಅಣಬೆ ಕೃಷಿಯಲ್ಲಿ ಸಾಧನೆ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ಸಾಧಕ ರೈತರು ಮತ್ತು ಕೃಷಿ ವಿಜ್ಞಾನಿಗಳು ವಾಣಿಜ್ಯ ಅಣಬೆ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ಡೌನ್ ಲೋಡ್ ಮಾಡಿ, ಅಣಬೆ ಕೃಷಿ ಆರಂಭಿಸಿ.
ಜ.9ಕ್ಕೆ ತರಬೇತಿ ಕಾರ್ಯಾಗಾರ: ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ವತಿಯಿಂದ 2022ರ ಜನವರಿ 9 ರಂದು ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂರ್ಪಸಿ- 7975465873 ಅಥವಾ 9008575014.