ಫ್ಯಾಷನ್ ಡಿಸೈನಿಂಗ್ ಕಲಿಕಾ ಪ್ರವೇಶಕ್ಕೆ 3 ಎಂಟ್ರನ್ಸ್ ಎಕ್ಸಾಂ

Masth 3
Published on

| ತಿಮ್ಮೇಗೌಡ ಕೋಟಮಾರನಹಳ್ಳಿ ಬೆಂಗಳೂರು

ಇಂಟರ್ ಮೀಡಿಯೇಟ್ ಮುಗಿದ ಕೂಡಲೆ ಫ್ಯಾಷನ್ ಡಿಸೈನಿಂಗ್ ಕಲಿಯುವಾಸೆ ನಿಮ್ಮಲ್ಲಿದ್ದರೆ, ಖಚಿತವಾಗಿ ಅದನ್ನು ಈಡೇರಿಸುವ ಕಡೆಗೆ ಗಮನಹರಿಸಿ. ಮಾರುಕಟ್ಟೆ ಸಂಶೋಧನೆಯ ದತ್ತಾಂಶವೂ ಫ್ಯಾಷನ್ ಡಿಸೈನಿಂಗ್ ಬೆಳೆಯುತ್ತಿರುವ ಕ್ಷೇತ್ರ ಎಂಬುದನ್ನು ಎತ್ತಿ ತೋರಿಸಿದೆ. ಮಾರುಕಟ್ಟೆಯ ದತ್ತಾಂಶ ಪ್ರಕಾರ, 2026ರಲ್ಲಿ ಜಾಗತಿಕ ಫ್ಯಾಷನ್ ಡಿಸೈನ್ ಮತ್ತು ಪ್ರೊಡಕ್ಷನ್ ಸಾಫ್ಟ್ ವೇರ್ ಮೌಲ್ಯ 3.8 ಶತಕೋಟಿ ಡಾಲರ್ ಆಗಲಿದೆ. 2018ರಲ್ಲಿ ಈ ಕ್ಷೇತ್ರದ ಮೌಲ್ಯ 1.91 ಶತಕೋಟಿ ಡಾಲರ್ ಇತ್ತು. ಬೆಳವಣಿಗೆಯ ವೇಗವನ್ನು ಗಮನಿಸಿದರೆ, ಈ ಕ್ಷೇತ್ರವು ಕ್ಷಿಪ್ರವಾಗಿ ಬೆಳೆಯುತ್ತಿರುವಂಥದ್ದು ಎಂದು ಹೇಳಬಹುದು. ಈ ಕ್ಷೇತ್ರದಲ್ಲಿ ಉದ್ಯೋಗ ಶುರುಮಾಡಬೇಕಾದರೆ ದೇಶದ ಮುಂಚೂಣಿಯ ಫ್ಯಾಷನ್ ಡಿಸೈನಿಂಗ್ ಸಂಸ್ಥೆಗಳಲ್ಲಿ ಕಲಿಯುವ ಕನಸು ಕಾಣಬೇಕು. ಈ ಕನಸು ನನಸು ಮಾಡಬೇಕಾದರೆ ಮೂರು ಪ್ರಮುಖ ಎಂಟ್ರನ್ಸ್ ಎಕ್ಸಾಂ ಎದುರಿಸಬೇಕು.

ಎನ್​ಐಎಫ್​ಟಿ ಎಂಟ್ರನ್ಸ್ ಎಕ್ಸಾಂ: ದೇಶದ ವಿವಿಧೆಡೆ ಇರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನಿಂಗ್​ನಲ್ಲಿ ಇರುವ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ನಡೆಸುವ ಪ್ರವೇಶ ಪರೀಕ್ಷೆ ಇದು. ಈ ಸಂಸ್ಥೆಗಳಲ್ಲಿ ಕಲಿತವರು ಬಾಟಾ, ಬ್ಲಾಕ್​ಬೆರಿ, ಡೆಕಥ್ಲಾನ್, ಜೆಪಿಸಿ ಮತ್ತು ಇತರ ಸಂಸ್ಥೆಗಳಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ.

ಯುಸಿಇಇಡಿ ಎಕ್ಸಾಂ: ಐಐಟಿ ಬಾಂಬೆ ಪ್ರತಿ ವರ್ಷ ಈ ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆ, ಐಐಟಿ ಡೆಲ್ಲಿ, ಐಐಟಿ ಗುವಾಹಟಿ, ಐಐಟಿ ಹೈದರಾಬಾದ್, ಐಐಟಿಡಿಎಂ ಜಬಲ್​ಪುರಗಳಲ್ಲಿ ಸಂಬಂಧಿತ ಕೋರ್ಸ್​ಗೆ ಪ್ರವೇಶ ಪಡೆಯುತ್ತಾರೆ.

ಎಫ್​ಡಿಡಿಐ ಎಐಎಸ್​ಟಿ ಎಂಟ್ರನ್ಸ್ ಎಕ್ಸಾಂ: ಫೂಟ್​ವೇರ್ ಡಿಸೈನ್ ಆಂಡ್ ಡೆವಲಪ್​ವೆುಂಟ್ ಇನ್​ಸ್ಟಿಟ್ಯೂಟ್ ಈ ಪರೀಕ್ಷೆಯನ್ನು ನಡೆಸುತ್ತದೆ. ಫ್ಯಾಷನ್ ಡಿಸೈನ್​ನಲ್ಲಿ ಪದವಿಯನ್ನು ಮತ್ತು ಫೂಟ್​ವೇರ್ ಡಿಸೈನ್ ಮತ್ತು ಪ್ರೊಡಕ್ಷನ್​ನಲ್ಲಿ ಕೂಡ ಪದವಿಯನ್ನು ಎಫ್​ಡಿಡಿಐ ಒದಗಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net