

ಚೀನಾದ ವುಹಾನ್ನಲ್ಲಿ ಉದ್ಭವಿಸಿದ ಈ ವೈರಸ್ ಅಲ್ಲಿಂದ ಒಂದು ಸಾವಿರ ಕಿಲೋಮೀಟರ್ಗಿಂತಲೂ ಕಡಿಮೆ ದೂರದ ಬೀಜಿಂಗ್ನ್ನು ಹೆಚ್ಚು ಬಾಧಿಸಲಿಲ್ಲ ಎನ್ನುವುದು ಆಶ್ಚರ್ಯ. ಚೀನಾದ ಸುತ್ತಮುತ್ತಲಿನ ಅಥವಾ ವುಹಾನ್ಗೆ ಸಮೀಪದ ಅಷ್ಟೇನು ಮುಂದುವರಿಯದ ದೇಶಗಳಾದ ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಮ್ಲ್ಲಿ ಕರೊನಾ ಹಾವಳಿ ಅಷ್ಟೇನೂ ಇಲ್ಲ.
ಜಗತ್ತಿನ ಮುಂಚೂಣಿ ನಾಯಕರಲ್ಲೊಬ್ಬರಾದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ರನ್ನು ಕರೊನಾ ಸೋಂಕು ಆವರಿಸಿದಾಗ ಎಲ್ಲರೂ ಬೆಚ್ಚಿಬಿದ್ದರು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ (ಹೆಲ್ತ್ ಸೆಕ್ರೆಟರಿ) ಮ್ಯಾಟ್ ಹ್ಯಾಂಕೋಕ್ ಕೂಡ ತಮಗೆ ಕರೊನಾ ಸೋಂಕು ಇರುವುದನ್ನು ದೃಢಪಡಿಸಿದರು. ನಂತರ ಇಂಗ್ಲೆಂಡಿನ ಚೀಫ್ ಮೆಡಿಕಲ್ ಆಫೀಸರ್ ಕ್ರಿಸ್ ವಿಟಿ ಕೂಡ ತನಗೆ ಕರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹೇಳಿಕೊಂಡರು. ಈ ಸಾಂಕ್ರಾಮಿಕ ರೋಗದ ಬಗ್ಗೆ ಅಧ್ಯಯನ ನಡೆಸುತ್ತಿರುವ ಇಂಪೆರಿಯಲ್ ಕಾಲೇಜಿನ ತಜ್ಞರಾದ ನೀಲ್ ಫರ್ಗ್ಯುಸನ್ಗೆ ಕರೊನಾ ಪಾಸಿಟಿವ್ ಎಂದು ಖಾತ್ರಿಯಾದಾಗ, ಯುರೋಪ್ನಲ್ಲಿ ತಲ್ಲಣ ಸೃಷ್ಟಿಯಾಯಿತು.
ಈ ನಡುವೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅನಾರೋಗ್ಯ ಪೀಡಿತರಾಗಿದ್ದರೆ ಅವರ ಪ್ರೇಯಸಿ 31 ವರ್ಷ ಪ್ರಾಯದ ಕ್ಯಾರೀ ಸಿಮೋಂಡ್ಸ್ ಗರ್ಭಿಣಿಯಾಗಿರುವಳು. ಈ ಬೇಸಿಗೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದು, ಸದ್ಯ ತನ್ನನ್ನು ತಾನೇ ಕ್ವಾರಂಟೈನ್ಗೆ ಒಳಪಡಿಸಿಕೊಂಡು, ಒಂಟಿಯಾಗಿದ್ದಾರೆ ಎಂದು ‘ದ ಟೆಲಿಗ್ರಾಫ್’ ವರದಿ ಮಾಡಿದೆ.
ಕರೊನಾ ಬ್ರಿಟನ್ಗೆ ಅಪ್ಪಳಿಸುವ ಕೆಲ ದಿನಗಳ ಹಿಂದೆ ಅಲ್ಲಿನ ಹಣಕಾಸು ಸಚಿವರಾಗಿದ್ದ ಸಜಿದ್ ಜಾವೆದ್ ಅಚಾನಕ್ ಆಗಿ ರಾಜೀನಾಮೆ ನೀಡಿದರು. ಆ ಸ್ಥಾನವನ್ನು ತುಂಬಿದ ಭಾರತೀಯ ಸಂಜಾತ, ಇನ್ಪೋಸಿಸ್ನ ಸಂಸ್ಥಾಪಕ, ಕನ್ನಡಿಗ ನಾರಾಯಣಮೂರ್ತಿಯವರ ಅಳಿಯ, ರಿಷಿ ಸುನಾಕ್ ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಎಲ್ಲೆಡೆ ಇತ್ತು. ಅವರು ಹಣಕಾಸು ಸಚಿವರಾದ ಬೆನ್ನಲ್ಲೇ ಕರೊನಾ ಯುರೋಪ್ದಾದ್ಯಂತ ರುದ್ರನರ್ತನ ಮಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಋಷಿಯವರ ಮುಂದೆ ಸಾಲು ಸಾಲು ಸವಾಲುಗಳಿವೆ. ಸ್ವತಃ ಪ್ರಧಾನಮಂತ್ರಿಯೇ ಕರೊನಾ ಸೋಂಕು ಪೀಡಿತರಾಗಿ ವಿಶ್ರಾಂತಿಯಲ್ಲಿದ್ದಾರೆ. ಕರೊನಾದಿಂದ ಅಲ್ಲಿನ ಪೌಂಡ್ ನೆಲ ಕಚ್ಚುತ್ತಿದೆ. ಕಂಪನಿಗಳು ಬಾಗಿಲು ಹಾಕುತ್ತಿವೆ. ಇಂತಹ ಸನ್ನಿವೇಶದಲ್ಲಿ ಜವಾಬ್ದಾರಿಯುತ ಹಣಕಾಸು ಸಚಿವ ಸ್ಥಾನವನ್ನು ರಿಷಿ ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳಿವೆ. ಆದರೆ, ಕರೊನಾ ಬ್ರಿಟನ್ಗೆ ಆಗಷ್ಟೇ ಕಾಲಿಟ್ಟ ಸಮಯದಲ್ಲಿ ‘10, ಡೌನಿಂಗ್ ಸ್ಟ್ರೀಟ್’ ಕಚೇರಿಯಿಂದ ಇವರು ಮಂಡಿಸಿದ್ದ ಬಜೆಟ್ ಟೀಕೆಗೆ ಒಳಗಾಗಿತ್ತು. ಕರೊನಾ ನಿರ್ವಹಣೆಗೆ ವ್ಯವಸ್ಥಿತ ಯೋಜನೆಯನ್ನು ಮತ್ತು ಹಣಕಾಸಿನ ಹಂಚಿಕೆಯನ್ನು ಬಜೆಟ್ನಲ್ಲಿ ನಮೂದಿಸಲಿಲ್ಲ ಎನ್ನುವುದು ಪ್ರತಿಪಕ್ಷಗಳ ಆಕ್ಷೇಪವಾಗಿತ್ತು. ಅಷ್ಟರಲ್ಲೇ, ಯುರೋಪ್ ದೇಶಗಳ ಒಕ್ಕೂಟವು ಕರೊನಾಕ್ಕೆ ತುತ್ತಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 13ರಂದು ಘೊಷಿಸಿತು.
ಬ್ರಿಟನ್ಗಿಂತಲೂ ಹೆಚ್ಚು ಯುರೋಪ್ ದೇಶಗಳಾದ ಇಟಲಿ, ಸ್ಪೇನ್, ಜರ್ಮನಿಗಳಲ್ಲಿ ಕರೊನಾ ಮರಣಮೃದಂಗ ಬಾರಿಸುತ್ತಿದೆ. ಈ ವರ್ಷದ ಜನವರಿ 31ರಂದು ಯುರೋಪಿಯನ್ ಯೂನಿಯನ್ನಿಂದ ಹೊರಬಂದಿರುವ ಯುನೈಟೆಡ್ ಕಿಂಗ್ಡಮ್ ಜತೆಗೆ ಫ್ರಾನ್ಸ್, ಸ್ವಿಜರ್ಲೆಂಡ್, ಬೆಲ್ಜಿಯಂ, ಆಸ್ಟ್ರಿಯಾ, ಟರ್ಕಿ, ಪೋರ್ಚುಗಲ್ಗಳಲ್ಲಿ ಕರೊನಾ ಹೆಚ್ಚಿನ ಹಾನಿ ಮಾಡುತ್ತಿದೆ. ಇನ್ನು ನಾರ್ವೆ, ಸ್ವೀಡನ್, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್, ಐರ್ಲ್ಯಾಂಡ್, ಪೋಲೆಂಡ್, ರೊಮೇನಿಯಾ, ರಷ್ಯಾಗಳಲ್ಲಿ ಕರೊನಾ ವೈರಸ್ ಪ್ರಕರಣಗಳು ಹೆಚ್ಚು ಕಡಿಮೆ ಭಾರತದಲ್ಲಿ ಇರುವಷ್ಟಿವೆ.
