More

    ಸದ್ಗುರು ಸಮ್ಮುಖದಲ್ಲಿ ಶಿವರಾತ್ರಿ ಸಂಭ್ರಮ; ಆದಿಯೋಗಿ ಸನ್ನಿಧಿಯಲ್ಲಿ ಸಂಗೀತಮಯ ಆಚರಣೆ-ಜಾಗರಣೆ

    ಬೆಂಗಳೂರು: ಮಹಾಶಿವರಾತ್ರಿ ಅಂಗವಾಗಿ ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ಸನ್ನಿಧಿಯಲ್ಲಿ ಈಶ ಫೌಂಡೇಷನ್​ ವತಿಯಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೊನಾ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಸೋಂಕಿನ ಭಯದ ನಡುವೆಯೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸದ್ಗುರು ಅವರು ಎಲ್ಲರನ್ನೂ ಉತ್ಸಾಹಭರಿತವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಅದಕ್ಕೂ ಮುನ್ನ ಈಶ ಯೋಗ ಕೇಂದ್ರದಲ್ಲಿ ಲಿಂಗ ಭೈರವಿ ಮಹಾಯಾತ್ರೆ ಮತ್ತು ಪಂಚಭೂತ ಕ್ರಿಯಾ ನಡೆಯಿತು. ಈ ಕ್ರಿಯೆಯ ಮೂಲಕ ಭಕ್ತರ ದೇಹ ವ್ಯವಸ್ಥೆಯ ಪಂಚಭೂತಗಳನ್ನು ಶುದ್ಧೀಕರಿಸಲು ಸಹಕಾರಿಯಾಯಿತು. ಜತೆಗೆ ಸದ್ಗುರು ಅವರು ಸಸಿ ನೆಟ್ಟು, ಮಹಾಯೋಗ ಯಜ್ಞಕ್ಕೆ ಚಾಲನೆ ನೀಡಿದರು. ಆ ಮೂಲಕ ಜಗತ್ತಿನ ಪ್ರತಿಯೊಬ್ಬರಲ್ಲೂ ಒಂದು ಹನಿ ಆಧ್ಯಾತ್ಮಿಕತೆಯನ್ನು ತರುವ ಈಶದ ಧ್ಯೇಯವನ್ನು ಈಡೇರಿಸುವ ಪ್ರಯತ್ನ ಮಾಡಲಾಯಿತು.

    ಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈಶದ ದೇಸಿ ಸಂಗೀತ ವೃಂದ ಸೌಂಡ್ಸ್ ಆ್ಯಂಡ್ ಈಶ ಮತ್ತು ಈಶ ಸಂಸ್ಕೃತಿ ವಿದ್ಯಾರ್ಥಿಗಳು ವರ್ಣರಂಜಿತ ಕಾರ್ಯಕ್ರಮ ನಡೆಸಿಕೊಟ್ಟರು. ಜತೆಗೆ ಸದ್ಗುರುಗಳೊಂದಿಗೆ ಸತ್ಸಂಗ, ಪಠಣ, ಧ್ಯಾನ ಮಾಡಲಾಯಿತು. ಈ ಎಲ್ಲದರೊಂದಿಗೆ ಭಕ್ತರು ಆದಿಯೋಗಿಯ ದಿವ್ಯದರ್ಶನ ಪಡೆದರು.

    ತಮಿಳುನಾಡಿನ ಜನಪದ ಕಲಾವಿದರಾದ ತಪ್ಪು ಡ್ರಮ್ಮರ್‌ಗಳು, ಸಂದೀಪ್ ನಾರಾಯಣ್ ಅವರ ಭಾವಪೂರ್ಣ ಸಂಗೀತ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿತು. ಜತೆಗೆ ಕುತ್ಲೆ ಖಾನ್, ಕಬೀರ್ ಕೆಫೆ, ಮಂಗ್ಲಿ ಮತ್ತು ಆಂಥೋನಿದಾಸ್ ಅವರ ಗಾನ ಸುಧೆ ಎಲ್ಲರನ್ನೂ ಉಲ್ಲಸಿತವಾಗಿಸಿತು. ಈ ಕಾರ್ಯಕ್ರಮವು ಜಗತ್ತಿನಾದ್ಯಂತ ಭಾರತದ 11 ಭಾಷೆಗಳು ಸೇರಿ ಇಂಗ್ಲಿಷ್, ಪೋರ್ಚುಗೀಸ್, ಚೈನೀಸ್, ನೇಪಾಳಿ, ರಷ್ಯನ್, ಫ್ರೆಂಚ್ ಭಾಷೆಗಳ 100ಕ್ಕೂ ಹೆಚ್ಚಿನ ದೂರದರ್ಶನ ವಾಹಿನಿ, ವೆಬ್‌ಸೈಟ್‌ಗಳ ಮೂಲಕ ನೇರಪ್ರಸಾರ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts