

ಕೋಟ: ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಅನಿಶ ಖಾರ್ವಿ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಪ್ರವೀಣ್ ಡಿ.ಖಾರ್ವಿ, ಕಾರ್ಯದರ್ಶಿಯಾಗಿ ಸಂದೀಪ ಎಸ್.ಖಾರ್ವಿ, ಜತೆ ಕಾರ್ಯದರ್ಶಿಯಾಗಿ ವಿಕೇಶ್ ಬಂಗೇರ, ಕೋಶಾಧಿಕಾರಿಯಾಗಿ ಶರತ್ ಖಾರ್ವಿ ಆಯ್ಕೆಯಾದರು. ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ, ಸದಸ್ಯರಾದ ಸಂದೀಪ ಬಿ.ಖಾರ್ವಿ, ಅನಿಲ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.