ಅದ್ಭುತ ಜ್ಞಾಪಕ ಶಕ್ತಿಯ ಚಾರ್ವಿ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಡ್ಯದ ಪ್ರತಿಭೆ

Putani 2nd lead
Published on

| ರಾಗಿಮುದ್ದನಹಳ್ಳಿ ಮೋಹನ್ ಮಂಡ್ಯ

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿಗೆ ತಕ್ಕಂತೆ ಎರಡೂವರೆ ವರ್ಷಕ್ಕೇ ಅಸಾಧಾರಣ ಪ್ರತಿಭೆ ತೋರುವ ಈ ಪುಟ್ಟ ಮಗು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದೆ.

ಮಂಡ್ಯದ ಕಾವೇರಿ ನಗರದ ಅಭಿಷೇಕ್ ಮತ್ತು ಸಹನಾ ದಂಪತಿಯ ಮಗು ಚಾರ್ವಿ ಕನ್ನಡ, ಇಂಗ್ಲಿಷ್ ಪದ್ಯಗಳು, ವಿವಿಧ ತರಕಾರಿಗಳ ಹೆಸರು, ರಾಷ್ಟ್ರ ನಾಯಕರು, ನಾನಾ ದೇಶಗಳ ಹೆಸರು, ಕನ್ನಡದಲ್ಲಿ ಶ್ಲೋಕಗಳನ್ನು ಅಚ್ಚುಕಟ್ಟಾಗಿ ಹೇಳುವ ಮೂಲಕ ಸೈ ಎನಿಸಿಕೊಂಡಿದೆ. ಈ ಪಾಲಕರು ಆರಂಭದಲ್ಲಿ ಮಗುವಿಗೆ ಊಟ ಮಾಡಿಸುವಾಗ ಹೇಳಿಕೊಟ್ಟ ಕನ್ನಡ ಮತ್ತು ಇಂಗ್ಲಿಷ್ ಪದ್ಯಗಳನ್ನು ಮಗು ಮನನ ಮಾಡಿಕೊಂಡು ಅದನ್ನೇ ಅಭ್ಯಾಸವಾಗಿ ಮುಂದುವರಿಸಿದೆ. 25 ರಾಜ್ಯಗಳ ರಾಜಧಾನಿಗಳ ಹೆಸರು, ಇಂಗ್ಲಿಷ್- ಕನ್ನಡ ಅಂಕಿಗಳು, 6 ಶ್ಲೋಕಗಳು, ಜ್ಞಾನಪೀಠ ಪ್ರಶಸ್ತಿ ಪಡೆದ 8 ಸಾಹಿತಿಗಳ ಹೆಸರು, ಗ್ರಹಗಳು, 17 ಇಂಗ್ಲಿಷ್ ಮತ್ತು ಕನ್ನಡ ಪದ್ಯಗಳು, 13 ದೇಶಗಳ ಲಾಂಛನ ಗುರುತಿಸುವುದು, ಕಂಪ್ಯೂಟರ್​ನ 14 ಭಾಗಗಳನ್ನು ಗುರುತಿಸುವುದು, ದೇಹದ 14 ಭಾಗಗಳು ಮತ್ತು 25 ದೇಶಗಳ ಬಾವುಟದ ಹೆಸರು ಹೇಳುವುದು, 17 ತರಕಾರಿಗಳು, 32 ವಾಹನಗಳು, 39 ಪ್ರಾಣಿಗಳು, 19 ಹಣ್ಣುಗಳು, 16 ನಾಯಕರು, 16 ವಸ್ತುಗಳು, 14 ಪಕ್ಷಿಗಳ ಹೆಸರು ಹೇಳುವ ಮೂಲಕ ಚಾರ್ವಿ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾಳೆ. ಬಾಲ್ಯದಿಂದಲೂ ಒಳ್ಳೆಯ ಗ್ರಹಿಕಾ ಶಕ್ತಿ ಹೊಂದಿದ್ದಾಳೆ. ಪ್ರತಿದಿನವೂ ಹೊಸ ಹೊಸ ಮಾಹಿತಿಯನ್ನು ಪಾಲಕರು ಅವಳಿಗೆ ಹೇಳಿಕೊಡುತ್ತಿದ್ದಾರೆ. ಬಾಲ್ಯದಲ್ಲಿ ಅವಳ ಗ್ರಹಿಕಾ ಶಕ್ತಿ ಪಾಲಕರನ್ನು ಆಶ್ಚರ್ಯಗೊಳಿಸಿತ್ತು. ಏನಾದರೂ ಹೇಳಿದರೆ ಅದನ್ನು ಕುತೂಹಲದಿಂದ ಕೇಳá-ತ್ತಿದ್ದಳು. ಅವಳಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತಿದೆ. ಎಲ್ಲವನ್ನೂ ತಿಳಿದು ನೆನಪಿನಲ್ಲಿಟ್ಟುಕೊಳ್ಳುತ್ತಾಳೆ. ಯಾರಾದರೂ ಕೇಳಿದರೆ ಸಮರ್ಪಕವಾಗಿ ಉತ್ತರ ನೀಡುತ್ತಾಳೆ.

ಚಾರ್ವಿಗೆ ಒಂದು ವರ್ಷ ಇದ್ದಾಗ ವಿಜಯವಾಣಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಬಗ್ಗೆ ಓದಿದ್ದೆ. ಅದರಲ್ಲಿ ಒಂದು ಮಗುವಿನ ಸಾಧನೆ ಬಗ್ಗೆಯೂ ಬರೆದಿದ್ದರು. ಅದನ್ನೇ ಅನುಸರಿಸಿ ಚಾರ್ವಿಗೆ ಕನ್ನಡ ಪದ್ಯಗಳನ್ನು ಹೇಳಿ ಕೊಡಲು ಆರಂಭಿಸಿದೆ. ಅದನ್ನು ಆಕೆ ಸ್ವಲ್ಪವೂ ತಪ್ಪಿಲ್ಲದೆ ಹೇಳಲು ಆರಂಭಿಸಿದಾಗ ನನಗೇ ಆಶ್ಚರ್ಯವಾಯಿತು. ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್್ಸಲ್ಲಿ ಅವಳ ಹೆಸರು ದಾಖಲಾಗಿರುವುದು ನಮಗೆ ಹೆಮ್ಮೆ ಎನಿಸಿದೆ.

| ಸಹನಾ ಚಾರ್ವಿಯ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net