More

    ಧರಿಸೋ ಬಟ್ಟೆ ನೋಡಿ ಯಾರನ್ನೂ ಜಡ್ಜ್​ ಮಾಡಬೇಡಿ; ನೆಟ್ಟಿಗರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಅನಿತಾ ಭಟ್​

    ಬೆಂಗಳೂರು: ನಟಿ ಅನಿತಾ ಭಟ್​ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತ ಸುದ್ದಿಯ ಜತೆಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಅವರು ಹಾಕಿದ ಒಂದು ಪೋಸ್ಟ್​ ಸದ್ಯ ಸುದ್ದಿಯಲ್ಲಿದೆ. ಮೊನ್ನೆ ಬೆಂಗಳೂರಿನಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬಾಲ್ಕನಿಯಲ್ಲಿ ನಿಂತು ಫೋಟೋವೊಂದಕ್ಕೆ ಪೋಸ್​ ನೀಡಿದ್ದರು. ಅದಕ್ಕೆ ಮಳೆ ಎಂಬ ಕ್ಯಾಪ್ಶನ್​ ಕೊಟ್ಟು ಟ್ವಿಟರ್​ಗೂ ಅಪ್​ಲೋಡ್​ ಮಾಡಿದ್ದರು. ಆ ಫೋಟೋಕ್ಕೆ ಟ್ವಿಟಿಗರು ಬೇರೆ ಬೇರೆ ರೀತಿಯಲ್ಲಿಯೇ ಕಮೆಂಟ್​ ಮಾಡಿದ್ದರು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅನಿತಾ, ಹಾಗೆ ಕಮೆಂಟಿಸುವವರಿಗೆ ಮತ್ತೊಂದು ಮಗದೊಂದು ಟ್ವಿಟ್​ ಮೂಲಕ ಉತ್ತರ ಕೊಟ್ಟಿದ್ದಾರೆ.
    ಹೌದು, ಮೋಡ ಕವಿದ ವಾತಾವರಣ, ನಿಮ್ಮ ಹಾಟ್​ ಲುಕ್​ಗೆ ಮೋಡ ಕರಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಕಮೆಂಟ್​ ಮಾಡಿದರೆ, ಇನ್ನು ಕೆಲವರು ಮಿತಿ ಇರಲಿ ನಿಮ್ಮ ಮೈಮಾಟಕ್ಕೆ ಎಂದೂ ಹೇಳಿದ್ದಾರೆ. ಈ ಕಮೆಂಟುಗಳ ಹರಿವು ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದು, ಇದೆಲ್ಲದಕ್ಕೆ ಉತ್ತರ ಎಂಬಂತೆ ಭಾನುವಾರ ಮತ್ತೆರಡು ಫೋಟೋ ಹಾಕಿದ್ದಾರೆ. ‘ಹೆದ್ರಕೊಂಡು ಬದುಕೋದಾದ್ರೆ ಭೂಮಿಯಿಂದಾನೆ ಹೋಗಿಬಿಡ್ತಿದ್ದೆ. ಬಟ್ಟೆಯಿಂದ ವ್ಯಕ್ತಿಯನ್ನೂ ಅಳೆಯೋ ಸಮಾಜ ನಮ್ಮದು’ ಎಂದು ಪರೋಕ್ಷವಾಗಿ ಫೋಟೋ ಬಗ್ಗೆ ಮಾತನಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ನೋಡುವ ಮನಸ್ಥಿತಿ ಮತ್ತು ಅವರ ಮನೋಭಾವನೆಯನ್ನು ಅವರು ಮಾಡುವ ಕಮೆಂಟ್​ಗಳು ಮಾತನಾಡುತ್ತವೆ. ಇದು ಸರಿಯಲ್ಲ ಎಂದೂ ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts