ಅಪ್ಪನೆಂಬ ಅದ್ಭುತ| ದುಡ್ಡು ಹೇಗೆ ಹೊಂದಿಸಿದರೋ ನಾನರಿಯೆ...

vinodakumar copy
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಶಿಸ್ತು, ನೇರ ನುಡಿ, ಕಡಿಮೆ ಮಾತು, ಸ್ವಲ್ಪ ಸಿಟ್ಟು, ಬಿಗುಮಾನ, ಹಠ ಸ್ವಭಾವದ ನನ್ನಪ್ಪ ಬಲು ಸ್ವಾಭಿಮಾನಿ. ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠೆಯಿಂದ ಸಲ್ಲಿಸಿದ ಪ್ರಾಮಾಣಿಕ ಸೇವೆ, ಕೆಲಸದಲ್ಲಿನ ಅಪಾರ ಪ್ರೀತಿ, ಆಡಳಿತದಲ್ಲಿ ದೂರದರ್ಶಿತ್ವವನ್ನೊಳಗೊಂಡ ಯೋಚನೆ, ಯೋಜನೆಗಳು, ದಾಖಲೆಗಳ ನಿರ್ವಹಣೆ- ಇವೆಲ್ಲ ನನಗೂ ಶಿಕ್ಷಣ ಕ್ಷೇತ್ರದ ಆಯ್ಕೆಗೆ ಪ್ರೇರಣೆಯಾಯಿತು. ಓದಬೇಕೆಂದಷ್ಟೂ ಓದಿಸಿದರು. ಬಟ್ಟೆ, ಪುಸ್ತಕ, ಕಾಲೇಜು ಮತ್ತು ಹಾಸ್ಟೆಲ್ ಶುಲ್ಕವನ್ನೆಲ್ಲ ಹೇಗೆ ಹೊಂದಿಸಿದರೋ ನಾ ಅರಿಯೆ. ಸಂಕಷ್ಟದಲ್ಲಿದ್ದ ಅನೇಕ ವಿದ್ಯಾರ್ಥಿಗಳಿಗೆ, ವ್ಯಕ್ತಿಗಳಿಗೆ ಸಹಾಯ ಹಸ್ತ ನೀಡಿ ಸ್ಪಂದಿಸಿದರು. ಬೆಟ್ಟದಷ್ಟು ಪ್ರೀತಿ ಹೊತ್ತಿರುವ ನನ್ನಪ್ಪನೇ ನನ್ನ ಪಾಲಿನ, ಬಾಳಿನ ಆದರ್ಶ ಗುರು. | ವಿನೋದಕುಮಾರಿ ಎಚ್.ವಿ. ಹೊಸ ಅಗ್ರಹಾರ, ತೀರ್ಥಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net