

| ಡಾ. ಶ್ರೀಲತಾ ಪದ್ಯಾಣ ಬೆಂಗಳೂರು
ಗರ್ಭಿಣಿಯರು ತಿನ್ನಬಹುದಾ?
ಈ ಹಣ್ಣಿನಲ್ಲಿ ’ಪಪ್ಪಾಯಿನ್’ ಎಂಬ ಒಂದು ಅಂಶವಿದೆ. ಇದು ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಗುವಿನ ಜನನದಲ್ಲಿ ನ್ಯೂನತೆ ಕಾಣುವ ಸಾಧ್ಯತೆಯಿರುತ್ತದೆ. ಆದ್ದರಿಂದ ಗರ್ಭಿಣಿಯರು ಎಚ್ಚರವಹಿಸಲೇಬೇಕು. ವೈದ್ಯರ ಸೂಚನೆಯಂತೆ ತೆಗೆದುಕೊಳ್ಳಬಹುದು. ಆದಷ್ಟು ಗರ್ಭಾವಸ್ಥೆ ಸಮಯದಲ್ಲಿ ತಿನ್ನದಿದ್ದರೆ ಒಳ್ಳೆಯದು.
ಮುಟ್ಟಾದಾಗ ತಿಂದರೆ ಏನಾಗುತ್ತೆ?
ಪಪ್ಪಾಯ ಹಣ್ಣಿನ ಸೇವನೆಯು ಮುಟ್ಟಿನ ಸಮಸ್ಯೆಯನ್ನು ಹತೋಟಿಯಲ್ಲಿಡುತ್ತದೆ. ಆದರೆ ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳದಿರುವುದೇ ಒಳ್ಳೆಯದು, ಇದು ಬಿಸಿ ಆಹಾರವಾಗಿರುವುದರಿಂದ ದೇಹದಲ್ಲಿ ಶಾಖ ಉತ್ಪತ್ತಿ ಮಾಡುವುದರಿಂದ ರಕ್ತಸ್ರಾವ ಜಾಸ್ತಿಯಾಗುವ ಸಾಧ್ಯತೆಯಿರುತ್ತದೆ.
ಸಲಹೆ ಪಡೆಯುವುದು ಉತ್ತಮ
ಅನೇಕ ಲಾಭಾಂಶ ಹೊಂದಿರುವ ಪಪ್ಪಾಯ ಸೇವನೆ ದೇಹಕ್ಕೆ ಹಿತಕಾರಿಯಾಗಿದ್ದರೂ ಅತಿಯಾದ ಸೇವನೆಯು ಅಡ್ಡ ಪರಿಣಾಮ ಬೀರಬಹುದು. ದೇಹದ ಪ್ರಕೃತಿಗನುಗುಣವಾಗಿ ಸೇವಿಸಬೇಕು. ಅನುಮಾನವಿದ್ದಲ್ಲಿ ಹಣ್ಣನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
· ನಿಯಮಿತ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ
· ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಇದರಿಂದ ತೂಕ ಹೆಚ್ಚುವುದು ತಪ್ಪುತ್ತದೆ
· ವಿಟಮಿನ್ ಸಿ ಅಂಶವಿದ್ದು ಕರುಳಿನ ಹುಳಗಳನ್ನು ನಾಶಮಾಡುತ್ತದೆ
· ವಿಟಮಿನ್ ಎ, ಇ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆಂಟಿ ಕ್ಯಾನ್ಸರ್ ಗುಣ ಹೊಂದಿದೆ
· ಚರ್ಮದ ಆರೈಕೆಗೆ ಉತ್ತಮವಾಗಿದೆ
· ಇದರಲ್ಲಿರುವ ಚಿಮೋಪಪೈನ್ ಅಂಶ ಅಸ್ಥಿ ಸಂಧಿವಾತ ಕಡಿಮೆ ಮಾಡುತ್ತದೆ
· ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇದರ ಎಲೆಯ ರಸ ಸೇವನೆಯಿಂದ ಡೆಂಘ ನಿಯಂತ್ರಿಸಬಹುದು
· ಬೀಟಾ ಕೆರೋಟಿನ್ ಇರುವುದರಿಂದ ಕಣ್ಣು ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು