

ನಾನು ಕಾಲೇಜಿನಲ್ಲಿರುವಾಗ ಸ್ನೇಹಿತನಾದವ ಮೋಹನ್ ಜೋಷಿ. ನಾನೋ ಫೀಸು ಕಟ್ಟಲಾಗದ ಸ್ಥಿತಿಯವನು, ಆದರೆ ಆತನೋ ಶ್ರೀಮಂತ. ಆದರೆ ಇದು ನಮ್ಮ ಸ್ನೇಹಕ್ಕೆ ಎಂದಿಗೂ ಅಡ್ಡಿಯಾಗಿದ್ದೇ ಇಲ್ಲ. ಅಂತಿಮ ವರ್ಷದಲ್ಲಿದ್ದಾಗ ಕಾಲೇಜಿನ ಫೀಸ್ ಕಟ್ಟಲಾಗದೇ ಎರಡು ದಿನ ಚಕ್ಕರ್ ಹೊಡೆದಿದ್ದೆ. ಮೂರನೇ ದಿನ ಮನೆಗೆ ಬಂದ ಮೋಹನ್, ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ನೀನು ಫಸ್ಟ್ ಬಂದಿರುವೆ ಎಂದು ಹೇಳಿ ಕಾಲೇಜಿಗೆ ಕರೆದುಕೊಂಡು ಹೋದ. ಪ್ರಿನ್ಸಿಪಾಲ್ ಸರ್ಟಿಫಿಕೇಟ್ ಕೊಟ್ಟರು. ಆದರೆ ಫೀಸ್ ಕುರಿತು ಒಳಗೊಳಗೇ ಕೊರಗುತ್ತಿದ್ದೆ. ಅದಾಗಲೇ ಕಾಲೇಜಿನ ಗುಮಾಸ್ತ ಬಂದು ನಿಮ್ಮ ಫೀಸ್ ಕಟ್ಟಲಾಗಿದೆ ಎಂದು ರಷೀದಿ ಕೊಟ್ಟು ಹೋದರು. ಆಮೇಲೆ ನೋಡಿದರೆ ಅದನ್ನು ಕಟ್ಟಿದ್ದು ಮೋಹನ್ ಆಗಿತ್ತು! ಆತ ಮಾಡಿದ ಸಹಾಯದ ಮುಂದೆ ಫಸ್ಟ್ ಪ್ರೈಸ್ ಕೂಡ ಗೌಣ ಎನಿಸಿಬಿಟ್ಟಿತು.
| ಆನಂದ್ ಕಳಸ ಬನಶಂಕರಿ ಬೆಂಗಳೂರು