More

  ಚಿಣ್ಣರ ಕುಂಚದಲ್ಲಿ ಮೂಡಿದ ಪರಿಸರ ಚಿತ್ತಾರ

  ಕೋಲಾರ: ಸಮವಸ್ತ್ರಧಾರಿ ಚಿಣ್ಣರ ಕಲರವ, ಸೀಸದಕಡ್ಡಿ ಹಿಡಿದು ತನ್ನದೇ ಬಣ್ಣದ ಲೋಕವನ್ನು ಸೃಷ್ಟಿಸುವಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳು, ಬಗೆಬಗೆಯ ಚಿತ್ರ ಬರಹಗಳಲ್ಲಿ ಕಂಡ ಪರಿಸರ, ಲಿತಾಂಶಕ್ಕಾಗಿ ಕಾದ ಕುತೂಹಲ, ಗೆದ್ದವರ ಸಂಭ್ರಮ… ಉಳಿದವರಿಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಖುಷಿ…!

  ಹೌದು, ಈ ಸಂಭ್ರಮಕ್ಕೆ ಸಾಯಾಗಿದ್ದು ನಗರದ ಕೋಲಾರದ ಸ್ಕೌಟ್ಸ್​ ಭವನ. ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ನಂ.1 ದಿನಪತ್ರಿಕೆ ವಿಜಯವಾಣಿಯಿಂದ ಭಾರತ್​ ಸ್ಕೌಟ್​ ಮತ್ತು ಗೈಡ್​ ಸಂಸ್ಥೆ, ರವಿ ವಿದ್ಯಾಸಂಸ್ಥೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಗಳವಾರ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸ್ಕೌಟ್​ ಭವನದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿವಿಧ ಶಾಲೆಯ 1 ರಿಂದ 9ನೇ ತರಗತಿಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  ಚಿಣ್ಣರ ಕುಂಚದಲ್ಲಿ ಮೂಡಿದ ಪರಿಸರ ಚಿತ್ತಾರ
  ಚಿತ್ರ ಬಿಡಿಸುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

  ಸ್ಪರ್ಧೆಯ ವಿಷಯಗಳು
  ಸ್ಪರ್ಧೆಯನ್ನು ಪರಿಸರ, ಪಟ್ಟಣ ಮತ್ತು ಪಾರ್ಕ್​, ನನ್ನ ಕನಸಿನ ಭೂಮಿ ಎಂಬ ಮೂರು ವಿಷಯಗಳನ್ನು ಪ್ರತ್ಯೇಕ ವಿಭಾಗಗಳಿಗೆ ನೀಡಲಾಗಿತ್ತು. 1 ರಿಂದ 4ನೇ ತರಗತಿವರೆಗೆ ಸಬ್​ ಜೂನಿಯರ್​, 5 ರಿಂದ 7ರವರೆಗೆ ಜೂನಿಯರ್​ ಮತ್ತು 8 ರಿಂದ 9ರ ವರೆಗೆ ತನಕ ಸೀನಿಯರ್​ ಹೀಗೆ ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು, ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಆಯಾ ಶಾಲೆಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್​.ಸುರೇಶ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎ.ಡಿ.ಸಿ. ವಿಠ್ಠಲ್​ರಾವ್​, ಗ್ರೀನ್​ ವಾರಿಯರ್ಸ್​ ಹೂವಹಳ್ಳಿ ನಾಗರಾಜ್​, ಸ್ಕೌಟ್ಸ್​ ಮತ್ತು ಗೈಡ್​ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎನ್​. ಉಮಾದೇವಿ ಉಪಸ್ಥಿತರಿದ್ದರು.

  ಭಾಗವಹಿಸಿದ ಶಾಲೆಗಳು:
  ಕೋಲಾರ ನಗರದ ಆರ್​.ವಿ.ಇಂಟರ್​ನ್ಯಾಷನಲ್​ ಸ್ಕೂಲ್​, ಆರ್​.ಎಲ್​.ಜಾಲಪ್ಪ ಸ್ಕೂಲ್​, ಜೈನ್​ ಇಂಟರ್​ನ್ಯಾಷನಲ್​ ಸ್ಕೂಲ್​, ಮಹಿಳಾ ಸಮಾಜ, ಬಿ.ಎಂ.ಎಸ್​.ಶಾಲೆ, ಬಾಲ್ಡ್​ವಿನ್​ ಸ್ಕೂಲ್​, ಗೆಲಾಕ್ಸಿ ಪಬ್ಲಿಕ್​ ಶಾಲೆಯಿಂದ 250 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

  • ಪರಿಸರ ಸಂರಕ್ಷಣೆ ನಿರಂತರವಾಗಿರಲಿ:
   ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಪರಿಸರ ವಿಜ್ಞಾನ ಲೇಖಕ ಎಚ್​.ಎ.ಪುರುಷೋತ್ತಮರಾವ್​, ಪರಿಸರಕ್ಕೆ ಗಿಡ-ಮರ ಮಾತ್ರ ಸೇರುವುದಿಲ್ಲ. ಬೆಟ್ಟ ಗುಡ್ಡ ಹಾಗೂ ನಮ್ಮ ಸುತ್ತಲೂ ಇರುವ ಪ್ರಾಣಿ, ಪಕ್ಷಿ ಭೂಮಿ ಎಲ್ಲವೂ ಪರಿಸರವಾಗಿದೆ. ಜೀವ ಮತ್ತು ನಿರ್ಜೀವಿಯ ಮಧ್ಯೆ ಒಂದಕ್ಕೊಂದು ನಿಕಟ ಸಂಬಂಧವಿದೆ. ಗಿಡ, ಮನುಷ್ಯ, ಪ್ರಾಣಿ, ಜೀವ ಒಂದೊಂದು ಬೇರೆಯಾದರೂ ಅವುಗಳ ಆಂತರಿಕ ಸಂಬಂಧ ಒಂದೇ ಆಗಿರುತ್ತದೆ. ಇದೇ ಪರಿಸರ. ಪರಿಸರಕ್ಕಾಗಿ ವರ್ಷಕ್ಕೊಮ್ಮೆ ದಿನಾಚರಣೆ ಮಾಡಿ, ಕೈತೊಳೆದುಕೊಳ್ಳುವುದರಿಂದ ಪ್ರಯೋಜನವಿಲ್ಲ. ಪರಿಸರ ಉಳಿಸುವ ಕೆಲಸ ನಿರಂತರವಾಗಿ ಆಗಬೇಕಾಗಿದೆ. ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡಿಸುವ ಕೆಲಸವನ್ನು ವಿಜಯವಾಣಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
  • ನೀರು ಮಿತವಾಗಿ ಬಳಸಿರಿ:
   ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಡಾ.ಕೆ.ರಾಜು ಮಾತನಾಡಿ, ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ನೀರು ಮಿತವಾಗಿ ಬಳಸಬೇಕು. ಪ್ಲಾಸ್ಟಿಕ್​ ನಿಷೇಧಿಸಬೇಕು. ಪರಿಸರವನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಮ್ಲಜನಕಕ್ಕಾಗಿ ಪರಿದಾಡಬೇಕಾಗುತ್ತದೆ. ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಅದನ್ನು ಮರವಾಗಿ ಬೆಳೆಸಿದಾಗ ಪ್ರತಿಯೊಬ್ಬರಿಗೂ ಆಮ್ಲಜನಕ ಸಿಗುತ್ತದೆ. ಈ ಕೆಲಸವನ್ನು ಮಕ್ಕಳಿಂದಲೇ ಮುಂದುವರಿಸುವ ಕೆಲಸವಾಗಬೇಕಿದೆ ಎಂದರು.
  • ಕಡಿದ ಮರಕ್ಕೆ ಎರಡು ಗಿಡ ನೆಡಿ:
   ರವಿ ವಿದ್ಯಾಸಂಸ್ಥೆಯ ನಿರ್ದೇಶಕ ನರೇಶ್​ಬಾಬು ಮಾತನಾಡಿ, ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ಣುಡಿ ಇತ್ತು. ಆದರೆ ಈಗ ಅಭಿವೃದ್ಧಿ ಹೆಸರಿನಲ್ಲಿ ಅದನ್ನು ಕಡಿದು ಕಟ್ಟಡಗಳು ನಿಮಾರ್ಣಗೊಂಡಿವೆ. ಕಡಿದ ಮರಕ್ಕೆ ಎರಡು ಮರವನ್ನು ಬೇರೆಡೆ ಬೆಳೆಸಿದ್ದರೆ ಆಮ್ಲಜನಕಕ್ಕಾಗಿ ಕೊರತೆ ಆಗುತ್ತಿರಲಿಲ್ಲ. ಕರೊನಾ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ಪರಿದಾಡುವಂತಹ ಪರಿಸ್ಥಿತಿ ಉಂಟಾಯಿತು. ಇದನ್ನು ಅರ್ಥ ಮಾಡಿಕೊಂಡು ಈಗಿನಿಂದಲೇ ಗಿಡ-ಮರಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.
  See also  ಲಿಫ್ಟ್​ ಕೊಡೋ ನೆಪದಲ್ಲಿ ಆ ವಿದ್ಯಾರ್ಥಿನಿ ಬಳಿ ಕೇಳಬಾರದ್ದನ್ನು ಕೇಳಿದ ಟೆಕ್ಕಿ!

  ಊಟದ ವ್ಯವಸ್ಥೆ, ಸಸಿ ವಿತರಣೆ: ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ನಂತರ ಎಲ್ಲ ವಿದ್ಯಾರ್ಥಿಗಳು ಊಟ ಸವಿದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಸಿ ವಿತರಿಸಲಾಯಿತು.

  ಪ್ರಶಸ್ತಿ ವಿಜೇತರು :
  ಸೀನಿಯರ್​ ವಿಭಾಗ
  ಪ್ರಥಮ: ನೂರ್​ ಉಲ್​ ಇನ್​, ಜೈನ್​ ಇಂಟರ್​ನ್ಯಾಷನಲ್​ ಶಾಲೆ
  ದ್ವೀತಿಯ: ತಾನ್ಫಿಯಾ ಬಾನು, ರವಿ ಇಂಟರ್​ನ್ಯಾಷನಲ್​ ಶಾಲೆ
  ತೃತಿಯ: ಕೆ.ಬಿ. ತ್ರಿಷಿಕಾ, ಜೈನ್​ ಇಂಟರ್​ನ್ಯಾಷನಲ್​ ಶಾಲೆ

  ಜೂನಿಯರ್​ ವಿಭಾಗ
  ಪ್ರಥಮ: ಟಿ.ಎಂ.ಪರಿಣಿತ, ಜೈನ್​ ಇಂಟರ್​ನ್ಯಾಷನಲ್​ ಶಾಲೆ
  ದ್ವೀತಿಯ: ದನಿಯಾ ತಾಜ್​, ರವಿ ಇಂಟರ್​ನ್ಯಾಷನಲ್​ ಶಾಲೆ
  ತೃತೀಯ: ಬಿ.ಎ.ರಾಜಸಿಗೌಡ, ಆರ್​.ಎಲ್​.ಜಾಲಪ್ಪ ಶಾಲೆ

  ಸಬ್​ ಜೂನಿಯರ್​ ವಿಭಾಗ
  ಪ್ರಥಮ: ಫರಾಜ್​ ಖಾನ್​, ಆರ್​.ಎಲ್​.ಜಾಲಪ್ಪ ಶಾಲೆ
  ದ್ವೀತಿಯ: ಹಿಂದುಜ, ಬಿ.ಎಂ.ಎಸ್​.ಶಾಲೆ
  ತೃತೀಯ: ಎಂ.ಆರ್​. ಜಸ್ವಿತಾ ಗೌತಮ್​, ಮಹಿಳಾ ಸಮಾಜ

  ಚಿಣ್ಣರ ಕುಂಚದಲ್ಲಿ ಮೂಡಿದ ಪರಿಸರ ಚಿತ್ತಾರ
  ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಣೆ ಮಾಡುತ್ತಿರುವುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts