

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಗೆ ಕಡಿವಾಣ ಹಾಕಲು ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಸಲಹೆ ವೈರಲ್ ಆಗುತ್ತಿದೆ.
ದೆಹಲಿಯು ವಾಯು ಮಾಲಿನ್ಯದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ತ್ಯಾಜ್ಯವನ್ನು ಸುಡುವುದೇ ಈ ಮಾಲಿನ್ಯಕ್ಕೆವೊಂದು ಕಾರಣವಗಾಗಿದೆ. ಈ ಹಿನ್ನೆಲೆಯಲ್ಲಿ ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ.
ಆನಂದ್ ಮಹೀಂದ್ರಾ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ 'ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಪುನರುತ್ಪಾದಕ( ನೈಸರ್ಗಿಕ ಕೃಷಿ) ಕೃಷಿಗೆ ಅವಕಾಶ ನೀಡಬೇಕು. ಇದು ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಬೆಳೆ ತ್ಯಾಜ್ಯವನ್ನು ಲಾಭದಾಯಕ ಪರ್ಯಾಯವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ @naandi_india @VikashAbraham ಸಹಾಯ ಮಾಡಲು ಸಿದ್ಧರಿದ್ದಾರೆ. ಮಾಡೋಣ' ಎಂದು ಕೆಲವರನ್ನು ಟ್ಯಾಗ್ ಮಾಡಿದ್ದಾರೆ.
ಮಣ್ಣು ಆರೋಗ್ಯಕರವಾಗಿದ್ದಾಗ, ಅದು ಹೆಚ್ಚು ಆಹಾರ ಮತ್ತು ಪೌಷ್ಟಿಕಾಂಶವನ್ನು ಉತ್ಪಾದಿಸುತ್ತದೆ, ಹೆಚ್ಚು ಇಂಗಾಲವನ್ನು ಸಂಗ್ರಹಿಸುತ್ತದೆ ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಕೃಷಿಯು ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಭಾರೀ ಯಂತ್ರೋಪಕರಣಗಳು ಮತ್ತು ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಒಳಗೊಂಡಿದೆ. ಇದು ಮಣ್ಣಿನ ಅವನತಿ ಮತ್ತು ನಷ್ಟಕ್ಕೆ ಕಾರಣವಾಗಿದೆ. ಯುಎನ್ ಪ್ರಕಾರ, ಜಾಗತಿಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಮೂರನೇ ಒಂದು ಭಾಗವು ಕೃಷಿ ಮತ್ತು ಹಾನಿಗೊಳಗಾದ ಮಣ್ಣಿನಿಂದಾಗಿ ಪರಿಸರವನ್ನು ದುರ್ಬಲಗೊಳಿಸುತ್ತದೆ.
ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾಯು ಮಾಲಿನ್ಯದ ಸ್ಥಿತಿಗತಿ ದಿನಕ್ಕೆ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆ ಮಿತಿ ಮೀರಿರುವ ದೆಹಲಿ ಮಾಲಿನ್ಯದ ಕುರಿತು ಕಳವಳವನ್ನೂ ವ್ಯಕ್ತಪಡಿಸಿದೆ. ಇದರಿಂದ ಜನ ಜೀವನದ ಮೇಲೆ ಸದ್ದಿಲ್ಲದೇ ಪರಿಣಾಮ ಬೀರುತ್ತಿದೆ. ದೆಹಲಿ-ಎನ್ಸಿಆರ್ನಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ಶಾಲಾ ರಜೆಗಳನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ನವೆಂಬರ್ 13ರಿಂದ 20ರವರೆಗೆ ಸಮ-ಬೆಸ ಪದ್ಧತಿ ಜಾರಿಯಾಗಲಿದೆ.