ಛತ್ತೀಸ್‌ಗಢದಲ್ಲಿ ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ

dube
Published on

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಚುನಾವಣಾ ಪ್ರಚಾರದಲ್ಲಿದ್ದ ಬಿಜೆಪಿ ನಾಯಕನನ್ನು ಹತ್ಯೆ ಮಾಡಿದ್ದಾರೆ.

ನಾರಾಯಣಪುರ ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದ ರತನ್ ದುಬೆ ಹತ್ಯೆಗೀಡಾದವರು. ಮೊದಲ ಹಂತದ ಮತದಾನಕ್ಕೆ ಮೂರು ದಿನಗಳು ಮಾತ್ರ ಬಾಕಿ ಇರುವಾಗ ಮಾವೋವಾದಿಗಳು ದುಷ್ಕೃತ್ಯವೆಸಗಿದ್ದಾರೆ.

ರತನ್​ ದುಬೆ ಚುನಾವಣಾ ಪ್ರಚಾರದಲ್ಲಿದ್ದರು, ಕೌಶಲನರ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೆ ಅವರು ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದು ಕೌಶಲನೇರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹತ್ಯೆಯ ತನಿಖೆಗಾಗಿ ತಂಡವೊಂದು ಸ್ಥಳಕ್ಕೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net