ಲಕ್ಸನ್ಬರ್ಗ್, ಫಿನ್ಲ್ಯಾಂಡ್, ಸೆರ್ಬಿಯಾ ದೇಶಗಳಲ್ಲಿ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ರೀಸ್, ಐಸ್ಲ್ಯಾಂಡ್, ಉಕ್ರೇನ್, ಕ್ರೊಷಿಯಾ, ಇಸ್ಟೋನಿಯಾ, ಸ್ಲೋವೇನಿಯಾ ದೇಶಗಳಲ್ಲಿ ಸಾವಿರಾರು ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. ಉಳಿದಂತೆ ಮಾಲ್ಡೋವಾ, ಹಂಗೇರಿ, ಬೆಲರಸ್, ಬೋಸ್ನಿಯಾ -ಹರ್ಜೆ ಗೋವೆನಾ, ನಾರ್ತ್ ಮಸಿಡೋನಿಯಾ, ಬಲ್ಗೇರಿಯಾ, ಲಾತ್ವಿಯಾ, ಸ್ಲೋವೇಕಿಯಾ ದೇಶಗಳಲ್ಲಿಯೂ ಸೋಂಕು ವೇಗವಾಗಿ ಹಬ್ಬುತ್ತಿದೆ.
ಯುನೈಟೆಡ್ ಕಿಂಗ್ಡಂನಲ್ಲೇ ವರ್ಲ್ಡ್ಕ್ಲಾಸ್ ಎನ್ನಬಹುದಾದ ಸುಸಜ್ಜಿತ 4 ಸಾವಿರ ಬೆಡ್ಗಳ ನೈಟಿಂಗೇಲ್ ಆಸ್ಪತ್ರೆ ಇದೆ. ಇದರೊಂದಿಗೆ ಬರ್ವಿುಂಗ್ ಹ್ಯಾಮ್ ಮ್ಯಾಂಚೆಸ್ಟರ್ ಮೊದಲಾದ ಕಡೆ 3,000, 2,000 ಹೀಗೆ ಸಾವಿರಾರು ಹಾಸಿಗೆಗಳ ಆಧುನಿಕ ಗುಣಮಟ್ಟದ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಆಸ್ಪತ್ರೆಗಳಿವೆ. ಅತ್ಯುತ್ತಮ ವೈದ್ಯಕೀಯ ಸವಲತ್ತು ಹೊಂದಿದ್ದರೂ ಈ ದೇಶ ಕರೊನಾದಿಂದಾಗಿ ನಲುಗಿ ಹೋಗಿದೆ. ಹೀಗಿರುವಾಗ, ರಿಷಿ ಸುನಾಕ್
ಎನ್ಎಚ್ಎಸ್ (NHS) ಬೆನ್ನಿಗೆ ನಿಂತಿದ್ದಾರೆ. ಹೆಚ್ಚುವರಿ ಹಣಕಾಸಿನ ನೆರವನ್ನು ಘೊಷಿಸಿದ್ದು, ಕರೊನಾ ಪೀಡಿತರನ್ನು ಪರೀಕ್ಷಿಸುವ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುವ ಮಾಸ್ಕ್, ಗ್ಲೌಸ್, ಪಿಪಿಇ ಮತ್ತು ಔಷಧಗಳನ್ನು ಹೊಂದಿಸಿಕೊಳ್ಳಲು ಇನ್ನಿಲ್ಲದ ರೀತಿಯಲ್ಲಿ ಹಣಕಾಸು ನೆರವಿನ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ಬ್ರಿಟಿಷ್ ರಾಷ್ಟ್ರಗಳಲ್ಲಿ ಒಟ್ಟಾರೆ ಜನಸಂಖ್ಯೆಯ 1/3ರಷ್ಟು ಜನ 70 ವರ್ಷ ಮೇಲ್ಪಟ್ಟವರು. ಕರೊನಾ ಸೋಂಕು ಈ ವಯಸ್ಸಿನ ಯುರೋಪಿಯನ್ನರ ಮೇಲೆ ದಾಳಿ ಮಾಡಿ, ಅವರ ಶ್ವಾಸಕೋಶದ ಕ್ಷಮತೆಯನ್ನು ಕ್ಷೀಣಿಸಲು ಆರಂಭಿಸಿತು. ಹೆಚ್ಚಿನ ಯುರೋಪಿಯನ್ನರು ದೊಡ್ಡ ಕುಟುಂಬಗಳಲ್ಲಿ ಇರುವವರು. ಮನೆಯಲ್ಲಿ ಅಜ್ಜ, ಅಜ್ಜಿ ಸಮೇತ ಹೆತ್ತವರೊಂದಿಗೆ ಇದ್ದರೂ, ನಗರಗಳಲ್ಲಿ ಉದ್ಯೋಗದಲ್ಲಿ ಇರುತ್ತಾರೆ ಮತ್ತು ದಿನಾ ಓಡಾಟಕ್ಕೆ ಮೆಟ್ರೋ ಮುಂತಾದ ಸಾರ್ವಜನಿಕ ಸಂಪರ್ಕ ಸೇವೆ ಬಳಸುವುದು ವಾಡಿಕೆ. ಆ ಕಾರಣದಿಂದಲೇ ಯುರೋಪ್ ದೇಶದಲ್ಲಿ ಸೋಂಕು ವಿಪರೀತವಾಗಿ ಹರಡಿದೆ ಎಂದು ಕರೊನಾ ವೈರಸ್ ಹರಡುವಿಕೆ ಬಗ್ಗೆ ಅಧ್ಯಯನ ನಡೆಸುತ್ತಿರುವ ‘ಡೆಮೊಗ್ರಾಫಿಕ್ ಸೈನ್ಸ್’ನ ವರದಿ ತಿಳಿಸಿದೆ. ಆದ್ದರಿಂದ ಪ್ರಸ್ತುತ ಲಾಕ್ಡೌನ್ ಮಾದರಿ ಅನುಸರಿಸುತ್ತಿರುವುದರಿಂದ, ಮನೆಯಲ್ಲಿ ಉಳಿದುಕೊಳ್ಳುವ ಉದ್ಯೋಗಸ್ಥರಿಗೆ ಅವರ ಸಂಬಳದ ಶೇಕಡ 80 ಭಾಗವನ್ನು ಸರ್ಕಾರವೇ ನೀಡಲಿದೆ ಎಂದು ರಿಷಿ ಘೊಷಿಸಿದ್ದಾರೆ. ಇದೇ ಮಾದರಿಯನ್ನು ಯುರೋಪಿನ ಇತರ ರಾಷ್ಟ್ರಗಳೂ ಅನುಸರಿಸುತ್ತಿವೆ. ‘ಇದು ಯುರೋಪಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆಗುತ್ತಿರುವ ಬೆಳವಣಿಗೆ’ ಎಂದು ರಿಷಿ ಹೇಳಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ, ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕ ಸೇವೆಗಳಿಗೆ ಅಗತ್ಯ ನೆರವನ್ನು ಕೂಡಲೇ ಬಿಡುಗಡೆ ಮಾಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಆದರೆ ಚೀನಾದ ವುಹಾನ್ನಲ್ಲಿ ಉದ್ಭವಿಸಿದ ಈ ವೈರಸ್ ಅಲ್ಲಿಂದ 1 ಸಾವಿರ ಕಿಲೋಮೀಟರ್ಗಿಂತಲೂ ಕಡಿಮೆ ದೂರದ ಬೀಜಿಂಗ್ನ್ನು ಹೆಚ್ಚು ಬಾಧಿಸಲಿಲ್ಲ ಎನ್ನುವುದು ಆಶ್ಚರ್ಯ. ಚೀನಾದ ಸುತ್ತಮುತ್ತಲಿನ ಅಥವಾ ವುಹಾನ್ಗೆ ಸಮೀಪದ ಅಷ್ಟೇನು ಮುಂದುವರಿಯದ ದೇಶಗಳಾದ ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಮ್ಳನ್ನು ಹೆಚ್ಚು ಬಾಧಿಸದ ಕರೊನಾ ವುಹಾನ್ನಿಂದ ಸಹಸ್ರಾರು ಮೈಲಿಗಳಷ್ಟು ದೂರದಲ್ಲಿ ಇರುವ, ಅತ್ಯಂತ ಮುಂದುವರಿದ ಐರೋಪ್ಯ ಮತ್ತು ಅಮೆರಿಕದ ದೇಶಗಳನ್ನು ಇನ್ನಿಲ್ಲದಂತೆ ಬಾಧಿಸುತ್ತಿರುವುದರಿಂದ ಚೀನಾ ಬಗ್ಗೆ ಹಲವು ಸಂಶಯಗಳು ಹುಟ್ಟಿರುವುದಂತೂ ಸುಳ್ಳಲ್ಲ.
