ಅಮೃತ್​ಪಾಲ್​ ಸಿಂಗ್​ ಸಹಚರನ ಬಂಧನ; ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು

amritpal singh
Published on

ಅಮೃತಸರ: ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್ ಸಹಚರ ಪಪಲ್​ಪ್ರೀತ್​ ಸಿಂಗ್​ನನ್ನು ಪಂಜಾಬ್​ ಪೊಲೀಸರು ಹೋಶಿಯಾರ್​ಪುರದಲ್ಲಿ ಬಂಧಿಸಿದ್ದಾರೆ.

ಕಳೆದ ತಿಂಗಳು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಮೃತ್​ಪಾಲ್​ ಸಿಂಗ್​ ಹಾಗೂ ಆತನ ಸಹಚರ ಪಪಲ್​ಪ್ರೀತ್​ ಸಿಂಗ್​ ಪರಾರಿಯಾಗಿದ್ದರು ಮತ್ತು ಸ್ಥಳಗಳನ್ನು ಬದಲಾಯಿಸುತ್ತಿದ್ದರು.

ಜಂಟಿ ಕಾರ್ಯಾಚರಣೆ

ಖಾಲಿಸ್ತಾನ ಪ್ರತ್ಯೇಕವಾದಿ ಅಮೃತ್​ಪಾಲ್​ ಸಿಂಗ್​ ಕಳೆದ ತಿಂಗಳ ತನ್ನ ಸಹಚರನೊಂದಿಗೆ ಜಾಗವನ್ನು ಬದಲಾಯಿಸುತ್ತಾ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದರು.

ಇವರಿಬ್ಬರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದ ಪಂಜಾಬ್​ ಪೊಲೀಸರು ದೆಹಲಿ ಗುಪ್ತಚರ ಇಲಾಖೆಯ ಸಹಾಯದೊಂದಿಗೆ ಪಪಲ್​ಪ್ರೀತ್​ ಸಿಂಗ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮುಂದುವರೆದ ಶೋಧ

ಇತ್ತ ಸಹಚರ ಪಪಲ್​ಪ್ರೀತ್​ ಸಿಂಗ್​ನನ್ನು ಬಂಧಿಸಿರುವ ಪೊಲೀಸರು ಅಮೃತ್​ಪಾಲ್​ ಸಿಂಗ್​ಗಾಗಿ ಶೋಧ ಕಾರ್ಯ ಮುಂದುವರೆಸಿದ್ದು ಶೀಘ್ರದಲ್ಲೇ ಬಂಧಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net