ಲಾಭ ಕೊಡುವ ನಾಲ್ಕು ಕೃಷಿ ಉಪ ಕಸುಬು!

Money Mathu
Published on
ಖಡಕ್ ನಾಥ್ ಕೋಳಿ...! ಏನಪ್ಪಾ ಇದು, ಹೆಸರೇ ಇಷ್ಟು ವಿಚಿತ್ರವಾಗಿದೆಯಲ್ಲ ಅಂತ ಕೇಳ್ತಿದ್ದೀರಾ? ಹೌದು. ಇದು ಮಧ್ಯಪ್ರದೇಶ ಮೂಲದ ಬುಡಕಟ್ಟು ಜನಾಂಗದವರು ಸಾಕಣೆ ಮಾಡುತ್ತಿದ್ದ ಕೋಳಿಯ ವೆರೈಟಿ. 2018ರ ನಂತರದಲ್ಲಿ ಇದು ದೇಶಾದ್ಯಂತ ಮುನ್ನೆಲೆಗೆ ಬಂದಿದೆ. ಹಲವು ಭಾಗಗಳಲ್ಲಿ ರೈತರು ಈ ಕೋಳಿಯನ್ನು ಸಾಕಾಣಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಕಡುಕಪ್ಪು ಬಣ್ಣದ ಈ ಕೋಳಿಯ ಮಾಂಸವೂ ಕಪ್ಪು. ಔಷಧೀಯ ಗುಣಗಳು ಹೆಚ್ಚಿಗೆ ಇರುವುದರಿಂದ ಈ ಕೋಳಿಯ ಮಾಂಸ ಮತ್ತು ಮೊಟ್ಟೆಗೆ ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆ ಇದೆ. ಕೋಳಿ ಸಾಕಣೆ ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಅನ್ನೋರಿಗೆ ಖಡಕ್ ನಾಥ್ ಒಳ್ಳೆಯ ಆಯ್ಕೆ. ಖಡಕ್ ನಾಥ್ ಕೋಳಿ ಸಾಕಣೆಗೆ ಫಾರಂ ಕೋಳಿ ಸಾಕಣೆಗೆ ಬೇಕಾಗುವಷ್ಟು ಹಣ ಅಗತ್ಯವಿಲ್ಲ. ಇಲ್ಲಿ ಸಾಕಾಣಿಕೆ ಖರ್ಚು ಕಡಿಮೆ ಇರುವುದರಿಂದ ಹೆಚ್ಚು ಲಾಭದಾಯಕ. ಖಡಕ್ ನಾಥ್ ಕೋಳಿಯ 1 ಕೆ.ಜಿ. ಮಾಂಸಕ್ಕೆ ಮಾರುಕಟ್ಟೆಯಲ್ಲಿ 700ರಿಂದ 800 ರೂ. ಬೆಲೆ ಇದೆ. ನಿಮ್ಮ ಬಳಿ ಸುಮಾರು 2 ಸಾವಿರ ಚದರಡಿ ವಿಸ್ತೀರ್ಣದ ಜಾಗವಿದ್ದು, ಅಲ್ಲಿ ಒಂದು ಸಾವಿರ ಖಡಕ್ ನಾಥ್ ಕೋಳಿಗಳನ್ನು ಸಾಕಣೆ ಮಾಡಿದರೆ 5 ತಿಂಗಳಿಗೆ ಬರೋಬ್ಬರಿ 8 ಲಕ್ಷ ರೂ. ಆದಾಯ ಗಳಿಸಬಹುದು. ಈ ಲೆಕ್ಕಾಚಾರ ಕಾಲ್ಪನಿಕ ಅಂದಾಜಲ್ಲ, ಕರುನಾಡ ರೈತರೊಬ್ಬರು ಇಷ್ಟು ಆದಾಯ ಗಳಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಬಾತುಕೋಳಿ ಸಾಕಣೆ ಮಾಡಿ, ಕೈ ತುಂಬಾ ಗಳಿಸಿ: ಬಾತುಕೋಳಿ ಸಾಕಣೆ ಭಾರತದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿರುವ ಕೋಳಿಗಳ ಒಟ್ಟು ಸಂಖ್ಯೆಯಲ್ಲಿ ಶೇ.10 ಪಾಲು ಬಾತುಕೋಳಿಗಳದ್ದೇ ಇದೆ. ಬಾತುಕೋಳಿಗಳು ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳ ಸಂಖ್ಯೆಗೆ ಶೇ.7ರಿಂದ ಶೇ.8 ಕೊಡುಗೆ ನೀಡುತ್ತವೆ. ಮಾಂಸಕ್ಕಾಗಿಯೂ ಬಾತುಕೋಳಿಗಳನ್ನು ಸಾಕಬಹುದು. ಇತ್ತೀಚಿನ ದಿನಗಳಲ್ಲಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿರುವುದರಿಂದ ಆಹಾರಾಭ್ಯಾಸ ಬದಲಾಗುತ್ತಿವೆ. ದಿನ ಕಳೆದಂತೆ ಬಾತುಕೋಳಿಯ ಮಾಂಸ ಮತ್ತು ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಕೃಷಿಯ ಜತೆಗೆ ಉಪಕಸುಬಾಗಿ ಅಥವಾ ಪೂರ್ಣಪ್ರಮಾಣದಲ್ಲಿ ವಾಣಿಜ್ಯವಾಗಿ ಬಾತುಕೋಳಿ ಸಾಕಣೆ ಒಂದು ಒಳ್ಳೆಯ ಆಯ್ಕೆ ಎಂದು ಪರಿಗಣಿಸಬಹುದು. ಬಾತುಕೋಳಿ ವಿವಿಧ ಹವಾಗುಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಕಾಳಜಿ ಅವಶ್ಯಕತೆ ಇಲ್ಲದೇ ಹಿತ್ತಲು ಪದ್ಧತಿಯಲ್ಲಿ ಸಾಕಬಹುದು. ಇವುಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಕೋಳಿಗಳಿಗೆ ವಸತಿ ನಿರ್ವಿುಸುವುದಕ್ಕಿಂತ ಕಡಿಮೆ ಖರ್ಚಿನದಾಗಿರುತ್ತದೆ.

ಹಂದಿ ಸಾಕಣೆಯಲ್ಲಿ ಲಾಭ ಗಳಿಸುವುದು ಹೇಗೆ?: ಮಾಂಸ ಪ್ರಿಯರು ಹೆಚ್ಚಾಗಿ ಕುರಿ, ಕೋಳಿ, ಮೇಕೆ, ಮೀನು ಜತೆಗೆ ಹಂದಿ ಮಾಂಸ ಕೂಡ ಇಷ್ಟ ಪಡ್ತಾರೆ. ಹಂದಿ ಮಾಂಸ ಬಹಳ ರುಚಿಕರ ಮತ್ತು ಸ್ವಾದಿಷ್ಟಕರ ಕೂಡ. ಹಿಂದೆಲ್ಲ ಹಂದಿ ಮಾಂಸಕ್ಕೆ ಅಷ್ಟೇನೂ ಬೇಡಿಕೆ ಇಲ್ಲದ ಕಾರಣ ಈ ಮಾಂಸಕ್ಕೆ ಬೆಲೆಯೂ ಅಷ್ಟೇನು ಜಾಸ್ತಿ ಇರಲಿಲ್ಲ. ಆದರೆ, ಈಗ ಹಂದಿ ಮಾಂಸದ ಅನುಕೂಲಗಳನ್ನು ಜನರು ಅರಿತ ಕಾರಣದಿಂದ ಹಂದಿ ಮಾಂಸಕ್ಕೆ ಬೇಡಿಕೆ ಜತೆ ಬೆಲೆಯೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ನೂರಾರು ಜನರು ಹಂದಿ ಸಾಕಣೆಯನ್ನು ಮುಖ್ಯ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಇನ್ನು ಕೆಲವರು ಇದನ್ನು ಕೃಷಿ ಜತೆ ಉಪ ಕಸುಬಾಗಿ ಕೈಗೆತ್ತಿಕೊಂಡಿದ್ದಾರೆ. ಹಂದಿ ಸಾಕಣೆಯನ್ನು ದೊಡ್ಡ ಅಥವಾ ಸಣ್ಣ ಪ್ರಮಾಣದಲ್ಲಿ ಮಾಡಿದರೂ ಲಾಭವೇ. ಹಂದಿ ಸಾಕಣೆಗೆ ಹೆಚ್ಚು ಖರ್ಚಿಲ್ಲ. ಆದರೆ ಹಂದಿ ಮಾಂಸಕ್ಕೆ ಬೇಡಿಕೆ ಇದೆ. ಇದನ್ನು ಅರಿತಿರುವ ರೈತರು, ಉದ್ಯಮಿಗಳು ಹಂದಿ ಸಾಕಣೆಯಲ್ಲಿ ತೊಡಗಿ ವರ್ಷಕ್ಕೆ ಕೆಲ ಲಕ್ಷಗಳಿಂದ ಕೋಟ್ಯಂತರ ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ 12 ಸಾವಿರ ಕೋಟಿ ರೂ. ಮೌಲ್ಯದ ಹಂದಿ ಮಾಂಸ ಮಾರಾಟವಾಗುತ್ತಿದೆ. ಹಂದಿ ಮಾಂಸದ ಇಂದಿನ ರಿಟೇಲ್ ಬೆಲೆ ಕೆಜಿಗೆ 120ರಿಂದ 350 ರೂ. ಮತ್ತೊಂದು ವಿಷಯ ಏನಂದ್ರೆ, ಹಂದಿ ಸಾಕಣೆಗೆ ನಿಮಗೆ ವಿಶಾಲವಾದ ಜಾಗದ ಅಗತ್ಯ ಇಲ್ಲ. ಕೇವಲ ಅರ್ಧ ಎಕರೆಯಲ್ಲಿ 2,000 ಹಂದಿಗಳನ್ನು ಸಾಕಬಹುದು. ಒಂದು ಆರೋಗ್ಯಕರ ಹಂದಿಯ ತೂಕ 150 ಕೆಜಿಯಷ್ಟಿರುತ್ತೆ.

