More

    ಗಾಜಾ ಮೇಲಿನ ಹಿಡಿತ ಕಳೆದುಕೊಂಡ ಹಮಾಸ್​ ದಕ್ಷಿಣಕ್ಕೆ ಪರಾರಿ: ಇಸ್ರೇಲ್​ ರಕ್ಷಣಾ ಸಚಿವರ ಹೇಳಿಕೆ

    ಜೆರುಸಲೇಂ: ಯುದ್ಧ ಪೀಡಿತ ಗಾಜಾ ಮೇಲಿನ ನಿಯಂತ್ರಣವನ್ನು ಹಮಾಸ್​ ಉಗ್ರರ ಗುಂಪು ಕಡಿದುಕೊಂಡಿದೆ ಎಂದು ಇಸ್ರೇಲ್​ ರಕ್ಷಣಾ ಸಚಿವರು ಸೋಮವಾರ ಹಕ್ಕು ಸಾಧಿಸಿದ್ದಾರೆ.

    ಅ.7ರಂದು ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ಸುಮಾರು 5 ಸಾವಿರ ರಾಕೆಟ್​ಗಳಿಂದ ದಿಢೀರ್​ ದಾಳಿ ಮಾಡಿ, 1200ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಯಿತು. ಅಲ್ಲದೆ, 240ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಹಮಾಸ್​ ಮೇಲೆ ಇಸ್ರೇಲ್​ ನಡೆಸುತ್ತಿರುವ ರಕ್ತಸಿಕ್ತ ಪ್ರತೀಕಾರದ ದಾಳಿ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದು, ಹಮಾಸ್​ ನಿಯಂತ್ರಣದಲ್ಲಿದ್ದ ಗಾಜಾವನ್ನು ಇದೀಗ ಇಸ್ರೇಲ್​ ತನ್ನ ಕೈವಶ ಮಾಡಿಕೊಂಡಿದೆ.

    ಹಮಾಸ್​ ಗಾಜಾ ಮೇಲಿನ ಹಿಡಿತವನ್ನು ಕಡಿದುಕೊಂಡಿದ್ದು, ಉಗ್ರರೆಲ್ಲರು ದಕ್ಷಿಣದ ಕಡೆ ಕಾಲ್ಕಿತ್ತಿದ್ದಾರೆ. ಹಮಾಸ್​ ಅಡುಗುತಾಣಗಳನ್ನು ನಾಗರಿಕರು ಲೂಟಿ ಮಾಡುತ್ತಿದ್ದಾರೆ. ಅವರ ಸರ್ಕಾರದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಯಾವುದೇ ಸಾಕ್ಷ್ಯಗಳನ್ನು ನೀಡದೇ ರಕ್ಷಣಾ ಸಚಿವರು ತಿಳಿಸಿದ್ದಾರೆ.

    ಹಮಾಸ್ ನಡೆಸುತ್ತಿರುವ ಗಾಜಾ ಪಟ್ಟಿಯಲ್ಲಿರುವ ಡೆಪ್ಯುಟಿ ಆರೋಗ್ಯ ಸಚಿವ ಯೂಸೆಫ್ ಅಬು ರಿಶ್, ವಿದ್ಯುತ್​ ಕೊರತೆಯಿಂದಾಗಿ ಉತ್ತರ ಭಾಗದಲ್ಲಿರುವ ಬಹುತೇಕ ಆಸ್ಪತ್ರೆಗಳಲ್ಲಿ ಯಾವುದೇ ಸೇವೆಯಿಲ್ಲ ಎಂದು ಹೇಳಿದರು. ಗಾಜಾದ ಅತಿದೊಡ್ಡ ಅಲ್-ಶಿಫಾ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಏಳು ಶಿಶುಗಳು ಮತ್ತು 27 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಬು ರಿಶ್ ಹೇಳಿದರು.

    ಇನ್ನೂ ಗಾಜಾ ಸಂಪೂರ್ಣ ಇಸ್ರೇಲಿ ಮುತ್ತಿಗೆಗೆ ಒಳಗಾಗಿದ್ದು, ಆಹಾರ, ಇಂಧನ ಮತ್ತು ಇತರ ಮೂಲಭೂತ ಸರಬರಾಜುಗಳ ತೀವ್ರ ಕೊರತೆಯಿದೆ. ಪ್ಯಾಲೆಸ್ತೀನ್ ಪ್ರಧಾನಿ ಮೊಹಮ್ಮದ್ ಶತಾಯೆಹ್ ಸೋಮವಾರ ಯುರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆಗೆ ಗಾಜಾಕ್ಕೆ “ಪ್ಯಾರಾಚೂಟ್ ನೆರವು” ನೀಡುವಂತೆ ಕರೆ ನೀಡಿದ್ದಾರೆ.

    ಇದರ ನಡುವೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಗಾಜಾದಲ್ಲಿ ಹಮಾಸ್ ಹಿಡಿದಿರುವ ಒತ್ತೆಯಾಳುಗಳನ್ನು ಮುಕ್ತಗೊಳಿಸುವ ಒಪ್ಪಂದವನ್ನು ಪ್ರಾರಂಭಿಸಬಹುದು ಎಂದು ಹೇಳಿದರು, ಆದರೆ ಸಂಭಾವ್ಯ ಯೋಜನೆಯನ್ನು ಹಾಳುಮಾಡುವ ಭಯದಿಂದ ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದರು. (ಏಜೆನ್ಸೀಸ್​)

    ನ್ಯೂಜಿಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಮುನ್ನ ಭಾರತಕ್ಕೆ ನೆನಪಿರಲಿ 2015, 2019ರ ವಿಶ್ವಕಪ್​ ಎಡವಟ್ಟು!

    ಡಿಸೆಂಬರ್​ಗೆ ಜಿಪಿಎಸ್ ಕಡ್ಡಾಯ: ಸಾರ್ವಜನಿಕ ಸೇವೆಯ ಖಾಸಗಿ ಬಸ್, ಟ್ಯಾಕ್ಸಿ, ಗೂಡ್ಸ್ ವಾಹನಗಳಿಗೆ ಅನ್ವಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts