ಫ್ರೆಂಡ್​ಷಿಪ್​ ಡೇ: ಕುಟುಂಬಕ್ಕಿಂತ ನಾನೇ ಹೆಚ್ಚಾದೆ...

parashivamurthy
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ...  

ನನ್ನ ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಸೇರಿ 10 ದಿನಗಳ ಪ್ರವಾಸ ಹೋಗಬೇಕೆಂದುಕೊಂಡಿದ್ದೆವು. ಆದರೆ ಅದು ಕಾರಣಾಂತರಗಳಿಂದ ರದ್ದಾಯಿತು. ನಂತರ ಮೂರು ದಿನಗಳ ಪ್ರವಾಸ ನಿಗದಿಯಾಗಿತ್ತು. ನನಗೆ ತೀವ್ರವಾದ ಹಣಕಾಸು ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಆಗ ಸ್ನೇಹಿತ ಪಂಚಾಕ್ಷರಿ, ನನ್ನ ಮನದಾಳವನ್ನು ಅರಿತವನೇ ತನ್ನ ಕುಟುಂಬದವರನ್ನು ಬಿಟ್ಟು ನನ್ನ ಖರ್ಚನ್ನು ತಾನೇ ಹಾಕಿಕೊಂಡು ಪ್ರವಾಸದ ವೇಳೆಯೂ ಸ್ವಲ್ಪವೂ ಹಣಕಾಸಿನ ಸಮಸ್ಯೆ ಆಗದಂತೆ ನೋಡಿಕೊಂಡ. ನಿಜವಾದ ಸ್ನೇಹ ಇದೇ ಅಲ್ಲವೆ?

| ಪರಶಿವಮೂರ್ತಿ ಎನ್.ಪಿ, ಸುತ್ತೂರು, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net