ಜನರು ನನ್ನನ್ನು ಕೇಳುತ್ತಲೇ ಇರುತ್ತಾರೆ, ಏನು ಮಾಡುವುದು? ಸರ್ಕಾರಕ್ಕೆ ಸಂಪನ್ಮೂಲಗಳಿಲ್ಲ. ಇಂದು, ನಿಗಮಗಳು ತುಂಬ ದೊಡ್ಡದಾಗಿವೆ. ಪ್ರತಿಯೊಂದು ಉದ್ಯಮವು ದೇಶದಲ್ಲಿ ಒಂದು ತಾಲ್ಲೂಕನ್ನು ತೆಗೆದುಕೊಂಡು ತರಬೇತಿ, ಶಿಕ್ಷಣ, ಆರೋಗ್ಯ ರಕ್ಷಣೆಯನ್ನು, ದಾನವಾಗಿ ಅಲ್ಲದೆ, ದೀರ್ಘಾವಧಿಯ ಹೂಡಿಕೆಯಾಗಿ ಸ್ಥಾಪಿಸಬಹುದು. ನಾನು ತೆಂಗಿನ ಮರವನ್ನು ಬೆಳೆಸಲು ಬಯಸಿದರೆ, ಏನನ್ನಾದರೂ ನೋಡುವ ಮೊದಲು ಎಂಟು ವರ್ಷ ಕಾಯುತ್ತೇನೆ. ನೀವು ಶಿಕ್ಷಣ, ಪೋಷಣೆ ಮತ್ತು ಇತರ ಅಂಶಗಳಲ್ಲಿ ಹೂಡಿಕೆ ಮಾಡಿದರೆ, ಅದು ಫಲ ನೀಡುವಂತೆ ಮಾಡಲು ಮಾರ್ಗಗಳಿವೆ. ಅದು ದೊಡ್ಡ ಪ್ರಮಾಣದಲ್ಲಿ ಫಲ ನೀಡದಿರಬಹುದು, ಆದರೆ ಅದನ್ನು ಸುಸ್ಥಿರವಾಗಿರಿಸಲು ಬೇಕಾದಷ್ಟು ಫಲವನ್ನು ನೀಡುತ್ತದೆ. ನೀವು ಇದನ್ನು ಮಾಡಿದರೆ, 10 ವರ್ಷಗಳಲ್ಲಿ ಅದ್ಭುತ ಮಾನವ ಸಂಪನ್ಮೂಲವನ್ನು ಹೊಂದಿರುತ್ತೀರಿ, ಅದು ನಿಮಗೆ ಸಮರ್ಪಿತವಾಗಿ ಮತ್ತು ನಿಷ್ಠೆಯಿಂದಿರುತ್ತದೆ. ಇದರಿಂದ ದುರುಪಯೋಗವಾಗದಂತೆ ಮತ್ತು ಶೋಷಣೆಯಾಗದಂತೆ, ಸರ್ಕಾರದಿಂದ ನಿಯಂತ್ರಿಸಬಹುದು. ಅದನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಕೆಲವು ಕಾನೂನುಗಳನ್ನು ರೂಪಿಸಬಹುದು.