ಒಳಲಂಕೆಯಲ್ಲಿ ಅನಂತ ಚತುರ್ದಶಿ ಉತ್ಸವ

chaturthi
Published on

ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ(ನೋಂಪಿ) ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ದೇಗುಲದಲ್ಲಿ ವಿಶೇಷ ಪ್ರಾರ್ಥನೆ, ಪಲ್ಲಕ್ಕಿಯಲ್ಲಿ ನೋಂಪಿ ಅನಂತವ್ರತದ ಕಲಶದೊಂದಿಗೆ ಶಾಂಭವಿ ನದಿಯಲ್ಲಿ ತೀರ್ಥಸ್ನಾನ, ಗಂಗಾಪೂಜೆ ನಡೆಸಿ ಬಳಿಕ ಕಲಶ ಪೂರಣ, ವಿಶೇಷ ಪೂಜೆ, ಪಲ್ಲಕ್ಕಿಯಲ್ಲಿ ಪೇಟೆ ಸವಾರಿ, ಮಧ್ಯಾಹ್ನ ಅನಂತ ವ್ರತ ಪೂಜೆ ನಡೆಯಿತು.

ರಾತ್ರಿ ಮಹಾ ನೈವೇದ್ಯ, ಮಂಗಳಾರತಿ, ದರ್ಶನ ಸೇವೆ, ಕಥಾ ಶ್ರವಣ, ರಾತ್ರಿ ಪೂಜೆ ನೆರವೇರಿದವು. ಕ್ಷೇತ್ರದ ಅರ್ಚಕ ವೃಂದ, ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net