ಉತ್ತಮ ಆರೈಕೆಗಾಗಿ 200 ರೂ.ಗೆ ಮಗು ಮಾರಾಟ ಮಾಡಿದ ವೃದ್ಧೆ!; ತಡವಾಗಿ ಬೆಳಕಿಗೆ ಬಂದ ಹೃದಯವಿದ್ರಾವಕ ಘಟನೆ | Heart Breaking

dk - 2025-03-20T193148.333
Published on

Heart Breaking : ವೃದ್ಧ ಮಹಿಳೆಯೊಬ್ಬರು ಏಳು ವರ್ಷದ ಮಗುವನ್ನು ಸಾಕಲು(ಆರೈಕೆ) ಸಾಧ್ಯವಾಗದ ಕಾರಣ ಕೇವಲ 200 ರೂ.ಗೆ ಮಾರಾಟ ಮಾಡಿರುವ ಹೃದಯವಿದ್ರಾವಕ ಘಟನೆ ಒಡಿಸ್ಸಾದ ಬದ್ಲಿಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳ ರಕ್ಷಣಾಧಿಕಾರಿಯೊಬ್ಬರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

ಕೂಡಲೇ ಮಗುವನ್ನು ರಕ್ಷಿಸಿದ ಪೊಲೀಸರು, ಮಗುವನ್ನು ಸರ್ಕಾರಿ ಆರೈಕೆ ಕೆಂದ್ರಕ್ಕೆ ಕಳುಹಿಸಿದ್ದಾರೆ. ಮಾಂಡ್​ ಸೂರೇನ್​ ಎಂಬ ವೃದ್ಧ ಮಹಿಳೆ ಮಗುವನ್ನು ಮಾರಿದಾಕೆ ಎಂದು ಗುರುತಿಸಲಾಗಿದೆ.

ಪರಿಸ್ಥಿತಿ ಚಿಂತಾಜನಕ..!

65 ವರ್ಷದ ಸೋರೆನ್ ಅವರಿಗೆ ವಸತಿ ಇಲ್ಲ, ಭೂಮಿಯೂ ಇರಲಿಲ್ಲ ಮತ್ತು ಅವರಿಗೆ ಸರ್ಕಾರಿ ನೆರವು ಸಿಗುತ್ತಿರಲಿಲ್ಲ. ಅವರ ಪತಿ ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಅವರ ಮಗ ನಾಪತ್ತೆಯಾಗಿದ್ದು, ಸೊಸೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೊರೆನ್ ಯಾವುದೇ ಬೆಂಬಲವಿಲ್ಲದೆ ರಾಯ್ಪಾಲ್ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ತಮ್ಮ ಮೊಮ್ಮಗನನ್ನು ನೋಡಿಕೊಳ್ಳಲು ಬೇಡಿಕೊಂಡಿದ್ದಾರೆ. ಅವರ ಆರೋಗ್ಯ ಹದಗೆಟ್ಟಂತೆ, ಅವನಿಗೆ ಪೋಷಣೆ ನೀಡಲು ಅವರು ಹೆಣಗಾಡಿದರು, ಇದು ಮಗುವನ್ನು ಅನಿವಾರ್ಯವಾಗಿ ಬೇರೆಯವರಿಗೆ ನೀಡುವ ಹಂತಕ್ಕೆ ಹೋಗಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net