

ಕರೊನಾ ಕರ್ಫ್ಯೂ ಜಾರಿಗೆ ತರಲು ಪೊಲೀಸರು ಕೆಲವೆಡೆ ಲಾಠಿ ಪ್ರಯೋಗಿಸುತ್ತಿದ್ದಾರೆ. ಜನ ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಬಾರದು ಎಂಬುದೇನೋ ನಿಜ. ಆದರೆ ಯಾವುದೇ ಬಲವಾದ ಕಾರಣ ಇಲ್ಲದೆಯೇ ಇಂಥ ಹೊತ್ತಲ್ಲಿ ಜನ ಸುಮ್ಮನೆ ಹೊರಗೆ ಬರವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಹಾಗೆ ಸುಖಾಸುಮ್ಮನೆ ಬಂದರೆ ಕ್ರಮ ಜರುಗಿಸಲಿ. ದಿಢೀರ್ ದೀರ್ಘ ಕರ್ಫ್ಯೂ ಕಾರಣಕ್ಕಾಗಿ ತಮ್ಮ ಗ್ರಾಮಗಳಿಗೆ ಹೊರಟವರಿಗೆ ಹಿಂಸಿಸಿದ್ದು ಸರಿಯಲ್ಲ. ಬೈಕ್ ಮೇಲೆ ಹೋಗುವವರಿಗೆ ಆಮಾನುಷವಾಗಿ ಥಳಿಸುವುದು ವಿವೇಕ ಅಲ್ಲ. ಓರ್ವ ಬೈಕ್ ಸವಾರ ಹೆಂಡತಿ, ಸಣ್ಣ ಮಗಳೊಂದಿಗೆ ಹೊರಟಾಗ ಬೈಕಿನಿಂದ ಇಳಿಸಿ ಅವರ ಮುಂದೆಯೇ ಥಳಿಸಿದ್ದು ಅಮಾನವೀಯ. ದೊಂಬಿ, ಗಲಭೆಗಳ ಕಾಲಕ್ಕೆ ಲಾಠಿ ಪ್ರಯೋಗ ಸರಿ. ಇಂತಹ ಸಂದರ್ಭದಲ್ಲಿ ಹೆಚ್ಚು ಸಂಯಮ ಇರಲಿ. ಜನರಲ್ಲಿ ಕರೊನಾ ಅರಿವು ಮೂಡಿದೆ.