ಫ್ರೆಂಡ್​ಷಿಪ್​ ಡೇ: ಹುಡುಗರೆಲ್ಲಾ ಕೆಟ್ಟವರೆಂದುಕೊಂಡಿದ್ದೆ...

jyothi
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ...

21 ವರ್ಷಗಳ ಹಿಂದಿನ ಮಾತು. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮನೆಯಲ್ಲಿ ನಿತ್ರಾಣವಾಗಿ ಬಿದ್ದಿದ್ದೆ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಕೈಯ ನಾಳಗಳಿಗೆ ರಕ್ತ ಏರುತ್ತಿತ್ತು... ಆ ಹೊಸ ರಕ್ತ ನನ್ನಲ್ಲಿ ಸೇರಿ ನನ್ನನ್ನು ಎಲ್ಲೋ ಆಗಸಕ್ಕೆ ತೇಲಿಸಿದಂತಾಗುತ್ತಿತ್ತು. ಎಚ್ಚೆತ್ತು ಸುತ್ತ ಕಣ್ಣಾಡಿಸಲು ಯತ್ನಿಸಿದ್ದೆ, ಸಾಧ್ಯವಾಗಲಿಲ್ಲ. ಕಣ್ಣು ಮುಚ್ಚಿದ್ದೆ, ಆದರೆ ಮಾತನಾಡುವುದು ಮಾತ್ರ ಕೇಳಿಸುತ್ತಿತ್ತು. ಪಕ್ಕದಲ್ಲಿ ಕುಳಿತ ನನ್ನಮ್ಮ ‘ನೀವು ಬಂದು ರಕ್ತಕೊಟ್ಟು ಮಗಳ ಜೀವ ಉಳಿಸಿದಿರಿ’ ಎಂದಳು. ಯಾರು, ಏನು ಎಂದು ಅರಿಯದಾಗಿದ್ದೆ. ಆಮೇಲೆ ಎಚ್ಚರವಾದಾಗ ನನ್ನ ಕ್ಲಾಸ್​ಮೇಟ್ಸ್ ಅಲ್ಲಿದ್ದರು. ಅವರಲ್ಲಿ ಒಬ್ಬಾತನ ರಕ್ತ ನನ್ನ ಮೈಸೇರಿತ್ತು. ಎಂದಿಗೂ ಮಾತನಾಡಿಸದ, ಎಲ್ಲಾ ಹುಡುಗರೂ ಕೆಟ್ಟವರೆಂದು ಭಾವಿಸುತ್ತಿದ್ದ ನನ್ನ ಭಾವನೆಗಳೆಲ್ಲವೂ ಅಂದು ಜರ್ ಎಂದು ಇಳಿದುಹೋಯಿತು. ಇದಕ್ಕಿಂತ ಸ್ನೇಹ ಇನ್ನು ಬೇಕಾ? ಹೆಮ್ಮೆಯ ಸಂಗತಿ ಎಂದರೆ ಇಂದಿಗೂ ನಾವೆಲ್ಲ ಸ್ನೇಹದಿಂದ ಇದ್ದೇವೆ.

| ಜ್ಯೋತಿ ಎಚ್.ಎಂ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net