ಜನಮತ | ದ್ವಿಚಕ್ರ ವಾಹನದ ಸೈಡ್ ಮಿರರ್ ತೆಗೆಸಬೇಡಿ

Janamatha1
Published on

ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರಲ್ಲಿ ಹೊಸ ಟ್ರೆಂಡ್ ಆರಂಭವಾಗಿದೆ. ಫ್ಯಾಷನ್ ನೆಪದಲ್ಲಿ ದ್ವಿಚಕ್ರ ವಾಹನವನ್ನು ಕನ್ನಡಿರಹಿತವಾಗಿ ಮಾಡುವುದು. ವಾಹನಗಳಲ್ಲಿ ಮಿರರ್ ಅಳವಡಿಸುವುದಕ್ಕೆ ನಿರ್ದಿಷ್ಟವಾದ ಉದ್ದೇಶಗಳಿವೆ. ವಾಹನ ಚಲಾಯಿಸುವಾಗ ಹಿಂಭಾಗದಲ್ಲಿ ಬರುವ ವಾಹನಗಳನ್ನು ನೋಡಲು ಮಿರರ್ ಉಪಯೋಗವಾಗುತ್ತದೆ ಮತ್ತು ರಸ್ತೆ ಮಧ್ಯೆ ವಾಹನಗಳನ್ನು ತಿರುಗಿಸುವಾಗ ಅಥವಾ ನಿಲ್ಲಿಸುವಾಗ ಯಾವುದೇ ಅಪಾಯ ಆಗದಂತೆ ಎಚ್ಚರ ವಹಿಸಲು ಇದು ಸಹಾಯಮಾಡುತ್ತದೆ. ಆದರೆ ಯುವಜನತೆ ಇದರ ಅರಿವಿಲ್ಲದೆ ಕನ್ನಡಿಗಳನ್ನು ತೆಗೆಸಿ ತಾವು ಅಪಘಾತಗಳಿಗೆ ಒಳಗಾಗುವುದಲ್ಲದೆ ಇತರರಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಹಿಂದೆ ಮುಂದೆ ನೋಡದೆ ಏಕಾಏಕಿ ರಸ್ತೆ ನಡುವೆ ವಾಹನಗಳನ್ನು ತಿರುಗಿಸುವ ಮೂಲಕ ಸರಿಯಾಗಿ ವಾಹನ ಓಡಿಸುವವರು ಅಪಘಾತಕ್ಕೆ ತುತ್ತಾಗುವುದಕ್ಕೆ ಕಾರಣವಾಗುತ್ತಾರೆ. ಇಂಥ ಸಾಹಸಗಳಿಗೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಎಲ್ಲರಿಗೂ ಅನುಕೂಲ.

| ಜಗದೀಶ್ ಬಳಂಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net