ಮುರಾ› ಎಮ್ಮೆ ಸಾಕಿ, ಲಕ್ಷ ಲಕ್ಷ ಗಳಿಸಿ; ಕೃಷಿಯ ಜತೆಗೆ ಹೈನೋದ್ಯಮ ಮಾಡಬೇಕು ಎನ್ನುವವರಿಗೆ ಮುರಾ› ಎಮ್ಮೆ ಸಾಕಣೆ ಒಳ್ಳೆಯ ಆಯ್ಕೆ. ದಿನಕ್ಕೆ 16ರಿಂದ 25 ಲೀಟರ್ ಹಾಲು ಕೊಡುವ ಮುರಾ› ಎಮ್ಮೆಗಳು ರೈತರ ಜೇಬು ತುಂಬಿಸುತ್ತಿವೆ. ಹರಿಯಾಣದ ಈ ತಳಿ, ಹಾಲು ಉತ್ಪಾದನೆಗೆ ಹೆಸರಾಗಿರುವುದಲ್ಲದೆ, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದ್ದು ದಕ್ಷಿಣ ಭಾರತದ ಹವಾಗುಣದಲ್ಲೂ ಸಾಕಬಹುದಾಗಿದೆ. ವೃತ್ತಿಪರ ಡೇರಿ ಫಾರಂ ಆರಂಭಿಸಬೇಕು ಎನ್ನುವವರಿಗೆ ಮುರಾ› ತಳಿ ಹೇಳಿ ಮಾಡಿಸಿದಂತಿದೆ. ಸುಮಾರು 300 ದಿನಗಳ ವರೆಗೆ ಹಾಲು ಕೊಡುವ ಮುರಾ› 12 ವರ್ಷಗಳ ಕಾಲ ಬದುಕುತ್ತದೆ. ಹಾಲಿನ ಉತ್ಪಾದನೆ ಸಾಮರ್ಥ್ಯದ ಆಧಾರದಲ್ಲಿ ಮುರಾ› ಬೆಲೆ 1 ಲಕ್ಷ ರೂ.ನಿಂದ 1.5 ಲಕ್ಷ ರೂ.ವರೆಗೆ ಇದೆ. ಮುರಾ› ಎಮ್ಮೆ ಸಾಕಲು ಹಸಿ ಹುಲ್ಲು, ಒಣ ಹುಲ್ಲು, ಫೀಡ್ಸ್ ಎಲ್ಲ ಸೇರಿ ಪ್ರತಿ ದಿನಕ್ಕೆ 100ರಿಂದ 120 ರೂ. ಖರ್ಚು ಬರುತ್ತದೆ. ಆದರೆ, ದಿನಕ್ಕೆ 25 ಲೀಟರ್​ವರೆಗೆ ಹಾಲು ಕರೆಯುವುದರಿಂದ ಈ ಖರ್ಚು ದೊಡ್ಡದಲ್ಲ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ ಹತ್ತಾರು ಕೋರ್ಸ್

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಣಕಾಸು ನಿರ್ವಹಣೆ, ಕೃಷಿ ಮತ್ತು ಬಿಸಿನೆಸ್​ಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಕೋರ್ಸ್​ಗಳಿವೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವವರೇ ಕೋರ್ಸ್​ನಲ್ಲಿ ಮಾರ್ಗದರ್ಶಕರಾಗಿದ್ದಾರೆ. ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಲಾಭದಾಯಕ ಬಿಸಿನೆಸ್​ಗಳು, ಕಡಿಮೆ ಕೃಷಿ ಭೂಮಿಯಲ್ಲಿ ಹೆಚ್ಚು ಲಾಭ ಗಳಿಸೋದು ಹೇಗೆ? ನಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳೋದು ಹೇಗೆ? ಎನ್ನುವ ಬಗ್ಗೆ ಕೋರ್ಸ್​ನಲ್ಲಿ ವಿಸõತವಾದ ಮಾಹಿತಿ ಇದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ನಿಮ್ಮ ಬದುಕಿನ ಆದಾಯದ ದಾರಿಯನ್ನು ಕಂಡುಕೊಂಡು ಜೀವನದಲ್ಲಿ ಯಶಸ್ವಿಯಾಗಿ.

ಮೇಕಪ್ ಆರ್ಟಿಸ್ಟ್, ಆಯಿಲ್ ಮಿಲ್ ಬಿಸಿನೆಸ್ ಬಗ್ಗೆ ಕಾರ್ಯಾಗಾರ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ ವತಿಯಿಂದ ಮೇಕಪ್ ಆರ್ಟಿಸ್ಟ್ ಮತ್ತು ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಜತೆ ಉದ್ಯಮ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂರ್ಪಸಿ- ಮೊ.ಸಂ. 7975465873

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net