ಈ ಕಾರಣದಿಂದಲೇ ಬ್ರಿಟನ್ನಲ್ಲಿ ಜಿಡಿಪಿ ತೀವ್ರ ಗತಿಯಲ್ಲಿ ಇಳಿಕೆಯಾಗುತ್ತಿದೆ. ವೈರಸ್ನ ಹರಡುವಿಕೆ ತೀವ್ರ ರೀತಿಯಾಗಿ ಮುಂದುವರಿಯುತ್ತಿದ್ದಂತೆ, ಫ್ರಾನ್ಸ್ನಲ್ಲಿ ಇರುವ ಯುರೋಪಿನ 36 ರಾಷ್ಟ್ರ/ ರಾಜ್ಯಗಳ ನಡುವಿನ ಇಂಟರ್ ಗವರ್ನಮೆಂಟಲ್ ಇಕಾನಮಿಕ್ ಆರ್ಗನೈಸೇಷನ್ ಆಗಿರುವ ಣಉಇಈ ಹಣಕಾಸಿಗೆ ಸಂಬಂಧಪಟ್ಟು ನೀಡುತ್ತಿರುವ ಮುನ್ನೆಚ್ಚರಿಕೆ ಮತ್ತು ನಿರ್ವಹಣಾ ಕ್ರಮಗಳನ್ನು ರಿಷಿ ಕೂಲಂಕಷವಾಗಿ ಮತ್ತು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ಅನುಗುಣವಾಗಿ ಕಾರ್ಯಸೂಚಿಯನ್ನು ಹೆಣೆಯುತ್ತಿದ್ದಾರೆ.
ಈ ಕ್ಲಿಷ್ಟ ಸಮಯವನ್ನು ಯುವ ಹಣಕಾಸು ಸಚಿವರಾಗಿ ರಿಷಿ ಸವಾಲಾಗಿಯೇ ಸ್ವೀಕರಿಸಿದ್ದಾರೆ. ಕರೊನಾ ಇಡೀ ಯುರೋಪನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಮಯದಲ್ಲಿ, ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ, ಸರ್ಕಾರದ ಆದೇಶವನ್ನು ವ್ಯವಸ್ಥಿತವಾಗಿ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳ್ಳುವಂತೆ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸುವ ದೇಶದ ಕೋಬ್ರಾ ಎಮರ್ಜೆನ್ಸಿ ಕಮಿಟಿಯ ಸಭೆಯನ್ನು ಕರೆದು ಅವರು ವಿಶೇಷವಾದ ಕಾರ್ಯತಂತ್ರ ಹೆಣೆದಿದ್ದಾರೆ. ಆಡುಭಾಷೆಯಲ್ಲಿ ‘ಕೋಬ್ರಾ’ ಎಂದು ಕರೆಯುವ ಇದು ಬ್ರಿಟನ್ನ ಅತ್ಯಂತ ಪ್ರಮುಖ ಸರ್ಕಾರಿ ಸಂಸ್ಥೆ ‘ಕ್ಯಾಬಿನೆಟ್ ಆಫೀಸ್ ಬ್ರೀಫಿಂಗ್ ರೂಮ್. 1970ರಲ್ಲಿ ಆರಂಭಗೊಂಡ ಕೋಬ್ರಾ, 1980ರಿಂದ ಮೊದಲ್ಗೊಂಡು ಈವರೆಗೆ ನಾಲ್ಕು ಬಾರಿ ಕ್ಲಿಷ್ಟ ಮತ್ತು ಭಯಾನಕ ಸನ್ನಿವೇಶಗಳಲ್ಲಿ ಬ್ರಿಟನ್ನಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಈಗ ಕರೊನಾದಿಂದ ಯುರೋಪಿನಲ್ಲಿ ಆಗುತ್ತಿರುವ ಆರ್ಥಿಕ ಮತ್ತು ಜೀವಹಾನಿಯನ್ನು ನಿಭಾಯಿಸಲು ಪ್ರಧಾನಿ ಬೋರಿಸ್ ಅನುಪಸ್ಥಿತಿಯಲ್ಲಿ, ಸಚಿವ ರಿಷಿ ಮಾರ್ಗದರ್ಶನದೊಂದಿಗೆ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.
(ಲೇಖಕರು ರಂಗಕರ್ವಿು ಮತ್ತು ಚಲನಚಿತ್ರ ನಿರ್ದೇಶಕ)
ಪೂರಕ ಮಾಹಿತಿ: ಎನ್ಎಚ್ಎಸ್ನ (ಲಂಡನ್)ಹಿರಿಯ ಸರ್ಜನ್ ಮತ್ತು ವಿದ್ಯಾಧರ್ ಶೆಟ್ಟಿ