ಲಾಕ್​ಡೌನ್​ ಕರ್ತವ್ಯದ ಒತ್ತಡ, ಆದರೂ ನಿಲ್ಲಲಿಲ್ಲ ಪ್ರಾರ್ಥನೆ; ರಸ್ತೆಯಲ್ಲೇ ನಮಾಜ್​ ಮಾಡಿದ ಪೊಲೀಸ್​ ಅಧಿಕಾರಿ

namaz
Published on

ಗುಂಟೂರು: ಕೋವಿಡ್​ 19 ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿದೆ. ಲಾಕ್​ಡೌನ್​ ಅವಧಿಯಲ್ಲಿ ಜನರು ಅನಗತ್ಯವಾಗಿ ತಿರುಗದಂತೆ ತಡೆಯಲು ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗೆ ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಧಾರ್ಮಿಕ ನಂಬಿಕೆಯಂತೆ ರಸ್ತೆಯಲ್ಲೇ ನಮಾಜ್​ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಗುಂಟೂರಿನ ಲಾಲಾಪೇಟ್​ ಪೊಲೀಸ್​ ಠಾಣೆಯಲ್ಲಿ ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಆಗಿರುವ ಕರೀಮುಲ್ಲಾ ನಮಾಜ್​ ಮಾಡಿದವರು.

ಇದು ರಂಜಾನ್​ ಮಾಸವಾಗಿದ್ದು, ಅವರು ಕರ್ತವ್ಯದ ನಡುವೆಯೂ ಬೆಳಗ್ಗೆಯಿಂದ ಉಪವಾಸ ಮಾಡಿದ್ದರು. ಸಂಜೆಯಾಗುತ್ತಲೇ ಅವರು ರಸ್ತೆಯ ನಡುವೆ ನಮಾಜ್​ ಮಾಡಲು ಮುಂದಾದರೆ, ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಇತರೆ ಧರ್ಮದ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ನಮಾಜ್​ಗೆ ಅಡ್ಡಿಯಾಗದಂತೆ ಎಚ್ಚರವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net