

ಉತ್ತರ: ಒಬ್ಬ ವ್ಯಕ್ತಿ ತನ್ನದೇ ಆದ ಆಸ್ತಿಯ ಬಗ್ಗೆ ಎಷ್ಟು ಬಾರಿಯಾದರೂ ವಿಲ್ ಮಾಡಬಹುದು. ಆ ವ್ಯಕ್ತಿ ಮಾಡಿದ ಕೊನೆಯ ವಿಲ್ ಮಾತ್ರ ಊರ್ಜಿತವಾಗುತ್ತದೆ. ಒಮ್ಮೆ ಮಾಡಿರುವ ವಿಲ್ ನ್ನು ಬದಲಾಯಿಸಬಹುದು ಅಥವಾ ರದ್ದು ಮಾಡಬಹುದು. ರದ್ದು ಮಾಡಿ, ಮತ್ತೊಂದು ವಿಲ್ ಸಹ ಬರೆಸ ಬಹುದು. ವಿಲ್ ಬರೆದು, ರದ್ದು ಮಾಡಿ, ಇನ್ನೊಂದು ವಿಲ್ ಮಾಡದೇ ಸತ್ತರೆ, ಆ ವ್ಯಕ್ತಿಯ ಆಸ್ತಿಗಳು ಆ ವ್ಯಕ್ತಿಯ ಎಲ್ಲ ವಾರಸುದಾರರಿಗೆ ಕಾನೂನಿನ ಪ್ರಕಾರ ಹೋಗುತ್ತದೆ. ಒಂದು ವೇಳೆ ಮತ್ತೊಂದು ವಿಲ್ ಮಾಡಿದ್ದರೆ, ಹೊಸ ವಿಲ್ನಲ್ಲಿ ಯಾರಿಗೆ ಆಸ್ತಿಗಳು ಹೋಗಬೇಕೆಂದು ಬರೆಯಿಸಿರುತ್ತಾರೋ/ಬರೆದಿರುತ್ತಾರೋ ಅವರಿಗೇ ಹೋಗುತ್ತದೆ.
ವಿಲ್ ಮಾಡಿದ ಮೇಲೂ, ವಿಲ್ ಪತ್ರದಲ್ಲಿ ನಮೂದಿಸಿರುವ ಆಸ್ತಿಗಳಲ್ಲಿ ಎಲ್ಲವನ್ನೂ ಅಥವಾ ಕೆಲವನ್ನು ಮಾರುವ ಹಕ್ಕೂ ಸಹ ವಿಲ್ ಮಾಡಿರುವವರಿಗೆ ಇರುತ್ತದೆ. ಹೀಗಾಗಿ ನಿಮ್ಮ ತಾಯಿ ಹೆದರಬೇಕಾಗಿಲ್ಲ. ತಾನು ಈ ಹಿಂದೆ ನಿಮ್ಮ ತಮ್ಮನಿಗೆ ಬರೆಸಿರುವ ವಿಲ್ ಕ್ವಾನ್ಸಲ್/ರದ್ದು ಮಾಡಿದ್ದೇನೆಂದು ಮತ್ತೊಂದು ಹೊಸ ವಿಲ್ನಲ್ಲಿ ಬರೆಯಿಸಿದರೆ ಒಳ್ಳೆಯದು. ಹಾಗೂ ತನ್ನ ಆಸ್ತಿಗಳಲ್ಲಿ ಯಾವುದನ್ನು ಬೇಕಾದರೂ ನಿಮ್ಮ ತಾಯಿ ಮಾರಬಹುದು. ನಿಮ್ಮ ತಮ್ಮ ಹಿಂದೆ ತನಗೆ ನಿಮ್ಮ ತಾಯಿ ವಿಲ್ ಮಾಡಿದ್ದರು ಎನ್ನುವ ಕಾರಣದಿಂದ , ನಿಮ್ಮ ತಾಯಿಯ ವಿರುದ್ಧ ಅವರು ಬದುಕಿರುವಾಗಲೇ ಕೋರ್ಟಿಗೆ ಹೋಗಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ನಮ್ಮ ತಂಗಿಗೆ ಎರಡು ಗಂಡು ಮಕ್ಕಳು. ಒಬ್ಬ ಮಗನನ್ನು ನಮ್ಮ ಇನ್ನೊಬ್ಬ ಅಕ್ಕ ಸಣ್ಣ ಮಗುವಿದ್ದಾಗಲೇ ಕರೆದುಕೊಂಡು ಅವರ ಮಗನಂತೆಯೇ ಸಾಕಿದ್ದರು. ನಮ್ಮ ಆ ಅಕ್ಕನಿಗೆ ಮೂವರು ಹೆನ್ಣು ಮಕ್ಕಳು, ಈಗ ನಮ್ಮ ಅಕ್ಕ ಭಾವ ಇಬ್ಬರೂ ತೀರಿಕೊಂಡಿದ್ದಾರೆ. ಅವರ ಹೆಣ್ಣು ಮಕ್ಕಳು ಸಾಕಿದ ಮಗನಿಗೆ, ( ನಮ್ಮ ತಂಗಿಯ ಮಗನಿಗೆ) ಆಸ್ತಿಯಲ್ಲಿ ಯಾವ ಭಾಗವೂ ಕೊಡುವುದಿಲ್ಲ. ನಿಮ್ಮ ಅಪ್ಪನ ಆಸ್ತಿಯಲ್ಲಿ ಭಾಗ ಕೇಳಿಕೋ ಎನ್ನುತ್ತಿದ್ದಾರೆ. ಎಲ್ಲ ದಾಖಲೆಗಳಲ್ಲಿಯೂ, ಆ ಹುಡುಗನಿಗೆ ಅವರ ಸ್ವಂತ ತಂದೆಯ ಹೆಸರೇ ಇದೆ , ಸಾಕು ತಂದೆಯ ಹೆಸರು ಇಲ್ಲ ಆದ್ದರಿಂದ ಭಾಗ ಸಿಗುವುದಿಲ್ಲ ಏನು ಬೇಕಾದರೂ ಮಾಡಿಕೋ ಎನ್ನುತ್ತಿದ್ದಾರೆ. ಇದು ಅನ್ಯಾಯವಲ್ಲವೇ? ಈ ಸಾಕು ಮಗ ಭಾಗಕ್ಕೆ ದಾವೆ ಹಾಕಬಹುದೇ?
ಉತ್ತರ: ನ್ಯಾಯ ಅನ್ಯಾಯವನ್ನು ನ್ಯಾಯಾಲಯಗಳು ಕಾನೂನಿನ ಚೌಕಟ್ಟಿನಲ್ಲಿ ನಿರ್ಧರಿಸುತ್ತದೆ. ನಿಮ್ಮ ಒಬ್ಬ ಸಹೋದರಿಯ ಮಗನನ್ನು ಮತ್ತೊಬ್ಬ ಸಹೋದರಿ ಮತ್ತು ಅವರ ಪತಿ, ದತ್ತಿಗೆ ಸ್ವೀಕಾರ ಮಾಡಿದ್ದರೆ, ಆ ನಂತರ, ಎಲ್ಲ ದಾಖಲೆಗಳಲ್ಲಿಯೂ ತಂದೆ ತಾಯಿ ಎಂದು ದತ್ತು ತೆಗೆದುಕೊಂಡವರ ಹೆಸರು ಇದ್ದಿದ್ದರೆ, ಆಗ ಆ ಮಗುವಿಗೆ ದತ್ತು ತೆಗೆದುಕೊಂಡವರ ಆಸ್ತಿಯಲ್ಲಿ ಪಾಲು ಸಿಗುತ್ತಿತ್ತು. ಸಾಕಿದ ತಂದೆ ತಾಯಿಯರ ಆಸ್ತಿಯಲ್ಲಿ ಸಾಕು ಮಗ ಅಥವಾ ಮಗಳಿಗೆ ಹಕ್ಕು ಬರುವುದಿಲ್ಲ. ರಾಜಿ ಮಾತಿನ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವುದು ಒಳ್ಳೆಯದು. ಸಾಕು ಮಗನ ದಾವೆ ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ.
(ಲೇಖಕಿ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಹಿರಿಯ ಮಧ್ಯಸ್ಥಿಕೆಗಾರರು)