

If America and China do not handle the situation properly, there could be a conflict between them: Sullivan
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಬಹು ನಿರೀಕ್ಷಿತ ಸಭೆಗೂ ಮುನ್ನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಸಂಘರ್ಷದ ಸಾಧ್ಯತೆಯಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಧವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 'ಎಪಿಇಸಿ(ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ) ನಾಯಕತ್ವ' ಸಭೆ ನಡೆಯಲಿದ್ದು, ಇದರ ನಡುವೆ ಬಿಡೆನ್ ಮತ್ತು ಜಿನ್‌ಪಿಂಗ್ ಭೇಟಿಯಾಗಲಿದ್ದಾರೆ.
ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆ ಪಾಲಿಸಬೇಕಾದ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಯುಎಸ್ ಅಧ್ಯಕ್ಷರಿಗೆ ಇದೊಂದು ಉತ್ತಮ ಅವಕಾಶ ಒದಗಿ ಬಂದಿದೆ. ರಾಜತಾಂತ್ರಿಕತೆಯ ಮೂಲಕ ನಾವು ನಿರ್ವಹಿಸಲು ಸಾಧ್ಯವಾಗದ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಇದಕ್ಕೆ ಉತ್ತಮ ವಾತಾವರಣ ನಿರ್ಮಿಸುವುದು ಚೀನಾದ ಜವಾಬ್ದಾರಿಯೂ ಆಗಿದೆ ಎಂದು ಸುಲ್ಲಿವಾನ್ ಹೇಳಿದರು.
ಅಮೇರಿಕಾ ಭದ್ರತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಬರುವ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಿದೆ. ಒಟ್ಟಾರೆ ಅಂತಿಮ ಫಲಿತಾಂಶವನ್ನು ಆಶಿಸುತ್ತೇವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರಕ್ಕೆ ಅಮೆರಿಕಾ ಬಾಗಿಲು ತೆರೆಯುತ್ತದೆ,ಇದರಿಂದ ನಾವು ಪರಸ್ಪರ ನಂಬಿಕೆ ಬರುವಂತಹ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸುಲ್ಲಿವನ್ ಹೇಳಿದರು.